ಕ್ಷೇತ್ರದ ಜನರೇ ನನ್ನ ದೇವರು ಎಲ್ಲ ಸಮುದಾಯಗಳ ಏಳಿಗೆಗೆ ಬದ್ಧ : ಶಾಸಕ ಲಕ್ಷ್ಮಣ ಸವದಿ

ಅಥಣಿ : ಜೂ.11:ಕ್ಷೇತ್ರದ ಎಲ್ಲ ಸಮುದಾಯಗಳ ಏಳಿಗೆಗೆ ಪಣತೂಟ್ಟಿದ್ದೇನೆ. ಎಲ್ಲ ಸಮುದಾಯಗಳು ಅಭಿವೃದ್ಧಿ ಹೊಂದಬೇಕು ಎಂಬುವುದು ನನ್ನ ಕನಸಾಗಿದೆ ಇದನ್ನು ಸಾಕಾರಗೊಳಿಸಲು ಅವಿರತವಾಗಿ ಶ್ರಮಿಸುತ್ತೇನೆ.ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ತಮ್ಮ ನಿವಾಸದಲ್ಲಿ ತಾಲೂಕಿನ ಸತ್ತಿ ಗ್ರಾಮದ ಮುಸ್ಲಿಂ ಸಮುದಾಯದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ತಾಲೂಕಿನ ಸವಾರ್ಂಗೀಣ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಅನುದಾನ ತರಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು. ತಾಲೂಕಿನಲ್ಲಿರುವ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.
ಈ ವೇಳೆ ಶಾಸಕ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಿ ಸತ್ತಿ ಗ್ರಾಮದ ಮುಸ್ಲಿಂ ಮುಖಂಡರು ಮಾತನಾಡಿ ನಮ್ಮ ನೆಚ್ಚಿನ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಅವರ ಸತತ ಪ್ರಯತ್ನದಿಂದ ರಾಜ್ಯ ಅಲ್ಪಸಂಖ್ಯಾತ ಇಲಾಖೆಯಿಂದ ತಾಲೂಕಿನ ಸತ್ತಿ ಗ್ರಾಮದ ಈದ್ಗಾ ಮೈದಾನದ ಅಭಿವೃದ್ಧಿಗೆ 25 ಲಕ್ಷ ಮಂಜೂರಾಗಿತ್ತು ಅದರಲ್ಲಿ ಕಾಂಪೌಂಡ್ ಗೋಡೆ ಹಾಗೂ ನಮಾಜ ಸಲ್ಲಿಸಲು ಕಾಂಕ್ರೀಟ್ ಹಾಸಿನ ಕಾಮಗಾರಿ ಪೂರ್ಣಗೊಂಡಿದೆ ಇದರ ಶ್ರೇಯಸ್ಸು ಶಾಸಕರಾದ ಲಕ್ಷ್ಮಣ ಸವದಿ ಅವರಿಗೆ ಸಲ್ಲುತ್ತದೆ ಇಂತಹ ಶಾಸಕರನ್ನು ಪಡೆದ ನಾವು ಧನ್ಯರಾಗಿದ್ದೇವೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಂದರ್ಭದಲ್ಲಿ ಮೌಲಾನಾ ಇಸ್ಮಾಯಿಲ್, ಹಾಫಿಜ್ ಹಜರತ್, ಚಿಕ್ಕೋಡಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಆಸೀಫ್ ತಾಂಬೋಳಿ, ಜಡೇಪ್ಪಾ ಕುಂಬಾರ, ಹಾಜಿ ಬುಡನಸಾಬ ಅತ್ತಾರ, ಬುರಾನ ಮುಲ್ಲಾ, ದಾವಲ ಕೊರಬು, ಅಯೂಬ ಡಾಂಗೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ನನ್ನ ಪಾಲಿಗೆ ನನ್ನ ಕ್ಷೇತ್ರದ ಜನರೇ ನನ್ನ ದೇವರು, ಜನ ಸೇವೆಯೇ ನನ್ನ ಕಾಯಕ, ಕ್ಷೇತ್ರದ ಜನತೆ ನನ್ನ ಮೇಲೆ ವಿಶ್ವಾಸವಿಟ್ಟು 4 ನೇ ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಾರೆ ಅವರ ಋಣ ತೀರಿಸುವೆ.

                     ಲಕ್ಷ್ಮಣ ಸವದಿ ಶಾಸಕರು.