ಕ್ಷೇತ್ರ ದರ್ಶನಹರಪನಹಳ್ಳಿ ವಿಧಾನಸಭಾ ಕ್ಷೇತ್ರ


ವೀರಭದ್ರಗೌಡ ಎನ್ ಬಳ್ಳಾರಿ.
ಬಳ್ಳಾರಿ, ಮೇ.03: ಸಂಪೂರ್ಣ ಕೃಷಿ ಆಧಾರಿತ ಪ್ರದೇಶವನ್ನು ಹೊಂದಿರುವ ಕ್ಷೇತ್ರ ಹರಪನಹಳ್ಳಿ.  ಒಂದಿಷ್ಟು ತುಂಗಭದ್ರ ನದಿ ತೀರವನ್ನು ಹೊಂದಿರುವ ಪ್ರದೇಶ ಮಾತ್ರ ಏತ ನೀರಾವರಿಗೆ ಒಳಪಟ್ಟಿದೆ. ರಾಜ್ಯದ ಅತೀ ಹಿಂದುಳಿದ ತಾಲೂಕುಗಳಲ್ಲಿ ಒಂದಾಗಿದೆ.
ಈ ಕ್ಷೇತ್ರದ ಚುನಾವಣಾ ಕಣದ ಕುರಿತು ಒಂದು ವರದಿ.
ಮೊದಲ ಚುನಾವಣೆಯಿಂದ  ಕೂಡ್ಲಿಗಿ ಕಕ್ಷೇತ್ರದೊಂದಿಗೆ ದ್ವಿಸದಸ್ಯದ ಕ್ಷೇತ್ರವಾಗಿ  ಸಾಮಾನ್ಯ ಮತ್ತು ಮೀಸಲು ಕ್ಷೇತ್ರವಾಗಿತ್ತು. ನಂತರ ಕೇವಲ ಎಸ್ಸಿ  ಮೀಸಲು ಕ್ಷೇತ್ರವಾಯ್ತು.
ಕ್ಷೇತ್ರಗಳ ಮರು ವಿಂಗಡಣೆಯಿಂದ 2008 ರಲ್ಲಿ ಸಾಮಾನ್ಯ ಕ್ಷೇತ್ರವಾಗಿತ್ತು. ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಗಳೆ ಹೆಚ್ಚಾಗಿ ಆಯ್ಕೆಯಾಗುತ್ತಿದ್ದ ಈ ಕ್ಷೇತ್ರದಲ್ಲಿ 2008 ರಲ್ಲಿ ಮೊದಲ ಬಾರಿಗೆ ಜಿ.ಕರುಣಾಕರ ರೆಡ್ಡಿ ಅವರು ಬಿಜೆಪಿಯಿಂದ ಗೆದ್ದರು. ಸಧ್ಯ ಅವರೇ ಈ ಕ್ಷೇತ್ರದ ಶಾಸಕರಾಗಿದ್ದು. ಬಿಜೆಪಿ ಅಭ್ತರ್ಥಿಯಾಗಿ ಕಣದಲ್ಲಿದ್ದಾರೆ.
ಪ್ರಸಕ್ತ ಚುನಾವಣೆಯಲ್ಲಿ 15 ಹುರಿಯಾಳುಗಳು ಸ್ಪರ್ಧಾಕಣದಲ್ಲಿದ್ದಾರೆ.
ಹಾಲಿ ಬಿಜೆಪಿ ಶಾಸಕ ಜಿ.ಕರುಣಾಕರ ರೆಡ್ಡಿ ಮೂರನೇ ಬಾರಿಗೆ ಆಯ್ಕೆ ಬಯಸಿ ಬಿಜೆಪಿಯಿಂದ ಕಣದಲ್ಲಿದ್ದಾರೆ.
ಉಳಿದಂತೆ  ಕಾಂಗ್ರೆಸ್ ನಿಂದ ಅರಸಿಕೆರೆ ಎನ್. ಕೊಟ್ರೇಶ್, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಎಂ.ಪಿ.ಲತಾ ಮಲ್ಲಿಕಾರ್ಜುನ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ವಿಜಯನಗರ ಜಿಲ್ಲೆಯ ಎರಡನೇ ಅತಿ ದೊಡ್ಡ ಕ್ಷೇತ್ರವಾಗಿದೆ. ಅನೇಕ ತಾಂಡಾಗಳನ್ನು ಹೊಂದಿದೆ.
ಕನ್ನಡದ ಪ್ರಸಿದ್ಧ ಹಾಸ್ಯ ಸಾಹಿತಿ ಬೀಚಿ ಎಂತಲೇ ಪ್ರಸಿದ್ಧರಾಗಿದ್ದ, ರಾಯಸಂ
ಭೀಮಸೇನರಾವ್ ಜನಿಸಿದ್ದು ಈ ಕ್ಷೇತ್ರದಲ್ಲಿಯೇ.
ಹರಪನಹಳ್ಳಿ ಪಟ್ಟಣ ಬಿಟ್ಟರೆ ಹೆಚ್ಚಾಗಿ ಹಳ್ಳಿಗಳಲ್ಲಿನ ಜನ‌ ಮಳೆಯಾಧಾರಿತ ಕೃಷಿಯನ್ನು ಅವಲಂಬಿಸಿದ್ದಾರೆ.  ಜೋಳ, ಶೇಂಗಾ, ನವಣೆ, ಹತ್ತಿ, ಸೂರ್ಯಕಾಂತಿ ಪ್ರಮುಖ ಬೆಳೆಗಳು. 
ಕುರಿ ಸಾಕಾಣಿಕೆ ಸೇರಿದಂತೆ ವಿವಿಧ ಉಪ ಕಸಬುಗಳನ್ನು ಮಾಡುತ್ತಾರೆ.
ಉತ್ತಮ ಸಾರಿಗೆ ಸಂಪರ್ಕ,ರೈಲು ಮಾರ್ಗಗಳಿವೆ. ಸ್ನಾತಕೋತ್ತರ ಪದವಿವರೆಗಿನ ಶಿಕ್ಷಣ ಸೌಲಭ್ಯದ ಕಾಲೇಜುಗಳನ್ನು  ಹೊಂದಿದೆ.
@12bc = ಮತದಾರರ:
ಈ ಕ್ಷೇತ್ರದಲ್ಲಿ 109980 ಪುರುಷ, 107046 ಮಹಿಳಾ ಮತ್ತು 19 ಜನ ಇತರೇ ಮತದಾರರು ಸೇರಿದಂತೆ ಒಟ್ಟು 2 ಲಕ್ಷದ17 ಸಾವಿರದ 045 ಮತದಾರರಿದ್ದಾರೆ.
ಈ ಪೈಕಿ 1563 ವಿಕಲಚೇತನರು,
80 ವರ್ಷ ಮೇಲ್ಪಟ್ಟವರು 3511, 
8746 ಯುವ ಮತದಾರರಿದ್ದಾರೆ.