
ಎನ್.ವೀರಭದ್ರಗೌಡ
ಬಳ್ಳಾರಿ, ಏ.26: 2008 ರಲ್ಲಿ ಈ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಪರಿಶಿಷ್ಟ ವರ್ಗಕ್ಕೆ ಮೀಸಲಿದ್ದು ಬಳ್ಳಾರಿ ಮಹಾ ನಗರ ಪಾಲಿಕೆಯ ಕೌಲ್ ಬಜಾರ್, ರೇಡಿಯೋ ಪಾರ್ಕ್, ದಂಡು ಪ್ರದೇಶದ 10 ವಾರ್ಡುಗಳು ಈ ಹಿಂದಿನ ಕುರುಗೋಡು ವಿಧಾನ ಸಭಾ ಕ್ಷೇತ್ರದ ಮೋಕಾ, ರೂಪನಗುಡಿ ಹೋಬಳಿ ಸೇರಿದಂತೆ 52 ಹಳ್ಳಿಗಳ ವ್ಯಾಪ್ತಿ ಹೊಂದಿದೆ.
ಸರ್ಕಾರದ ವಿಮ್ಸ್ ವೈದ್ಯಕೀಯ ಆಸ್ಪತ್ರೆ, ಟ್ರಾಮಕೇರ್ ಸೆಂಟರ್ ಕಾಲೇಜು, ಎರೆಡು ಖಾಸಗಿ ಇಂಜೀನೀಯರಿಂಗ್ ಕಾಲೇಜುಗಳು ಇಲ್ಲಿವೆ
ಹಳ್ಳಿಗಳ ಪ್ರದೇಶ ತುಂಗಭದ್ರ ಬಲದಂಡೆಯ ಕೆಳ ಹಾಗು ಮೇಲ್ಬಾಗದ ಕಾಲುವೆಗಳಿಂದ ಶೇಕಡ 70 ರಷ್ಟು ನೀರಾವರಿ ಇದ್ದು ಮೆಣಸಿನಕಾಯಿ, ಭತ್ತ, ಮೆಕ್ಕೆಜೋಳ, ಮುಖ್ಯ ಬೆಳೆ ಉಳಿದಿದ್ದು ಮಳೆಯಾಶ್ರಿತವಾಗಿದೆ. ಒಂದಿಷ್ಟು ಪ್ರದೇಶ ಕಬ್ಬಿಣ ಅದಿರಿನ ಗಣಿಗಾರಿಕೆಯನ್ನು ಹೊಂದಿದೆ.
ವೇದಾವತಿ ನದಿಯೂ ಹರಿಯುತ್ತಿದ್ದು ನದಿ ದಂಡೆಯ ಪ್ರದೇಶದಲ್ಲಿ , ಸಪೋಟ, ಕಲ್ಲಂಗಡಿ ಮತ್ತು ಕರುಬೂಜ ಹಣ್ಣು ಬೆಳೆದು ನೆರೆಯ ಜಿಲ್ಲೆಗಳಿಗೆ ಸಾಗಿಸಲಾಗುತ್ತದೆ,
ಒಣ ಮೆಣಸಿನಕಾಯಿ ಪ್ರಮುಖ ಬೆಳೆಯಾಗಿದೆ ಇದಕ್ಕಾಗಿ ಇಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಮಾಡಬೇಕೆಂಬ ಬೇಡಿಕೆ ಈ ವರೆಗೆ ಈಡೇರಿಲ್ಲ.
ಬಿ.ಬೆಳಗಲ್ಲು ಗ್ರಾಮದಲ್ಲಿ ಬೆಳೆಯುವ ಕರಿಬೇವು ರಾಜ್ಯ, ನೆರೆ ರಾಜ್ಯ ಅಷ್ಟೇ ಅಲ್ಲದೆ ಅರಬ್ ರಾಷ್ಟ್ರಗಳಿಗೂ ಸರಬರಾಜಾಗುತ್ತದೆ.
ಮತದಾರರು:
ಈ ಕ್ಷೇತ್ರದಲ್ಲೂ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿದ್ದಾರೆ. ಅಂದರೆ 1,16,060 ಪುರುಷ ಮತದಾರರಿದ್ದರೆ, 1,22,098 ಮಹಿಳೆ ಮತದಾರರಿದ್ದಾರೆ 49 ಜನ ಇತರೆ ಮತದಾರರಿದ್ದು, ಕ್ಷೇತ್ರದಲ್ಲಿನ ಒಟ್ಟು ಮತದಾಋ ಸಂಖ್ಯೆ 2,38,207 ಇದರಲ್ಲಿ 7,833 ಯುವ ಮತದಾರರು, 3,437 ಜನ 80 ವರ್ಷ ಮೇಲ್ಪಟ್ಟ ವಯಸ್ಕ ಮತದಾರರು, 2,989 ವಿಶೇಷ ಚೇತನ ಮತದಾರರು ಇದ್ದಾರೆ ಮತದಾನಕ್ಕೆ 242 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಆಯ್ಕೆಯಾದವರು:
ಈ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ ಪಕ್ಷದ ಶಾಸಕ ಬಿ.ನಾಗೇಂದ್ರ ಇದ್ದಾರೆ. ಎರೆಡು ಉಪ ಚುನಾವಣೆ ಸೇರಿ ಐದು ಬಾರಿ ನಡೆದ ಚುನಾವಣೆಯಲ್ಲಿ ಮೂರು ಬಾರಿ ಸಚಿವ ಬಿ.ಶ್ರೀರಾಮುಲು ಇಲ್ಲಿ ಬಿಜೆಪಿ, ಪಕ್ಷೇತರ, ಬಿಎಸ್ ಪಕ್ಷದ ಶಾಸಕರಾಗಿದ್ದರು.
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ನಾಗೇಂದ್ರ ಮತ್ತು ಬಿಜೆಪಿಯಿಂದ ಬಿ.ಶ್ರೀರಾಮುಲು ಕಣದಲ್ಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಇಲ್ಲ. ಉಳಿದಂತೆ ಇತರೇ ಪಕ್ಷ ಮತ್ತು ಪಕ್ಷೇತರರು ಸೇರಿ 8 ಜನ ಕಣದಲ್ಲಿದ್ದಾರೆ.
ನೇರ ಸ್ಪರ್ಧೆ:
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ ಗೆಲುವಿನ ಅಂತರ ಕಡಿಮೆ ಆಗಬಹುದು, ಹಣ ಮತ್ತು ಪಕದಷದ ಬಲದ ಮೇಲೆ ಚುನಾವಣೆ ನಡೆದಿದೆ. ಫಲಿತಾಂಶಕ್ಕಾಗಿ ಮೇ 13 ವರೆಗೆ ಕಾಯಬೇಕು.