ಕ್ಷೇತ್ರದ ಮತದಾರರ ಆಶೀರ್ವಾದದಿಂದ ಮಂತ್ರಿಯಾಗಿರುವೆ :ದರ್ಶನಾಪುರ

ಶಹಾಪುರ:ಜೂ.4: ಶಹಾಪುರ ಕ್ಷೇತ್ರದ ಕಾರ್ಯಕರ್ತರೆ ನನ್ನ ಜೀವಾಳ, ಕ್ಷೇತ್ರದ ಮತದಾರರ ಆಶೀರ್ವಾದದಿಂದಲೇ ನಾನಿಂದು ಮಂತ್ರಿಯಾಗಿರುವೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಿಗಳ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು. ನಗರದ ಆರಬೋಳ ಕಲ್ಯಾಣ ಮಂಟಪದ ಹೊರ ಪ್ರಾಂಗಣದಲ್ಲಿ ಕ್ಷೇತ್ರದ ಮತದಾರರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಸಚಿವರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದರಿಂದ ಬಿಜೆಪಿಯವರಿಗೆ ನಡುಕ ಹುಟ್ಟಿದೆ. ಎಂದು ಸಣ್ಣ ಕೈಗಾರಿಕೆ ಸಚಿವರಾದ ಶ್ರೀ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಬಿಜೆಪಿ ಪಕ್ಷದಮಗಿಂತ ಟಿವಿ ಮಾಧ್ಯಮದವರಿಗೆ ಕಾಂಗ್ರೆಸ್ ಗ್ಯಾರ0ಟಿಯ ಬಗ್ಗೆ ಚಿಂತೆಯಾಗಿ ದೆ. ಅನಾವಶ್ಯಕವಾಗಿ ರಾಜ್ಯದ ಜನತೆಗೆ ಟಿವಿ ಮಾಧ್ಯಮಗಳು ಗೊಂದಲವನ್ನು ಸೃಷ್ಟಿಸುತ್ತಿವೆ.

ಬಿಜೆಪಿಯವರು ಸಿಜ್ ಬ್ಯಾಂಕಿನಿಂದ ಹಣ ತಂದು ದೇಶದ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ಹಾಕುತ್ತೇವೆ. ರೈತರ ಆದಾಯ ದ್ವಿಗುಣ ಮಾಡುತ್ತೆ ಪ್ರಾಣಿಗಳನ್ನು ಎಂದು ಸುಳ್ಳು ಹೇಳಿ 9 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ.

.ರಾಜ್ಯದಲ್ಲಿ 17 ಶಾಸಕರನ್ನು ಖರೀದಿಸಿ ವಾಮಮಾರ್ಗದಿಂದ ಸರ್ಕಾರ ರಚಿಸಿ ಆಡಳಿತ ನಡೆಸಿದೆ.ಭ್ರಷ್ಟಾಚಾರದಿಂದ ಬೇಸತ್ತು ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಾರೆ. ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು, ನಾವು ನುಡಿದಂತೆ ನಡೆದಿದ್ದೇವೆ ಎಂದು ತಿಳಿಸಿದರು. ಸಚಿವರಾಗಿ ಯಾವತ್ತೂ
ನಿಮ್ಮ ಸೇವೆಯಲ್ಲಿ ನಾನು ಇರುತ್ತೇನೆ ಎಂದು ಮತದಾರರಿಗೆ ಕರೆ ನೀಡಿದರು.

ತಿಪ್ಪಣ್ಣ ಕಮಕನೂರ ಮಾತನಾಡಿದರು ಚರಿತ್ರಾ ಕೊಂಕಲ ಮಾತನಾಡಿ ಜನಸಾಮಾನ್ಯರಿಗೆ ಸರಳವಾಗಿ ಸಚಿವರು ನೇರವಾಗಿ ಭೇಟಿಗೆ ಅವಕಾಶ ಕಲ್ಪಿಸುವುದು ಅವಶ್ಯಕತೆ ಇದೆ ಎಂದು ಹೇಳಿದರು.
ಆರಂಭದಲ್ಲಿ ಭೀಮರಾಯನ ಗುಡಿಯಲ್ಲಿರುವ ಮಾಜಿ ಮಂತ್ರಿ ಬಾಪುಗೌಡ ದರ್ಶನಾಪುರ ಅವರು ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ನಗರದ ಡಾ.ಬಿ. ಆರ್ ಅಂಬೇಡ್ಕರ ಪುತ್ತಳಿಗೆ ಬಸವೇಶ್ವರ ಮೂರ್ತಿ, ವಾಲ್ಮೀಕಿ ಮೂರ್ತಿ ಮತ್ತು ಅಂಬಿಗರ ಚೌಡಯ್ಯ, ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ನಂತರ ನಡೆದ ಕಾರ್ಯಕ್ರಮಕ್ಕೆ ಸಚಿವರು ಸಸಿಗೆ ನೀರೆರೆಯುವ ಮೂಲಕ ಚಾಲನೆನೀಡಿದರು.

ಕಾರ್ಯಕ್ರಮದಲ್ಲಿ ಶಂಕ್ರಣ್ಣ ವಣಿಕ್ಯಾಳ, ಶರಣಪ್ಪ ಸಲಾದಾಪುರ ನಿಂಗನಗೌಡ ಮಾಲಿ ಪಾಟೀಲ್ ಕೆಂಭಾವಿ, ಶ್ರೀಮತಿ ಭಾರತಿ ದರ್ಶನಾಪುರ ಮಹಿಳಾ ಬ್ಲಾಕ್ ಅಧ್ಯಕ್ಷರಾದ ರೇಣುಕಾ ಚಟ್ರಿಕಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಆರ್ಭೋಳ, ಮಹಾಮಂಡಳಿ ನಿರ್ದೇಶಕರಾದ ಗುರುನಾಥ ರೆಡ್ಡಿ ಪಾಟೀಲ್ ಬಾಪುಗೌಡ ಪಾಟೀಲ್ ಡಿ.ಸಿ.ಸಿ.ಬ್ಯಾಂಕ್ ನಿದರ್ಶೇಕರು ಸಿದ್ಧನಗೌಡ ಪೆÇೀಲಿಸ್ ಪಾಟೀಲ್ ಕೆಂಭಾವಿ ನೀಲಕಂಠ ಬಡಿಗೇರ ಮಹಾದೇವಪ್ಪ ಸಾಲಿಮನಿ, ಶಿವಮಾಂಪ್ಪ ಚಂದಾಪುರ,

ವಿಶ್ವನಾಥ್ ರೆಡ್ಡಿ ಯಾದಗಿರಿ ಸಹಕಾರ ಒಕ್ಕೂಟದ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಚೇತನ್ ಗೋನಾಯಕ್, ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಶಿರವಾಳ, ಚರಿತಾ ಕೊಂಕಲ್ ಕಾಂಗ್ರೆಸ್ ರಾಷ್ಟ್ರೀಯ ಸಂಚಾಲಕರು, ನಗರಸಭೆಯ ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತಕುಮಾರ ಸುರಪುರಕ, ಚನ್ನಬಸು ವನದುರ್ಗ ಖಾಸಗಿ ಶಾಲೆ ಒಕ್ಕೂಟದ ಅಧ್ಯಕ್ಷರು, ರಾಜ್ಯ ಕುರಿ ಮಕ ಮಹಾಮಂಡಳಿ ನಿರ್ದೇಶರಾದ ಶಾಂತಗೌಡ ನಾಗನಟಿಗಿ, ಕೆಪಿಸಿಸಿ ಎಸ್ಟಿ ಘಟಕ ರಾಜ್ಯ ಸದಸ್ಯರಾದ ವೆಂಕಟೇಶ ಆಲೂರು, ಮೌನೇಶ್ ನಾಟೇಕಾರ, ಅಜೀಂ ಜಮಾದಾರ ಶಾಂತು ಪಾಟೀಲ್ ಲಕ್ಷ್ಮಣ ಶೇಟಿಗೇರಾ,ಶಿವನಗೌಡ ಪಾಟೀಲ್ ಬಂದೇನವಾಜ ಸಾಸನೂರ ಸಿದ್ದು ಮುಂಡಾಸ ಶರಣಬಸಪ್ಪಗೌಡ, ದರ್ಶನಾಪುರ ಅಭಿಮಾನಿಗಳು ಸೇರಿದಂತೆ ಸಾವಿರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.