ಕ್ಷೇತ್ರದ ಸುಭೀಕ್ಷೆಗೆ ದೇವರಿಗೆ ಮೊರೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಡಿ.23 :- ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನತೆ ಆರೋಗ್ಯ ಸೇರಿದಂತೆ ಎಲ್ಲಾ ರೀತಿಯಲ್ಲಿ ಸುಭೀಕ್ಷೆಯಿಂದ ಕಾಪಾಡುವಂತೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಶುಕ್ರವಾರ ಸಂಜೆ ಕಾನಾಮಡುಗು ಶ್ರೀ ಶರಣಬಸವೇಶ್ವರ ದೇವರ ಮೊರೆ ಹೋಗಿ ಭಕ್ತಸಮೂಹದ ನಡುವೆ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕಿನ ಕಾನಾಮಡುಗು ದಾಸೋಹಮಠವು ಅನ್ನ ಹಾಗೂ ಅಕ್ಷರ ದಾಸೋಹಕ್ಕೆ ಹೆಸರಾಗಿದೆ ಅಲ್ಲದೆ ಹಸಿದು ಬಂದವರಿಗೆ ಅರ್ಧ ರಾತ್ರಿಯಲ್ಲೂ  ಅನ್ನ ನೀಡಿದ ಮಠ ಇದಾಗಿದೆ ಇಲ್ಲಿನ ಶ್ರೀ ಶರಣಬಸವೇಶ್ವರರ ಕೃಪೆಯಿಂದ ಎಂತಹ ಸಂದರ್ಭ ಬಂದರು ಪವಾಡ  ಎಂಬಂತೆ ಜನಜೀವನ ಸುಸ್ಥಿತಿಯಲ್ಲಿದ್ದು ಇದರಂತೆ ಬರದ ಈ ಸಂದರ್ಭದಲ್ಲಿ ಕ್ಷೇತ್ರದ ಜನತೆ ಹಾಗೂ ಜಾನುವಾರುಗಳ  ಸೇರಿ ಸಕಲ ಜೀವರಾಶಿಗಳಿಗೂ ದೇವರು ಒಳಿತನ್ನು ಮಾಡುವಂತೆ ಕೂಡ್ಲಿಗಿ ಶಾಸಕರು ದೇವರ ಮೊರೆ ಹೋಗಿ ವಿಶೇಷ ಪೂಜೆ ಸಲ್ಲಿಸಿ ನಂತರ ರಥೋತ್ಸವದ ಹತ್ತಿರ ಬಂದು ರಥಕ್ಕೆ  ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು, ಭಕ್ತ ಸಮೂಹ ಇದ್ದರು.

One attachment • Scanned by Gmail