
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಜರಗನಹಳ್ಳಿ ಭಾಗದ ರಾಜೀವ್ ಗಾಂಧಿ ರಸ್ತೆ ಹಾಗೂ ಚರ್ಚ್ ರಸ್ತೆ ಗಳಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಸಭೆ ನಡೆಸಿ ಅಭ್ಯರ್ಥಿ ಎಂ.ಸತೀಶ್‌ರೆಡ್ಡಿ ಮತಯಾಚನೆ ಮಾಡಿದರು.
ಪ್ರಚಾರ ಕಾರ್ಯದಲ್ಲಿ ನನಗೆ ನೀಡುತ್ತಿರುವ ಜನರ ಬೆಂಬಲ ನನಗೆ ಇನ್ನಷ್ಟು ಶಕ್ತಿ ತುಂಬುತ್ತಿದೆ. ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳ ಫಲವೇ ಈ ಪ್ರೀತಿ, ವಿಶ್ವಾಸ, ಬೆಂಬಲ. ಈ ಚುನಾವಣೆಯಲ್ಲಿ ಮತ್ತೊಮ್ಮೆ ಜನರು ಆಶೀರ್ವದಿಸುವ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಉಪಾಮಹಾಪೌರರಾದ ರಾಮ್ ಮೋಹನ್ ರಾಜು ರವರು,ಮಾಜಿ ನಗರಸಭಾ ಸದಸ್ಯರಾದ ಮುನಿರಾಮ್ ರವರು ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.