
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮೇ.17 ಟೀಕೆ ಮಾಡುವವರ ವಿರುದ್ಧ ಪ್ರತಿಕ್ರಿಯಿಸಿ ಕಾಲಹರಣ ಮಾಡುವ ಬದಲು ಕ್ಷೇತ್ರದಲ್ಲಿ ಜನರೊಂದಿಗೆ ಇದ್ದು ಕೆಲಸ ಮಾಡುವ ಮೂಲಕ ಟೀಕಾಕಾರರಿಗೆ ಉತ್ತರ ನೀಡುತ್ತೇನೆ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಹೇಳಿದರು.
ಪಟ್ಟಣದ ಹಗರಿ ಆಂಜನೇಯ ದೇವಸ್ಥಾನದಲ್ಲಿ ಅಭಿಮಾನಿ ಸುರೇಶ್ 1001ತೆಂಗಿನಕಾಯಿ ಒಡೆದು ಹರಕೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಂಗಳವಾರ ಪಾಲ್ಗೊಂಡು ಸುದಿಗಾರರೊಂದಿಗೆ ಮಾತನಾಡಿದರು. ಕ್ಷೇತ್ರದಲ್ಲಿ ಜನಪರ ಕೆಲಸಗಳನ್ನು ಮಾಡುವ ಮೂಲಕ ಅವರ ಋಣವನ್ನು ತೀರಿಸುವ ಹೊಣೆ ನನ್ನ ಮೇಲಿದೆ. ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಗೆಲ್ಲಿಸಿದ್ದಾರೆ. ಹಳ್ಳಿಗಳ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹರಿಸುವಂತಹ ಕ್ರಮ ಕೈಗೊಳ್ಳಲಾಗುವುದು. ಶೀಘ್ರದಲ್ಲಿ ಅಧಿಕಾರಿಗಳ ಸಭೆ ಕರೆದು ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಗುವುದು. ಹಳ್ಳಿಗಳಿಗೆ ಭೇಟಿ ನೀಡಿದಾಗ ಹಾರ ಶಾಲು ಉಡುಗೊರೆ ಡೊಳ್ಳು ಪಟಾಕಿ ಎಂದು ಹಣ ವ್ಯರ್ಥ ಮಾಡದೆ ನಿಮ್ಮೂರಿನ ಸಮಸ್ಯೆ ಹೇಳಿದರೆ ಪರಿಹಾರಕ್ಕೆ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಬಿ ಗಂಗಾಧರ್ ಭೋವಿ ವೀರೇಶ್ ಮಾಜಿ ಸದಸ್ಯ ಲಕ್ಷ್ಮಣ್ ಕಲಾಲ್, ತಾ ಪಂ ಮಾಜಿ ಸದಸ್ಯ ರುದ್ರಮುನಿ, ಮುಖಂಡರಾದ ವಿ ತಿರುಮಲೇಶ್ ಯುಕೆ ಕೊಟ್ರೇಶ್ ಚಿತ್ವಾಡಗಿ ಪ್ರಕಾಶ್, ಬ್ಯಾಟಿ ನಾಗರಾಜ್, ಬಸವರಾಜ್ ಕೊಟ್ರೇಶ್ ಅರುಣ್ ಕುಮಾರ್ ತಿಪ್ಪೇಸ್ವಾಮಿ ಸಿದ್ದರಾಜು ಇತರರಿದ್ದರು.