ಕ್ಷೇತ್ರದ ಜನರು ಬದಲಾವಣೆ ಬಯಸಿದ್ದಾರೆ: ಪದ್ಮನಾಭ ರೆಡ್ಡಿ

ಬೆಂಗಳೂರು,ಮೇ.೫- ಸರ್ವಜ್ಞ ನಗರ ಕ್ಷೇತ್ರದ ಜನತೆ ಬದಲಾವಣೆ ಬಯಸಿ ಈ ಬಾರಿ ಸ್ಥಳೀಯ ಬಿಜೆಪಿ ಅಭ್ಯರ್ಥಿಯನ್ನೆ ಗೆಲ್ಲಿಸುವ ನಿರ್ಧಾರಮಾಡಿದ್ದು, ಕ್ಷೇತ್ರದಲ್ಲಿ ಜನರು ನನಗೆ ಆಶೀರ್ವದಿಸಲಿದ್ದಾರೆ.ಎಂದು ಸರ್ವಜ್ಞ ನಗರ ಕ್ಷೇತ್ರದಬಿಜೆಪಿ ಅಭ್ಯರ್ಥಿ ಪದ್ಮನಾಭರೆಡ್ಡಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಬಾಣಸವಾಡಿ ವಾರ್ಡಿನ ಮುನಿಶಾಮಪ್ಪ ಲೇಔಟ್, ಚಿಕ್ಕ ಬಾಣಸವಾಡಿ, ದೊಡ್ಡಬಾಣಸವಾಡಿ ಜೈಜವಾನ್ ನಗರ, ಹಿರಪ್ಪ ಲೇಔಟ್ ನಲ್ಲಿ ಬಿರುಸಿನ ಪ್ರಚಾರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಹದಿನೈದು ವರ್ಷಗಳಿಂದ ಬೇಸತ್ತಿರುವ ಇಲ್ಲಿನ ಸ್ಥಳೀಯರು ಬದಲಾವಣೆ ಬಯಸಿದ್ದಾರೆ, ಕ್ಷೇತ್ರದಲ್ಲಿ ಡಬಲ್ ಇಂಜಿನ್ ಸರ್ಕಾರಕ್ಕೆ ಬೆಂಬಲ ಹಾಗೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾದ ನನಗೆ ಮತದಾರರು ಮತ ನೀಡುವ ಮೂಲಕ ಬಿಜೆಪಿಗೆ ಬಲ ನೀಡಲಿದ್ದಾರೆ ಎಂದರು.

ಸರ್ವಜ್ಞನಗರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವವರು, ಚಲಘಟ್ಟ, ರಾಮನಗರ, ಕೋಲಾರದಿಂದ ಬಂದಿರುವ ಅಭ್ಯರ್ಥಿಗಳನ್ನು ಮನೆಗೆ ಕಳಿಸಲು ನಿರ್ಧಾರ ಮಾಡಿದ್ದಾರೆ. ಚುನಾವಣೆ ಪ್ರಚಾರದ ಸಾವಿರಾರು ಅಧಿಕ ಜನರು ಭರವಸೆಯ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ಹೇಳಿದರು.
ಜನರ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ನಾನು ಕೆಲಸ ಮಾಡುತ್ತೇನೆ,ಸ್ಥಳೀಯ ಅಭ್ಯರ್ಥಿಯಾಗಿರುವುದರಿಂದ ಸಮಸ್ಯೆಗಳ ಬಗ್ಗೆ ಅರಿವಿದ್ದು ಜನತೆಯ ಕೂಗಳತೆಯ ದೂರದಲ್ಲಿ ಇರುವ ಕಾರಣ ಮನೆಮಗನಂತೆ ಕಾರ್ಯಮಾಡುತ್ತೆನೆಂದು ನುಡಿದರು.
ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಮೂಲಕ, ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಪದ್ಮನಾಭರೆಡ್ಡಿಗೆ ಮತ ನೀಡುವಂತೆ ಕೋರಿದರು.
ಪ್ರಚಾರದ ವೇಳೆ ಸರ್ವಜ್ಞನಗರ ಬಿ.ಜೆ.ಪಿ ಅಭ್ಯರ್ಥಿ ಪದ್ಮನಾಭರೆಡ್ಡಿ , ಬಿ.ಜೆ.ಪಿ.ಯುವ ಮೋರ್ಚಾ ಅಧ್ಯಕ್ಷರಾದ ಅಭಿಲಾಷ್ ರೆಡ್ಡಿ,ಸರ್ವಜ್ಞನಗರ ಬಿ.ಜೆ.ಪಿ ಮುಖಂಡರಾದ ಜಗದೀಶ್ ರೆಡ್ಡಿ, ಎಂ.ಎನ್ ರೆಡ್ಡಿ ಇದ್ದರು.

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮನಾಭರೆಡ್ಡಿ ಅವರು ಸರ್ವಜ್ಞನಗರ ಕ್ಷೇತ್ರದ ನಾಗವಾರ, ನಾಗವಾರ ಜಂಕ್ಷನ್ ವಿವಿಧೆಡೆ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸೂರ್ಯ ನಾರಾಯಣ ರಾವ್, ಜಗನ್ನಾಥ್ ರೆಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮನಾಭರೆಡ್ಡಿ ಅವರು ಸರ್ವಜ್ಞನಗರ ಕ್ಷೇತ್ರದ ನಾಗವಾರ, ನಾಗವಾರ ಜಂಕ್ಷನ್ ವಿವಿಧೆಡೆ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಗೋವಿಂದರಾಜು, ಬಿಜೆಪಿ ಮುಖಂಡರಾದ ಸೂರ್ಯ ನಾರಾಯಣ ರಾವ್, ಜಗನ್ನಾಥ್ ರೆಡ್ಡಿ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.