
ಅಥಣಿ : ಮಾ.18:ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಯೋಜನೆಯಿಂದ ನನ್ನ ಮತಕ್ಷೇತ್ರದ ಪ್ರತಿಯೊಂದು ಗ್ರಾಮದ ಪ್ರತಿಯೋರ್ವರಿಗೂ ಶುದ್ದ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಪ್ರತಿಯೊಂದು ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೆವೆ ಎಂದು ಅಥಣಿ ಶಾಸಕ ಮಹೇಶ ಕುಮಠಳ್ಳಿ ಅವರು ಹೇಳಿದರು.
ಅವರು ಅವರಖೋಡ, ದರೂರ ಹಾಗೂ ಖವಟಕೊಪ್ಪ ಗ್ರಾಮಗಳಲ್ಲಿ ಸುಮಾರು 341 ಲಕ್ಷ ರೂ ವೆಚ್ಚದ ಜಲ ಜೀವನ್ ಮೀಷನ್ ಕುಡಿಯುವ ನೀರಿನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ ಪ್ರತಿಯೊಬ್ಬ ಸಾರ್ವಜನಿಕರು ಸಹಕಾರದಿಂದ ಈ ಕಾಮಗಾರಿಯನ್ನು ಮಾಡಿಸಿಕೊಳ್ಳಬೇಕು, ಹಾಗೆಯೇ ಗುತ್ತಿಗೆದಾರರು ಗುಣಮಟ್ಟತೆಯನ್ನು ಕಾಯ್ದುಕೊಂಡು ಕಾಮಗಾರಿ ನಿರ್ವಹಿಸಿ ಎಂದರು.
ಈ ವೇಳೆ ಗುತ್ತಿಗೆದಾರ ವಿಲಾಸ ಕುಲಕರ್ಣಿ, ಮುರುಗೇಶ ಪಾಟೀಲ, ಮಲ್ಲಿಕಾರ್ಜುನ ಕೆಂಪಿ, ಪ್ರಜ್ವಲ ಢವಳೇಶ್ವರ, ಶ್ರೀಮಂತ ಸಲಗರ, ಎ ಬಿ ದೇವರವರ, ಮುಖಂಡರಾದ ನಿಂಗಪ್ಪ ನಂದೇಶ್ವರ, ದಶರಥ ಅಂಬಿ, ಈರಣಗೌಡ ಪಾಟೀಲ, ಶಂಕರ ನಾಯಿಕ, ಮಲ್ಲಪ್ಪ ಲಡಗಿ, ಜಾಫರ ಸನದಿ, ಮಲ್ಲಪ್ಪ ಹಂಚಿನಾಳ, ಸುರೇಶ ಮಾಯನ್ನವರ, ಶ್ರೀಕಾಂತ ಅಸ್ಕಿ, ಬಸವರಾಜ ಪಾಟೀಲ, ಕಿರಣ ಮಾಳಿ, ಆನಂದ ಕುಲಕರ್ಣಿ, ಡಾ ವಸಂತ ಬಿಸ್ವಾಗರ, ಮಹಾದೇವ ಬೆಳ್ಳಂಕಿ, ರಮೇಶ ಪಾಟೀಲ, ಸಂಗಮೇಶ ಪಾಟೀಲ, ಶಿವಾನಂದ ಬಿಸ್ವಾಗರ ಸೇರಿದಂತೆ ಇತರರಿದ್ದರು.