ಕ್ಷೇತ್ರ ಅಭಿವೃದ್ಧಿ ಪಡಿಸಿದ ತೃಪ್ತಿ ನನಗಿದೆ,ಹೈಕಮಾಂಡ್ ನಿರ್ಣಯಕ್ಕೆ ನಾವು ಬದ್ದ : ಶಾಸಕ ಕುಮಠಳ್ಳಿ

ಅಥಣಿ : ಮಾ.14:ಪಕ್ಷದ ಹೈಕಮಾಂಡ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೇಟ್ ಹಂಚಿಕೆ ಮಾಡುತ್ತಾರೆ, ಇಬ್ಬರಲ್ಲಿ ಯಾರಿಗೆ ಟಿಕೇಟ್ ನೀಡಿದರೂ ಇಬ್ಬರು ಕೂಡಿಯೇ ಕೆಲಸ ಮಾಡುತ್ತೇವೆ ಬಿಜೆಪಿಯನ್ನು ಗೆಲ್ಲಿಸುತ್ತೇವೆ ಎಂದು ಅಥಣಿ ಶಾಸಕ ಹಾಗೂ ಕರ್ನಾಟಕ ಕೊಳಗೇರಿ ನಿಗಮ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅವರು ತಾಲೂಕಿನ ದೊಡವಾಡ ಗ್ರಾಮದಲ್ಲಿ 80 ಲಕ್ಷ ರೂ ವೆಚ್ಚದ ದೊಡವಾಡ ಗ್ರಾಮದ ಸಿಮಿಲಕ್ಷ್ಮೀ ಗುಡಿಯಿಂದ ಸತ್ತಿ, ದೊಡವಾಡ ಮುಖ್ಯ ರಸ್ತೆವರೆಗೆ ರಸ್ತೆ ಕಾಮಗಾರಿ ಹಾಗೂ 53 ಲಕ್ಷ ರೂ ವೆಚ್ಚದ ದೊಡವಾಡ ಗ್ರಾಮದ 130 ಮನೆಗಳಿಗೆ ಜಲ ಜೀವನ್ ಮಿಶನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ.ಅನಂತರ ಝುಂಜರವಾಡ ಗ್ರಾಮದಲ್ಲಿ 1 ಕೋಟಿ ರೂ ವೆಚ್ಚದ ಝುಂಜರವಾಡ ತುಂಗಳ ರಸ್ತೆ ಕಾಮಗಾರಿ, 90 ಲಕ್ಷ ರೂ ವೆಚ್ಚದ ಝುಂಜರವಾಡ ತುಬಚಿ ರಸ್ತೆ ಕಾಮಗಾರಿ, 80 ಲಕ್ಷ ರೂ ವೆಚ್ಚದ ಝುಂಜರವಾಡ ಗ್ರಾಮದ ಸುಟ್ಟಟ್ಟಿ ಝುಂಜರವಾಡ ರಸ್ತೆಯಿಂದ ತುಬಚಿ ಆರ್ ಸಿ ವರೆಗೆ ರಸ್ತೆ ಕಾಮಗಾರಿ, 54 ಲಕ್ಷ ರೂ ವೆಚ್ಚದ ಝುಂಜರವಾಡ ಆರ್ ಸಿ ಪ್ಲಾಟ್ ಗಳಲ್ಲಿ ಜಲ ಜೀವನ್ ಮಿಶನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ, 5 ಲಕ್ಷ ರೂ ವೆಚ್ಚದ ದುರ್ಗಾದೇವಿ ಸಮುದಾಯ ಭವನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ ನಾನು ಹಾಗೂ ಲಕ್ಷ್ಮಣ ಸವದಿ ಅವರು ಅಥಣಿ ಪಟ್ಟಣದಲ್ಲಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವ ಸಂದರ್ಭದಲ್ಲಿ ಸವದಿ ಅವರು ಈ ಹಿಂದೆ ಸ್ಪಷ್ಠವಾಗಿ ಹೇಳಿದ್ದಾರೆ ಇಬ್ಬರಲ್ಲಿ ಒಬ್ಬರು ಚುನಾವಣೆಗೆ ಸ್ಪರ್ಧಿಸಿ ಎಮ್.ಎಲ್.ಎ ಆಗ್ತಿವಿ ಇನ್ನೋರ್ವರು ಎಮ್.ಎಲ್.ಸಿ ಆಗ್ತಿವಿ ಅಷ್ಟೇ, ಟಿಕೇಟ್ ನಿರ್ಣಯ ಹೈಕಮಾಂಡ್ ಅವರಿಗೆ ಬಿಟ್ಟಿದ್ದು, ಅವರ ನಿರ್ಣಯಕ್ಕೆ ನಾವು ಬದ್ದರಾಗಿದ್ದೆವೆ ಎಂದರು,
ಈ ವೇಳೆ ಗುತ್ತಿಗೆದಾರರಾದ ಸತ್ಯಪ್ಪಾ ಪೂಜಾರಿ, ಶಿವಪುತ್ರ ನಾಯಿಕ, ಬಸವರಾಜ ಮಗದುಮ, ಶಂಕರ ಮೋರೆ, ಸಾಜೀದ ಬಿರಾದಾರ, ರಾಜುಗೌಡ ಕುಂಗಿ, ಚಿದಾನಂದ ಬಿರಾದಾರ, ದಸ್ತಗೀರ ಮುಲ್ಲಾ, ಮುಖಂಡರಾದ, ನಿಂಗಪ್ಪ ನಂದೇಶ್ವರ, ಹಣಮಂತಗೌಡ ಪಾಟೀಲ, ಬಸವರಾಜ ಯಡೂರ, ಗುರುಪಾದ ಹುದ್ದಾರ. ರಾವಸಾಬ ಐಗಳಿ, ಶಂಕರಗೌಡ ಪಾಟೀಲ, ಅಶೋಕ ಐಗಳಿ, ಅಣ್ಣಪ್ಪ ಹುದ್ದಾರ, ಹಣಮಂತ ಹುದ್ದಾರ, ಮಲ್ಲಿಕಾರ್ಜುನ ಹಂಚಿನಾಳ, ಟಿ ಪಾಟೀಲ, ಮುರುಗೇಶ ಐಗಳಿ, ಸಿದ್ದಪ್ಪ ಮುದಕನ್ನವರ, ಮುತ್ತಪ್ಪ ಹಿಡಕಲ್, ಶೀತಲ ಪಾಟೀಲ, ಶ್ರೀಕಾಂತ ಸಂಕೋನಟ್ಟಿ, ಜಯಪಾಲ ಪಾಟೀಲ, ಶ್ರೀಕಾಂತ ಯಡೂರ ಸೇರಿದಂತೆ ಇತರರಿದ್ದರು.