
ಜಂಗಿರಾಂಪುರ ತಾಂಡಾದಲ್ಲಿ ಮನೆ ಮನೆಗೆ ಭರ್ಜರಿ ಪ್ರಚಾರ
ಲಿಂಗಸುಗೂರು,ಮಾ.೦೯- ತಾಲೂಕಿನ ಜಂಗಿರಾಂಪುರ ತಾಂಡಾದ ಹಿರಿಯ ಮುತ್ಸದ್ದಿ ರಾಜಕಾರಣಿ ಜಿಲ್ಲಾ ಪಂಚಾಯತ್ ಸದಸ್ಯ ಜ್ಯೂಲೆಪ್ಪ ನಾಯಕ ಇವರ ಆರೋಗ್ಯ ವಿಚಾರಿಸಿದರು.
ಲಿಂಗಸುಗೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಲಿಂಗರಾಜ ಕೋಟೆ ವಕೀಲರು ಪ್ರಸ್ತುತ ಕ್ಷೇತ್ರದ ರಾಜಕೀಯ ವಿದ್ಯಮಾನಗಳ ಬಗ್ಗೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜ್ಯೂಲೆಪ್ಪ ನಾಯಕ ಇವರ ಜೊತೆ ಚರ್ಚೆ ನಡೆಸಿದರು.
ಲಿಂಗಸುಗೂರು ತಾಲೂಕಿನ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುತ್ತದೆ. ಅದರಂತೆ ಶೈಕ್ಷಣಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ದೊರೆಯಬೇಕು ಎಂಬುದು ನನ್ನ ಭಾವನೆ ಆಗಿದೆ. ಅದಕ್ಕಾಗಿ ಕ್ಷೇತ್ರದ ಜನರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಭಿವೃದ್ಧಿ ಮಾಡಲಿಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜ್ಯೂಲೆಪ್ಪ ನಾಯಕರಿಗೆ ಮನವಿ ಮಾಡಿದರು.
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಪಕ್ಷದ ಸರ್ಕಾರ ತರಲು ಪ್ರಯತ್ನಿಸಿ ಹಾಗೂ ಕೇಂದ್ರ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಯುವಕರು ಪಕ್ಷದ ಶಕ್ತಿಯಾಗಿದ್ದಾರೆ.
ಲಿಂಗಸುಗೂರು ಮೀಸಲು ಮತ ಕ್ಷೇತ್ರದಲ್ಲಿ ಶಾಂತಿ ಸಾಮರಸ್ಯ ಕಾಪಾಡುವ ಜೊತೆಗೆ ಮತ ಕ್ಷೇತ್ರದ ಸರ್ವ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕಿನ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಟಿಕೆಟ್ ಪ್ರಬಲ ಪೈಪೋಟಿ ಸ್ಪರ್ಧೆ ಮಾಡಲು ಹೊರಟಿರುವ ಲಿಂಗರಾಜ ಕೋಟೆ ವಕೀಲರು ಕ್ಷೇತ್ರದ ಜನರೊಂದಿಗೆ ಬೆರೆಯುವ ಮೂಲಕ ಬಿಜೆಪಿ ಪಕ್ಷದ ಸಾಧನೆ ಮತ್ತು ಅಭಿವೃದ್ಧಿ ಬಗ್ಗೆ ಜನತೆಗೆ ಅರಿವು ಮೂಡಿಸುವ ಕೆಲಸ ಮಾಡುವ ಮೂಲಕ ಈಗಾಗಲೇ ಕ್ಷೇತ್ರದಲ್ಲಿ ಮನೆ ಮಾತಾಗಿದ್ದಾರೆ.
ಜನರ ಒಲವು ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ಬರಬೇಕು ಎಂದು ಜನರ ಅಭಿಪ್ರಾಯ ವಾಗಿದೆ ಅದಕ್ಕಾಗಿ ಕ್ಷೇತ್ರದ ಮತದಾರರು ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಜನರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಡಾಕು ನಾಯಕ್, ಪಾಂಡುರಂಗ, ಭೀಮೆಶ, ಲಾಲಪ್ಪ, ರೇವಪ್ಪ, ಶೇಖರ್ ಚವಾಣ್, ಪ್ರಕಾಶ್ ನಾಯಕ್ ಸೇರಿದಂತೆ ಇತರರು ಇದ್ದರು.