ಕ್ಷೇತ್ರ ಅಭಿವೃದ್ಧಿಯೇ ನನ್ನ ಗುರಿ- ದದ್ದಲ್

ರಾಯಚೂರು, ಏ.೨೬-ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದು ನನ್ನ ಗುರಿ ಈ ಈ ಕ್ಷೇತ್ರವನ್ನು ಸಂಪೂರ್ಣ ನೀರಾವರಿಯನ್ನಾಗಿ ಮಾಡುವುದರ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಹೇಳಿದರು.
ದಿನ್ನಿ, ಗಾರಲದಿನ್ನಿ, ಮರ್ಚೇಟಹಾಳ್, ಗುಂಜಳ್ಳಿ ಗ್ರಾಮಗಳಲ್ಲಿ ಪಕ್ಷದ ಹಿರಿಯ ಮುಖಂಡರುಗಳೊಂದಿಗೆ ಭರ್ಜರಿ ಚುನಾವಣೆ ಪ್ರಚಾರ ಕೈಗೊಂಡರ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀ ಬಸನಗೌಡ ದದ್ದಲ್ ರವರು .
ಮುಖ್ಯವಾಗಿ ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಸಂಪೂರ್ಣ ವಾಗಿ ನೀರಾವರಿ ಯನ್ನಾಗಿ ಮಾಡುವುದು ನನ್ನ ಅಭಿಲಾಷೆ ಇದೆ, ನೀರಾವರಿ ಯೋಜನೆ ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ, ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮಾಜಿ ಶಾಸಕರೊಬ್ಬರು ನಾನು ತಂದೀನಿ ಅಂತ ಹೇಳಿಕೊಂಡು ತೀರುಗಾಡುತ್ತಿದ್ದಾರೆ, ಕ್ಷೇತ್ರದ ೫ ವರ್ಷದ ಆಡಳಿತದಲ್ಲಿ ಏನು ಕೆಲಸ ಮಾಡಿಲ್ಲ ಅವರು, ನನ್ನನ್ನು ಆಯ್ಕೆ ಮಾಡಿದ ದಿನದಿಂದಲೂ ರಾಯಚೂರು ಗ್ರಾಮೀಣ ಕ್ಷೇತ್ರದ ಜನರೇ ನನ್ನ ಕುಟುಂಬ ಎಂದು ತಿಳಿದು ಕ್ಷೇತ್ರದ ಮನೆ ಮಗನಾಗಿ ನಿರಂತರವಾಗಿ ನಿಮ್ಮ ಸೇವಕನಾಗಿ, ಕೆಲಸ ಮಾಡುತ್ತಿದ್ದೇನೆ.
ನಿಮ್ಮ ಆರ್ಶಿವಾದದಿಂದ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಗ್ರಾಮದಲ್ಲಿ ಕೂಡ ಅಭಿವೃದ್ಧಿ ಕೆಲಸ ಮಾಡಲಾಗಿದೆ.
ನಿಮ್ಮ ನಿಮ್ಮ ಋಣ ನನ್ನ ಮೇಲಿದೆ ಆ ಋಣ ತೀರಿಸಲು ಆಗೋದಿಲ್ಲ, ಕ್ಷೇತ್ರದ ಜನರಿಗಾಗಿ ಧ್ವನಿ ಇಲ್ಲದವರ ಧ್ವನಿಯಾಗಿ ಕೆಲಸ ಮಾಡುತ್ತೇನೆ,
ಕ್ಷೇತ್ರಕ್ಕೆ ಬೇಕಾದ ಅಗತ್ಯ ಮೂಲ ಸೌಕರ್ಯಗಳ ಬಗ್ಗೆ ಅಧಿವೇಶನದಲ್ಲಿ ಧ್ವನಿಯೆತ್ತಿ ಅವುಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಏರಿ ಅನುದಾನವನ್ನು ತಂದಿದ್ದೇನೆ.
ಆ ನಿಟ್ಟಿನಲ್ಲಿ ೫ ವರ್ಷಗಳಿಂದ ನಿಮ್ಮ ಜೊತೆಗೆ ಇದ್ದೇನೆ, ಇನ್ನೊಂದು ಬಾರಿ ನನಗೆ ಆರ್ಶಿವಾದ ಮಾಡಿ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ನಿರ್ಮಾಣ ಮಾಡುತ್ತೇನೆ.
ಮುಂದುವರೆದು ಈ ಭಾಗದಲ್ಲಿ ಈ ಹಿಂದೆ ಸಮ್ಮೀಶ್ರ ಸರ್ಕಾರದ ಅವಧಿಯಲ್ಲಿ ನೀರಾವರಿ ಯೋಜನೆ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಇದರ ಭಾಗವಾಗಿ, ಬಂಗಾರಪ್ಪ ಕರೆ ತುಂಬುವ ಯೋಜನೆ ಚಾಲನೆ ನೀಡಲಾಗಿದೆ.
ಈ ಭಾಗದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಮತ್ತು ೦.೫ ಖಿಒಅ ನೀರನ್ನು ಸಂಗ್ರಹಿಸುವ ಸಣ್ಣ ಡ್ಯಾಂನ್ನು ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದೆ ಈಗ ಡಿ.ಪಿ.ಆರ್. ಆಗಿದೆ.
ಮುಂದಿನ ದಿನಗಳಲ್ಲಿ ಬ್ರಿಡ್ಜ್ ಕಂ ನಿರ್ಮಾಣವಾಗುತ್ತದೆ, ಮತ್ತು ಗುಂಜಳ್ಳಿ,ಗಧಾರ ಕೆರೆ ತುಂಬುವ ಯೋಜನೆ ಅನುಮೊದನೆಯಗಾಗಿ ನಬಾರ್ಡ ಯೋಜನೆಯಡಿ ಸಿದ್ಧವಾಗಿದೆ. ಇನ್ನೇನೂ ಕಾಮಗಾರಿ ಪ್ರಾರಂಭ ಯವಾಗಬೇಕು. ಇನ್ನೂ ಈ ಕ್ಷೇತ್ರವನ್ನು ನೀರಾವರಿ ಯೋಜನೆ ಜಾರಿಗೆ ತರುಲು ಪ್ರಾಮಣಿಕ ಪ್ರಯತ್ನ ಮಾಡುತ್ತೇನೆ.
ಈಗಾಗಲೇ ಬಂಗಾರಪ್ಪ ಕರೆ ತುಂಬುವ ಯೋಜನೆಗೆ ಸರ್ಕಾರ ೨೦೦ ಕೋಟಿ ರೂಪಾಯಿ ಘೋಷಣೆಯಾಗಿದೆ, ಕಾಮಗಾರಿ ಕೂಡ ಪ್ರಾರಂಭವಾಗಿದೆ.
ಕಾಲುವೆ ನೀರಾವರಿ, ಕೆರೆ ತುಂಬಿಸುವ ಯೋಜನೆಗಳು, ಏತ ನೀರಾವರಿ ಇನ್ನೂ ಹಲವಾರುಯೋಜನೆ ಜಾರಿಗೆ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ,
ತುಂಟಾಪೂರು,ಜುಲುಮಗೇರಾ,ಮಸದೊಡ್ಡಿ,ಎಲ್ಲಾ ಕೆರೆಗಳು ತುಂಬುವುದಕ್ಕೆ ಕ್ರೀಷ್ಣ ನದಿಯಿಂದ ನೀರು ತಂದಿದ್ದೇನೆ ಕೆಲಸ ಕೂಡ ಪ್ರಾರಂಭವಾಗಿದೆ.
ನನ್ನ ರೈತಬಾಂದವರಿಗೆ ಬೇಕಾದಂತಹ ನೀರಾವರಿ ಸೌಲಭ್ಯ ಕೊಡಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡುತ್ತೇನೆ.ದೇಶದ ಬೆನ್ನೆಲುಬು ರೈತ, ಆ ರೈತನಿಗೆ ಕರೆಂಟ್ ಮತ್ತು ನೀರಾವರಿ ಸೌಲಭ್ಯ ಕಲ್ಪಿಸಿದರೆ, ಸರ್ಕಾರಕ್ಕೆ ಸಾಲ ಕೊಡುವಷ್ಟು ಶಕ್ತಿ ಬರುತ್ತೆ.
ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವುದು ನನ್ನ ಆಶಯವಾಗಿದೆ,
ಇಡೀ ರಾಯಚೂರು ಗ್ರಾಮೀಣ ಕ್ಷೇತ್ರದ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ.
ಮುಖಂಡರುಗಳು, ಮತ್ತು ನನ್ನ ಕ್ಷೇತ್ರದ ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವ ಕೆಲಸ ಯಾವತ್ತೂ ಮಾಡೋದಿಲ್ಲ ನಿಮಗೆ ಋಣಿಯಾಗಿ ಸದಾ ನಿಮ್ಮ ಸೇವಕನಾಗಿ ಸೇವೆ ಸಲ್ಲಿಸುತ್ತೇನೆ
ಕ್ಷೇತ್ರದ ಶಾಸಕನಾಗಿ ನಾನು ಇಲ್ಲಿ ನಿಲ್ಲಬೇಕಾದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ಕೋಡುಗೆ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಶಾಸಕನಾಗಿ ಪಕ್ಷ ಮತ್ತು ನನ್ನ ಮತದಾರರ ಋಣದಲ್ಲಿ ಇದ್ದೇನೆ, ನಿಮ್ಮ ವಿಶ್ವಾಸಕ್ಕೆ ದಕ್ಕೆ ತರುವ ಕೆಲಸ ಯಾವತ್ತೂ ಮಾಡೋದಿಲ್ಲ ಕಾಂಗ್ರೆಸ್ ಪಕ್ಷ ಮತ್ತು ನನ್ನ ಕ್ಷೇತ್ರದ ಜನರು ನನ್ನ ಕುಟುಂಬ ಆ ಕುಟುಂಬಕ್ಕಾಗಿ ನಾನು ಹಗಲಿರುಳು ಶ್ರಮಿಸುತ್ತೇನೆ,
ಚುನಾವಣೆಯಲ್ಲಿ ಗೆದ್ದ ನಂತರ ವಿರೋಧಪಕ್ಷದವರು ನನ್ನನ್ನು ಪಕ್ಷಾಂತರ ಮಾಡುವಂತೆ ಅನೇಕ ಆಮಿಷಗಳು ಒಡ್ಡಿದರು ಆದರೆ ನಾನು ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಲಿಲ್ಲ ಹಿರಿಯ ನಾಯಕರಾ ಮತ್ತು ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನರಿಗೆ ನಾನು ಮೋಸ ಮಾಡುವುದಿಲ್ಲ ಅವರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ ಮನೆಯಲ್ಲಿ ರೊಟ್ಟಿ ಕರವಾದರೂ ತಿನ್ನುತ್ತೇನೆ ಹೊರತು ಪಕ್ಷಾಂತರ ಮಾಡೋದಿಲ್ಲ ಅಂತ ಹೇಳಿದೆ ಯಾಕಂದ್ರೆ ಒಂದು ಮನೆಯ ಅಣ್ಣತಮ್ಮಂದಿರಾಗಿ ನನಗಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ನಾನೇನಾದರೂ ಪಕ್ಷಕ್ಕೆ ದ್ರೋಹ ಮಾಡೋದಿಲ್ಲ. ನಾನು ಕತ್ತು ಕೋಯ್ದುಕೊಳ್ಳುತ್ತೇನೆ ಹೊರತು ನನ್ನ ಕಾರ್ಯಕರ್ತರಿಗೆ ಮತ್ತು ನನ್ನ ಮುಖಂಡರುಗಳಿಗೆ, ನನ್ನ ಮತದಾರ ಪ್ರಭುಗಳು ಮೋಸ ಮಡೊದಿಲ್ಲ,
ಇಡೀ ಕ್ಷೇತ್ರದ ಜನರ ಧ್ವನಿಯಾಗಿ ಜಿಲ್ಲೆಯ ಧ್ವನಿ ನಿಯಾಗಿ ಆ ಧ್ವನಿಯನ್ನು ನೀವು ಅಂದರೆ ಮತದಾರರು ನೀಡಿದ್ದೀರಾ ಆ ಧ್ವನಿಯನ್ನು ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ.
ಈ ಹಿಂದೆ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿ ಜಲಧಾರೆ ಯೋಜನೆಯ ಮೂಲಕ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಕೆಲಸಕ್ಕೆ ಅಂದಿನ ಸರ್ಕಾರ ಬಜೆಟ್ ನಲ್ಲಿ ೧೦೦ ಕೋಟಿ ಘೋಷಣೆ ಮಾಡಿತು ನಂತರ ಸರ್ಕಾರ ಬದಲಾದ ಸಂದರ್ಭದಲ್ಲಿ ಈಗೀನ ರಾಜ್ಯ ಸರ್ಕಾರ ೨೩೦೦ ಕೋಟಿ ರೂಪಾಯಿ ಟೆಂಡರ್ ಆಗಿ ಕೆಲಸ ಕೂಡ ಪ್ರಾರಂಭವಾಗಿದೆ. ನಾರಾಯಣಪುರ ಡ್ಯಾಂ ಬೆಡ್ ಸ್ಟೋರೇಜ್ ನಿಂದ ಜಿಲ್ಲೆಗೆ ನೀರುಣಿಸುವ ಯೋಜನೆ ಕಾಮಗಾರಿ ಪ್ರಾರಂಭವಾಗಲಿದೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಗೆ ಮತ್ತು ನನ್ನ ಕ್ಷೇತ್ರಕ್ಕೆ ಕುಡಿಯುವ ನೀರಿನ ಅಭಾವ ತಪ್ಪಿಸಬಹುದು ಎಂದರು.
ಬರುವಂತಹ ದಿನಗಳಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತೇನೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.