ಕ್ಷೇತ್ರದ ಜನತೆಯಲ್ಲಿ ವಿಶ್ವಾಸ ಮೂಡಿಸಿದ ಡಾ.ಸುದರ್ಶನ್

ಲಿಂಗಸೂಗೂರು,ಜ.೧೯-
ಇಂದು ಯಾದಗಿರಿ ಜಿಲ್ಲೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಪ್ರಧಾನಿ ಆಗಮಿಸುತ್ತಿರುವುದರಿಂದ ಲಿಂಗಸೂಗೂರ ವಿಧಾನಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಸುದರ್ಶನ್ ಸಜ್ಜನ್ ಅವರ ನೇತೃತ್ವದಲ್ಲಿ ಲಿಂಗಸೂಗೂರಿನಿಂದ ೧೦೦ ಕ್ರಷರ್‌ನಲ್ಲಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಜೊತೆಗೆ ಯಾದಗಿರಿಗೆ ಕರೆದೊಯ್ಯುವುದರ ಮುಖಾಂತರ ಕ್ಷೇತ್ರದ ಜನತೆಯಲ್ಲಿ ಭರವಸೆ ಹಾಗೂ ವಿಶ್ವಾಸ ಮೂಡಿಸಿದ್ದಾರೆ ಎಂದು ಮಾಜಿ ಬಿಜೆಪಿ ತಾ.ಉಪಾಧ್ಯಕ್ಷರಾದ ಆನಂದ್ ಅವರು ತಿಳಿಸಿದರು.
ಕ್ಷೇತ್ರದಲ್ಲಿರುವ ಹಲವಾರು ಹಳ್ಳಿಗಳಿಂದ ಬಿಜೆಪಿ ಪಕ್ಷದ ಅನೇಕ ಕಾರ್ಯಕರ್ತರು ಇಂದು ಮೋದಿಜಿ ಅವರನ್ನು ನೋಡಲು ಅವರ ಮಾತುಗಳನ್ನ ಕೇಳಲು ಕಾತುರದಿಂದ ಇದ್ದೆವು ಇಂದು ಸುದರ್ಶನ್ ಅವರ ಸಹಕಾರದಿಂದ ಎಲ್ಲರಿಗೂ ಸಂತೋಷವಾಗಿದೆ, ನಮ್ಮ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸುದರ್ಶನ್ ಅವರಿಂದ ಪಕ್ಷದ ಸಂಘಟನೆ ಮತ್ತಷ್ಟು ಬಲಿಷ್ಠವಾಗಿದೆ ಎಂದು ಶ್ರೀರಾಮ ಸೇನೆ ತಾಲೂಕು ಘಟಕದ ಅಧ್ಯಕ್ಷರಾದ ರಘು ಅವರು ತಿಳಿಸಿದರು.
ನಮ್ಮ ದೇಶದ ಪ್ರಧಾನಿ ಅಭಿವೃದ್ಧಿಯ ಹರಿಕಾರರಾದ ಮೋದಿಜೀ ಅವರ ಆಶೀರ್ವಾದ ಪಡೆದು ಈ ಕಾರ್ಯಕ್ರಮ ಮುಗಿದ ನಂತರ ನಾಳೆಯಿಂದ ಪಕ್ಷದ ಎಲ್ಲಾ ಕಾರ್ಯಕರ್ತರ ಸಭೆ ಮಾಡಿ ಪಕ್ಷದ ಹಿರಿಯ ಮುಖಂಡರ ಸಲಹೆ ಪಡೆದು,ಪಕ್ಷದ ಸಂಘಟನೆಗಾಗಿ ಹಾಗೂ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ, ಮತ್ತು ಇನ್ನೂ ನಮ್ಮ ಕ್ಷೇತ್ರದಲ್ಲಿ ಮೂಲಭೂತ ಕಾರ್ಯಗಳು ಆಗಬೇಕಿದೆ ಅವುಗಳನ್ನು ಜನರಿಗೆ ಹೇಳುಬೇಕಾಗಿರುವುದರಿಂದ ಜನರ ಮನೆ-ಮನೆಗೆ ಹೋಗುವಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು, ದೇಶದ ಪ್ರಧಾನಿ ಬರುವಾಗ ನಮ್ಮ ಕ್ಷೇತ್ರದ ಜನರನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲೆ ಇರುತ್ತದೆ ಹಾಗಾಗಿ ಕ್ಷೇತ್ರದಲ್ಲಿರುವ ಮತದಾರರನ್ನು, ಕಾರ್ಯಕರ್ತರನ್ನ ಕರೆದುಕೊಂಡು ಹೋಗುವ ಕೈಲಾದಷ್ಟು ಜವಾಬ್ದಾರಿ ನಾನು ತೆಗಿದುಕೊಂಡು ಅವರನ್ನು ಯಾದಗಿರಿಗೆ ಕರೆದುಕೊಂಡು ಬಂದಿರುವೆ ಎಂದು ಸುದರ್ಶನ್ ಸಜ್ಜನ್ ತಿಳಿಸಿದರು.
ಈ ಸಂಧರ್ಭದಲ್ಲಿ ಶ್ರೀರಾಮ ಸೇನೆ ತಾಲೂಕು ಘಟಕ ಅಧ್ಯಕ್ಷರಾದ ರಘು, ಪಂಪಣ್ಣ ಬೇರಿ, ಧರ್ಮ ಜಗ್ಗಣ್ಣ ಜಿಲ್ಲಾ ಸಂಯೋಜಕರು, ಕೆ.ಕಳಿಮಠ ಮಾಜಿ ಜಿಲ್ಲಾ ಘಟಕ ಅಧ್ಯಕ್ಷರು ರಕ್ಷಣಾ ವೇದಿಕೆ, ಹಾಗೂ ಬಿಜೆಪಿ ಮಾಜಿ ತಾ.ಉಪಾಧ್ಯಕ್ಷರಾದ ಆನಂದ್, ಆರ್ ಎಸ್ ಎಸ್ ನಾಗರೆಡ್ಡಿ ಸೇರಿದಂತೆ ಇನ್ನಿತರರು ಕ್ಷೇತ್ರದ ಹಲವಾರು ಬಿಜೆಪಿ ಪಕ್ಷದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.