ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಸಂಕಲ್ಪ:ಶಾಸಕ ಪಾಟೀಲ

ಹುಮನಾಬಾದ್:ಅಧಿಕಾರ ವಿಕೇಂದ್ರೀಕರಣದ ಮುಖಾಂತರ ಜನರ ಕೈಗೆ ಅಧಿಕಾರ ನೀಡಿದ ಶ್ರೇಯಸ್ಸು ದಿ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೆ ಸಲ್ಲುತ್ತದೆ. ಗ್ರಾಮದ ಜನರ ಕೈಗೆ ಅಧಿಕಾರ ನೀಡಿದ ಫಲವಾಗಿ ಗ್ರಾಮಗಳು ಅಭಿವೃದ್ಧಿ ಹೊಂದಲು ಸಹಾಯವಾಗಿವೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

ಪಟ್ಟಣದ ತಾಲ್ಲೂಕಾ ಪಂಚಾಯತ್ ಆವರಣದಲ್ಲಿ ಹಮ್ಮಿಕೊಂಡಿದ್ದ ನೂತನ ತಾಲ್ಲೂಕಾ ಪಂಚಾಯತ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಯ ನನ್ನ ಸಂಕಲ್ಪಪವಾಗಿದೆ. ಇಂದಿನ ಕಾಂಗ್ರೆಸ್ ಸರ್ಕಾರ ಇದ್ದಾಗ ಗ್ರಾಮೀಣ ಅಭಿವೃದ್ಧಿ ಇಲಾಖೆ ಸಚಿವರಾದ ಎಚ್.ಕೆ.ಪಾಟೀಲರವರು ಈ ಕಟ್ಟಡ ಮಂಜೂರು ಮಾಡಿದ್ದಾರೆ. ಕಟ್ಟಡದ ನಿರ್ಮಾಣಕ್ಕೆ ವಿಳಂಬವಾಗಿದೆ. ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ವಿಶೇಷ ಅನುದಾನ ಒಂದು ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಜಿಲೆಯಲ್ಲಿ ಮಾದರಿಯ ಕಟ್ಟಡ ಇದ್ದಾಗಿದೆ. ಕಾಂಗ್ರೇಸ್ ಪಕ್ಷ ಹಾಗೂ ನನ್ನನು ನೋಡಿ ಸ್ಥಳೀಯ ಜನ ಪ್ರತಿನಿಧಿಗಳಿಗೆ ಅಧಿಕಾರ ನೀಡಿದ್ದಾರೆ. ಜನರ ಸಮಸ್ಯೆಗಳ ನಿವಾರಣೆಗೆ ಹೆಚ್ಚು ಒತ್ತು ನೀಡಬೇಕುಎಂದು ಕಿವಿಮಾತು ಹೇಳಿದರು. ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿದೆ. ಈ ಹಿಂದೆ ಪುರಸಭೆಯಲ್ಲಿ ನಾವು ಎಸ್.ಟಿ.ಎಸ್.ಸಿ ಜನಾಂಗದವರಿಗೆ ಅಧಿಕಾರ ನಿಡಿದ್ದೇವೆ ಎಂದರು. ರಾಜ್ಯ ಸರ್ಕಾರ ವೀರಶೈವ ಪ್ರಾಧಿಕಾರ ಮಂಜೂರು ಮಾಡಿದಕ್ಕೆ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪªನವರಿಗೆ ಶಾಸಕ ರಾಜಶೇಖರ ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ. ಈ ನಿಗಮ ಸ್ಥಾಪನೆಯಿಂದ ಹಿಂದುಳಿದ ವೀರಶೈವ ಲಿಂಗಾಯತ್ ಸಮಾಜದ ಏಳ್ಗೆಗೆ ಸಹಾಯವಾಗುತ್ತದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿ, ಅಧಿಕಾರ ವಿಕೇಂದ್ರಿಕರಣದಿಂದ ಗ್ರಾಮಗಳು ಅಭಿವೃದ್ಧಿ ಹೊಂದಲು ಸಹಾಯವಾಗಿವೆ. ಶಾಸಕ ರಾಜಶೇಖರ ಪಾಟೀಲ್ ರವರ ನೇತೃತ್ವದಲ್ಲಿ ಕ್ಷೇತ್ರ ಮಾದರಿಯತ್ತ ಸಾಗುತ್ತಿದೆ. ತಾ.ಪಂ.ಕಟ್ಟಡ ರಾಜ್ಯದಲ್ಲಿಯೇ ಮಾದÀರಿಯ ಕಟ್ಟಡವಾಗಿದೆ ಎಂದು ತಿಳಿಸಿದರು.

ತಾಪಂ. ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ಶಾಸಕ ರಾಜಶೇಖರ ರವರ ಮಾರ್ಗದರ್ಶನದಲ್ಲಿ ತಾಲೂಕ ಪಂಚಾಯತ್ ಅಭಿವೃದ್ದಿ ಕಾರ್ಯಗಳು ಅವರ ಮಾರ್ಗದರ್ಶನ ಮೆರೆಗೆ ತಾಪಂ. ಅಭಿವೃದಿ ಕೆಲಸಗಳು ಕೈಗೊಂಡಿದ್ದೇನೆ. ಶಾಸಕ ಪಾಟೀಲ್ ಅವರು ದಿನದಲಿತರ ಉದ್ಧಾರಕರಾಗಿ ಹೆಚ್ಚಿನ ಒತ್ತು ನೀಡಿದ್ದಾರೆ. ಪಟ್ಟಣದಲ್ಲಿ ಅಂಬೇಡ್ಕರ ಭವನ ನಿರ್ಮಾಣಕ್ಕೆ 3 ಕೋಟಿ ಅನುದಾನ ನೀಡಿದ್ದಾರೆ. ಭವನ ನಿರ್ಮಾಣಕಾಮಗಾರಿ ಮುಕ್ತಾಯಹಂತದಲ್ಲಿದೆ. ಶೀಘ್ರದಲ್ಲಿ ಅಂಬೇಡ್ಕರ ಭವನ ಉದ್ಘಾಟಿಸಲಾಗುವುದು ಎಂದು ತಿಳಿಸಿದರು. ನನ್ನನ್ನು ಐದು ವರ್ಷ ತಾ.ಪಂ. ಅಧ್ಯಕನ್ನಾಗಿ ಕೇಲಸ ನಿರ್ವಹಿಸಿಸಲು ಅವಕಾಶ ನೀಡಿದ್ದಕ್ಕೆ ಶಾಸಕ ರಾಜಶೇಖರ ಪಾಟೀಲರವರನ್ನು ಕೃತಜ್ಞತೆ ಸಲ್ಲಿಸಿ ಬೃಹತ್ ಬಸವೇಶ್ವರ ಪ್ರತಿಮೆಯನ್ನು ನೀಡಿ ಸನ್ಮಾನಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೇಪ್ಪಾ ದಾನಾ, ತಾ.ಪಂ.ಉಪಾಧ್ಯಕ್ಷೆ ಸುಗಾಂಧ ಅಣ್ಣೇಪ್ಪಾ, ಪುರಸಭೆ ಹುಮನಾಬಾದ ಅಧ್ಯಕ್ಷ ಕಸ್ತೂರಿಬಾಯಿ, ಉಪಾಧ್ಯಕ್ಷೆ ಸತ್ಯವತಿ, ಹಳ್ಳಿಖೇಡ ಪುರಸಭೆ ಅಧ್ಯಕ್ಷ ಮಹಾಂತಯ್ಯ ತೀರ್ಥ, ಉಪಾಧ್ಯಕ್ಷೆ ಹುರಮತ್ ಬೇಗಂ ಪಟೇಲ್, ಚಿಟಗುಪ್ಪಾ ತಾ.ಪಂ. ಅಧ್ಯಕ್ಷ ಬೀರಾಪ್ಪ, ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಪರಮೇಶ್ವರ ಕಾಳಮಂದರ್ಗಿ, ಜಿ.ಪಂ. ಸದಸ್ಯ ವೀರಣ್ಣಾ ಪಾಟೀಲ, ಮಾಜಿ ಜಿ.ಪಂ. ಅಧ್ಯಕ್ಷ ಶಿವರಾಜ ಗಂಗಶೆಟ್ಟಿ, ಅಫ್ಸರ್‍ಮಿಯ್ಯಾ, ಬಾಬುರಾವ ಪರಮಶಟ್ಟಿ, ನಿವೃತ ಪಿಡಿಓ ನರಸಪ್ಪಾ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ.ಗೋವಿಂದ, ಕಾರ್ಯನಿರ್ವಣಾಧಿಕಾರಿ ವೈಜಣ್ಣಾ ಫುಲೆ, ಕೆ.ಆರ.ಐ.ಡಿ.ಲ್ ಕಾರ್ಯನಿರ್ವಾಹಕ ಅಭಿಯಂತರಾದ ರಾಘುನಾಥ ಘಂಟೆ, ಕೃಷಿ ಇಲಾಖೆಯ ಅಧಿಕಾರಿ ಡಾ. ಮಲ್ಲಿಕಾರ್ಜುನ ಹಾಗೂ ತಾಲ್ಲೂಕಾ ಮಟ್ಟದ ಅಧಿಕಾರಿಗಳು ಇದ್ದರು.