ಕ್ಷೇತ್ರದ ಜನರು ಕಣ್ಣೀರಿಗೆ ಬಲಿಯಾಗಿದ್ದಾರೆ:ಭೀಮಾನಾಯ್ಕ್ಸಂ

 ಜೆವಾಣಿ ವಾರ್ತೆಕೊಟ್ಟೂರು, ಆ.16:  2023ರ ವಿಧಾನಸಭಾ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಜನರು ಕಣ್ಣೀರಿಗೆ ಬಲಿಯಾಗಿ ಮತ ನೀಡಿದ್ದಾರೆ. ಈಗ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಎಲ್ಲಾ ಜನರು ಕಣ್ಣೀರು ಹಾಕುವಂತಹ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಮಾಜಿ ಶಾಸಕ ಹಾಗೂ ಕೆಎಂಎಫ್ ನ ರಾಜ್ಯ ಅಧ್ಯಕ್ಷ   ಭೀಮಾನಾಯ್ಕ್ ಅಭಿವ್ಯಕ್ತಪಡಿಸಿದರು. ತಾಲೂಕಿನ ಬೋರನಹಳ್ಳಿ ಗ್ರಾಮದಲ್ಲಿ 8 ಅಡಿ ಎತ್ತರದ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.ಬೋರನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಆರು ತಿಂಗಳ ಹಿಂದೆಯೇ ನಿರ್ಮಿಸಬೇಕಾಗಿತ್ತು. ರಾಜಕೀಯ ಕುತಂತ್ರಿಗಳು, ಸಮಾಜಘಾತಕರಿಂದ ತಡೆ ಹಿಡಿಯಲಾಗಿತ್ತು.  ಈಗ ಇದರ ಅನಾವರಣ ಭಾಗ್ಯ ಸಿಕ್ಕಿದೆ ಎಂದರು. ಮಸಾರಿ ನೆಲ್ಕುದುರೆ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿತ್ತು. ಅಂದು ಚುನಾವಣೆಯ ನೀತಿ ಸಂಹಿತೆ ಇರಲಿಲ್ಲ ಆದರೂ ಕೆಲ ರಾಜಕೀಯ ಕುತಂತ್ರಿಗಳಿಂದ ಗ್ರಾಮ ಪಂಚಾಯತಿಯಲ್ಲಿ ಪರವಾನಿಗೆ ತೆಗೆದುಕೊಂಡಿಲ್ಲ ಎಂದು ಮೂರ್ತಿಯನ್ನು ತೆಗೆದು ಹಾಕಿದರು. ಕೆಲವೇ ದಿನಗಳಲ್ಲಿ ಈ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ನಿರ್ಮಾಣ ಮಾಡೇ ಮಾಡುತ್ತೇವೆ ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ಅಯ್ಯನಹಳ್ಳಿ, ರಾಂಪುರ, ಹರಾಳು ಗ್ರಾಮದಲ್ಲಿ ಇದೇ ಮಾದರಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆಯನ್ನು ನೀಡಿದರು.ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಧೈರ್ಯ, ಮಾತಿನ ಗಾಂಭೀರ್ಯತೆ ನೋಡಿದರೆ ಸಂಗೊಳ್ಳಿ ರಾಯಣ್ಣನ ಪ್ರತಿ ರೂಪ ಅವರಲ್ಲಿ ಕಾಣುತ್ತಿದ್ದೇವೆ ಎಂದರು.ಈಗಿನ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕರು ನಾವು ನಿರ್ಮಿಸಿದ ಸಿಸಿ ರಸ್ತೆಯಲ್ಲಿನ ಕಸ ಸಹ ಗೂಡಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.ನಾನು ಚುನಾವಣೆಯಲ್ಲಿ ಸೋತಿರಬಹುದು ಆದರೆ  ವರ್ಷಕ್ಕೆ 22 ಸಾವಿರ ಕೋಟಿ ವ್ಯವಹಾರ ಇರುವಂತಹ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷನಾಗಿ ಮಾಡಿರುವುದು ನನ್ನ ಭಾಗ್ಯ ಎಂದು ತಿಳಿಸಿದರು.ಪ್ರಾಸ್ತಾವಿಕವಾಗಿ ನಾಗರಾಜ್ ಮಗ್ಗದ ಮಾತನಾಡಿ ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಸ್ವಾತಂತ್ರ್ಯ ದಿನಾಚರಣೆದಂದು, ಮರಣ ಹೊಂದಿದ್ದು ಗಣರಾಜ್ಯೋತ್ಸವದಂದು ಇದೆ ಅವರ ವಿಶೇಷತೆ ಎಂದು ತಿಳಿಸಿದರು.ನಂತರ ಯೋಗಿ ರಾಜೇಂದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಸಂಗೊಳ್ಳಿ ರಾಯಣ್ಣನಂತಹ ದೇಶ ಭಕ್ತರ  ಭಾವಚಿತ್ರವನ್ನು ಪ್ರತಿಯೊಬ್ಬರ ಮನೆಯಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಅವರ ಧೈರ್ಯ ಸಾಹಸವನ್ನು ನಾವುಗಳು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ಕುರುಬ ಸಂಘದ ನಿರ್ದೇಶಕರಾದ ಮರಿ ರಾಮಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದ್ವಾರಕೀಶ್, ಕುರಿ ಶಿವಮೂರ್ತಿ, ಎ. ನಂಜಪ್ಪ, ಶಿವಕುಮಾರ್, ಗೂಳಿ ಮಲ್ಲಿಕಾರ್ಜುನ್, ಅಡಿಕೆ ಮಂಜುನಾಥ್, ಪಿ. ಎಚ್. ದೊಡ್ಡರಾಮಣ್ಣ, ಮೈಲಾರಪ್ಪ ಹಾಗೂ ಊರಿನ ಗ್ರಾಮಸ್ಥರು ಯುವಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಕುರುಬ ಸಂಘದ ತಾಲೂಕು ಅಧ್ಯಕ್ಷ ಮೂಗಣ್ಣ ಸ್ವಾಗತ ಕೋರಿದರು. ಶಶಿಕುಮಾರ್ ನಿರೂಪಿಸಿದರು.ಉಪನ್ಯಾಸಕರಾದ ಅಂಜಿನಪ್ಪ ಉಪನ್ಯಾಸ ನೀಡಿದರು.ಸುಮಾರು 4 ಲಕ್ಷ ವೆಚ್ಚದ ಎಂಟು ಅಡಿ ಎತ್ತರದ ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಾಣ ಮಾಡಲಾಗಿದೆ, ಈ ಪ್ರತಿಮೆಯು ನೋಡುಗರನ್ನು ಆಕರ್ಷಿಸುವಂತಿದೆ.