ಜಗಳೂರು.ಏ.19 :- ವಿಧಾನ ಸಭಾ ಕ್ಷೇತ್ರದ ಸಮಗ್ರ ನೀರಾವರಿ ನನ್ನ ಕನಸಿನ ಈಡೇರಿಕೆಗಾಗಿ ಮತ್ತೊಮ್ಮೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವೆ ಎಂದು ಶಾಸಕ ಎಸ್.ವಿ. ರಾಮಚಂದ್ರ ವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ತಾಲೂಕು ಕಛೇರಿಯಲ್ಲಿ ಸಂಸದರಾದ ಜಿಎಂ ಸಿದ್ದೇಶ್ವರ್.ಶಿವಯೋಗಿ ಸ್ವಾಮಿ.ಡಾ.ರವಿಕುಮಾರ್ ಅಭ್ಯರ್ಥಿ ಎಸ್ ವಿ ರಾಮಚಂದ್ರ ಬಿ ಫಾರಂನೊಂದಿಗೆ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆ ಅಧಿಕಾರಿ ಎಸ್.ರವಿ. ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಸಂತೋಷ್ ಕುಮಾರ್. ಜಿ ಇವರಿಗೆ ನಾಮಪತ್ರ ಸಲ್ಲಿಸಿದರು.ನಂತರ ಪಟ್ಟಣದ ಈಶ್ವರ.ದೊಡ್ಡ ಮಾರಮ್ಮ. ಆಂಜನೇಯಸ್ವಾಮಿ. ಕಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಸ್ಥಾನ ದಿಂದ ಮಹಾತ್ಮಗಾಂಧಿ ವೃತ್ತ,ಅಂಬೇಡ್ಕರ್ ವೃತ್ತದವರೆಗೆ ಡೊಳ್ಳು ಕುಣಿತ.ಬಾಜಾ ಭಜಂತ್ರಿ ಮೇಳದೊಂದಿಗೆ.ಬಿಜೆಪಿ ಕಾರ್ಯಕರ್ತ ರು ಬಾವುಟಗಳನ್ನು ಹಿಡಿದು ಪಟಾಕಿ ಸಿಡಿಸುವ ಮೂಲಕ ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರುನಂತರ ಶಾಸಕ ಎಸ್.ವಿ ರಾಮಚಂದ್ರ ಮಧ್ಯಮದವರೊಂದಿಗೆ ಮಾತನಾಡಿದರು.ನಾನು ಶಾಸಕನಾಗಿದ್ದಾಗ ಸಿರಿಗೆರೆ ಶ್ರೀಗಳ ಆಶೀರ್ವಾದ ಬಿಜೆಪಿ ಆಡಳಿತ ಪಕ್ಷದ ಸಹಕಾರದಿಂದ ಕ್ಷೇತ್ರದಲ್ಲಿ 57 ಕೆರೆ ತುಂಬಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದೆ.ಭದ್ರಾಮೇಲ್ದಂಡೆ ಯೋಜನೆ ಸಾಕಾರಗೊಂಡಿದೆ 45 ಸಾವಿರ ಎಕರೆ ಪ್ರದೇಶಕ್ಕೆ ನೀರು ಹರಿಸಲು ಸಂಕಲ್ಪಗೈದಿರುವೆ.ಬಡ ರೈತರು ನೀರಾವರಿ ನಾಡಿನಲ್ಲಿ ಭತ್ತ ಬೆಳೆದು ಸಮೃದ್ದಿ ಜೀವನ ಸಾಗಿ ಸಲು ನಾನು 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಪ್ರಚಂಡ ಬಹುಮತಗಳಿಂದ ಶಾಸಕನಾಗಿ ಮತ್ತೊಮ್ಮೆ ಆಯ್ಕೆಯಾಗ ಬೇಕಿದೆ.ಜನತೆಯ ಆಶೀರ್ವಾದ ನನ್ನ ಮೇಲಿದೆ. ನಾನು ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳೇ ನನಗೆ ಶ್ರೀ ರಕ್ಷೆ ಯಾಗಲಿದೆ ಎಂದರು.ಈ ಸಂದರ್ಭದಲ್ಲಿ ಕ್ಷೇತ್ರ ಉಸ್ತುವಾರಿ ಆರುಂಡಿನಾಗರಾಜ್, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ.ನಾಗಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್, ಮುಖಂಡರಾದ ಬಿಸ್ತುವಳ್ಳಿಬಾಬು, ಅನಿತ್ ಕುಮಾರ್ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ರವಿಕುಮಾರ್,ಶಿವಯೋಗಿ ಸ್ವಾಮಿ, ಶ್ರೀನಿವಾಸ್ ದಾಸ ಕರಿಯಪ್ಪ ಬಿದರಿಕೆರೆ ರವಿಕುಮಾರ್ ಕಟ್ಟಿಗೆಹಳ್ಳಿ ಮಂಜಣ್ಣ ಗೌರಿಪುರ ಕುಬೇರಪ್ಪ, ಹನುಮಂತಪುರ ಸತೀಶ್, ಫಣಿಯಾಪುರ ಲಿಂಗರಾಜ್,ಸಾವಿರಾರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಇದ್ದರು.