ಕ್ಷೇತ್ರ ಪೀಡೆ ಸಮೀಕ್ಷೆ ಮೂಲಕ ರೈತರ ಹೊಲಗಳಿಗೆ ಕೃಷಿ ಅಧಿಕಾರಿಗಳ ಬೇಟಿ

ಶಹಾಬಾದ:ನ.19:ನಗರದ ಸಂಪರ್ಕ ಕೇಂದ್ರದ ವಲಯದ ದೇವನ ತೆಗನೂರ,ಭಂಕೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 2022-23ನೇ ಸಾಲಿನ ಕ್ಷೇತ್ರ ಪೀಡೆ ಸಮೀಕ್ಷೆ ಮೂಲಕ ಕೃಷಿ ಅಧಿಕಾರಿ ರವೀಂದ್ರಕುಮಾರ ಹಾಗೂ ಕೃಷಿ ವಿಜ್ಞಾನಿ ಪ್ರವೀಣ ಅವರು ಹೊಲಗಳಿಗೆ ಬೇಟಿ ನೀಡಿ ಕೀಟ/ರೋಗ ಬಾಧೆ ಮತ್ತುಗಳ ಹತೋಟಿಯ ಕುರಿತು ರೈತರಿಗೆ ಮಾಹಿತಿ ನೀಡಿದರು.

ಈಗಾಗಲೇ ತೊಗರಿ ಸಂಪೂರ್ಣವಾಗಿ ಹೂ ಮೊಗ್ಗು ಬಿಟ್ಟಿದೆ. ಇಂತಹ ಸಂದರ್ಭದಲ್ಲಿ ಸಹಜವಾಗಿ ಕೀಟಗಳ ಹಾವಳಿಯೂ ಹೆಚ್ಚಾಗುತ್ತಿರುತ್ತದೆ. ಅತೀಯಾದ ಮಳೆಯಿಂದಾಗಿ ಅಲಲ್ಲಿ ನೀರು ನಿಂತು ಹೊದ ಭೂಮಿಯಲ್ಲಿ ಪೈಟೊಪತ್ತೊರ ಬಾದೆಯಿಂದ ನೆಟೆ ರೋಗ ಕಂಡುಬಂದಿದೆ.

ಸಮಗ್ರ ನಿರ್ವಹಣೆಗಾಗಿ ತೊಗರಿಯ ತುದಿ ಜೀಡಿಗಟ್ಟುವ ಬಾದೆ ಕಂಡು ಬಂದರೆ ರೈತರು ಆತಂಕ ಕೊಳಗಾಗಬೆಡಿ. ಎಲ್ಲಿ ಅದರ ಬಾದೆ ಹೆಚ್ಚು ಕಂಡಲ್ಲಿ ರೈತರು ಈ ಕೆಳಗೆ ತಿಳಿಸಿದ ಕೀಟ ನಾಶಕಗಳಾದ ಪ್ರೋಪೆನೋಫಾಸ್ 50 ಇ.ಸಿ. 2.0ಮಿ.ಲಿ. ಜೊತೆಗೆ 0.5 ಮಿ.ಲಿ. ಡಿ.ಡಿ.ವಿ.ಪಿ (ನುವಾನ) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಎರಡನೇ ಸಿಂಪರಣೆಯಾಗಿ : ರೈನಾಕ್ಸಿಪೈರ 0.15 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ 60 ಮಿ.ಲೀ. ಪ್ರತಿ ಎಕರೆಗೆ ಬರುವಂತೆ ಅಥವಾ ಎಮಾಮ್ಕೆಟಿನ್ ಬೆಂಜೊಯಟ್ 0.2ಗ್ರಾಂ (ಎಕರೆಗೆ 80 ಗ್ರಾಂ) ಅಥವಾ ಶೇಕಡಾ 5ರ ಬೇವಿನ ಬೀಜದ ಕಷಾಯ ಅಥವಾ ಮೆಣಸಿನಕಾಯಿ (0.5%) ಮತ್ತು ಬೆಳ್ಳುಳ್ಳಿ (0.25%) ಕಷಾಯ ಸಿಂಪಡಿಸಬೇಕು.

ಕಷಾಯ ತಯಾರಿಸುವ ವಿಧಾನ : 5 ಕಿಲೋ ಪುಡಿ ಮಾಡಿದ ಬೇವಿನ ಬೀಜವನ್ನು ಬಟ್ಟೆಯಲ್ಲಿ ಕಟ್ಟಿ 100 ಲೀ ನೀರಿನಲ್ಲಿ 10 ಗಂಟೆಗಳ ಕಾಲ ನೆನೆಸಿಟು ದ್ರಾವಣ ತೆಗೆಯಿರಿ. ಈ ದ್ರಾವಣಕ್ಕೆ 25 ಗ್ರಾಂ ಸೋಪಿನಪುಡಿಯನ್ನು 100 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೇವಿನ ಬೀಜ ಸಿಗದಿದ್ದಲ್ಲಿ ಬೇವಿನ ಬೀಜ ಮೂಲದ ಕೀಟನಾಶಕವನ್ನು (1500ಪಿಪಿಎಮ್) 3 ಮಿ.ಲೀ./ಲೀ ನೀರಿಗೆ ಬೆರೆಸಿ ಸಿಂಪಡಿಸಿ. ತೊಗರಿಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆಗೆ ಎಲೆ, ದೇಟು ಹಾಗೂ ಹೂವಿನ ಮೇಲೆ ಸಣ್ಣ ಗೋಲಾಕರ ಕಂದು ಬಣ್ಣದ ಚುಕ್ಕೆ ಗಳು ಕಾಣಿಸಿಕೊಳ್ಳುವುದರಿಂದ ಮೊಗ್ಗು ಹಾಗೂ ಹೂ ಉದುರುತ್ತವೆ. ಉಷ್ಣಾಂಶ 25 ಸಿ. ಕ್ಕಿಂತ ಕಡಿಮೆ ಹಾಗೂ ಮೊಡಕವಿದ ವಾತವರಣ ಮತ್ತು ತುಂತುರು ಮಳೆ, ಮುಂಜಾನೆ 3-4 ತಾಸು ಮಂಜು ಇದ್ದಾಗ ರೋಗದ ಬಾದೆಹೆಚ್ಚಾಗಿ ಕಂಡು ಬರುತ್ತದೆ. ಇದಕ್ಕಾಗಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೋಗದ ಚಿಹ್ನೆಗಳು ಕಂಡು ಬಂದಾಗ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಕಾರ್ಬನ್ ಡೈಜಿಮ್ 50 ಡಬ್ಲು.ಪಿ ಬೆರೆಸಿ ಸಿಂಪಡಿಸಬೇಕು. ತೊಗರಿಯಲ್ಲಿ ಹೂ ಮತ್ತು ಕಾಯಿ ಉದಿರುವಿಕೆ ನಿಲ್ಲಿಸಲು ಮತ್ತು ಕಾಳು ದಪ್ಪಾಗಲು – ಪಲ್ಸ ಮ್ಯಾಜಿಕ್ 2ಕೆಜಿ ಪ್ರತೀ ಎಕರೆಗೆ ಸಿಂಪಡಿಸಬೇಕು ಎಂದು ರೈತರಿಗೆ ತಿಳಿಸಿದರು.