ಕ್ಷೇತ್ರದ ಕೆಲಸ ಮಾಡುವ ಮೂಲಕ ಜನರ ಋಣ ತೀರಿಸುವೆ: ನಾಯಕ

ದೇವದುರ್ಗ.ಜು,೨೮-ಅಧಿಕಾರ ಶಾಶ್ವತವಲ್ಲ ಅವಕಾಶ ಸಿಕ್ಕಾಗ ಅಭಿವೃದ್ಧಿ ಮಾಡುವದು ಮುಖ್ಯವಾಗಿದ್ದು ಅದಕ್ಕೆ ಪೂರಕವಾಗಿ ಶ್ರಮಿಸಲಾಗುತ್ತಿದೆ, ಕ್ಷೇತ್ರದ ಸಂಪೂರ್ಣ ಅಭಿವೃಧ್ದಿಗಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಜೊತೆಗೆ ಕ್ಷೇತ್ರದ ಜನರ ಸಮಸ್ಯೆಗಳಿಗೆ ನಿರಂತರವಾಗಿ ಶ್ರಮಿಸಲಾಗುವುದು ಎಂದು ಶಾಸಕ ಕೆ.ಶಿವನಗೌಡ ನಾಯಕ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಬಿಜೆಪಿ ಸೇರ್ಪಡೆ ಕಾರ್ಯಕ್ರಮದ ನಂತರ ಮಾತನಾಡಿದರು. ಗ್ರಾಮಗಳ ಅಭಿವೃದ್ಧಿಗಾಗಿ ನಾವು ನಿರಂತರವಾಗಿ ಶ್ರಮಿಸುತ್ತಿದ್ದು ಪಕ್ಷ ಸೇರ್ಪಡೆಯಾದ ತಾವುಗಳು ಪಕ್ಷ ಸಂಘಟನೆಯತ್ತ ಗಮನಹರಿಸುವದರ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಡಾ.ನಾಡಗೌಡ್ರು ಅರಕೇರ, ಶರಣಪ್ಪ ಗೌಡ ಕೊರವಿ ಗಬ್ಬೂರು, ಸತೀಶ್ ಬಂಡೆಗುಡ್ಡ, ನಾಗರಾಜ್ ಪಾಟೀಲ್ ಗೋಪಾಳಾಪುರ, ಜಹೀರ್ ಪಾಷಾ ಇಡಪನೂರು, ನಾಗರಾಜ್ ಅಕ್ಕರಕಿ, ಗೋಪಾಲಕೃಷ್ಣ ಮೇಟಿ, ಮಲ್ಲಿಕಾರ್ಜುನ ಪಾಟೀಲ್ ಹಿರೇಬುದೂರು, ಬಸವರಾಜ ಕೊಪ್ಪೂರು, ತಿರುಪತಿ ನಾಯಕ್ ಶಿವರಾಜ್ ಟಣಕಣಮರಡಿ ,ವೆಂಕಟೇಶ್ ದೊರೆ,ನಿಜಗುಣಯ್ಯ ಸ್ವಾಮಿ, ಲಕ್ಷ್ಮಣಗೌಡ, ಆಂಜನೇಯ, ಹನುಮಂತ್ರಾಯ ಗೌಡೇರು, ಸೇರಿದಂತೆ ಇತರರು ಇದ್ದರು.