ಕ್ಷೇತ್ರದ ಕಾರ್ಯಕರ್ತರ, ಹೈಕಮಾಂಡ ನಿರ್ಣಯಕ್ಕೆ ಬದ್ಧ


ಚನ್ನಮ್ಮನ ಕಿತ್ತೂರ-25 ಎಲ್ಲರೂ ಶೀಘ್ರ ಗುಣಮುಖರಾಗಲು ಮಾಜಿ ಸಚಿವ ಡಿ.ಬಿ.ಇನಾಮದಾರವರು ಬೇಗನೇ ಆರೋಗ್ಯಕರವಾಗಿ ಹೊರಬರಲೆಂದು ನಾವು-ನೀವೆಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದು ಕಾಂಗ್ರೇಸ್ ಮುಖಂಡ ವಿಕ್ರಮ್ ಇನಾಮದಾರ ಹೇಳಿದರು.
ಸಮೀಪದ ನೇಗಿಹಾಳದ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊದಲು ಅವರ ಆರೋಗ್ಯ ಸಂಪೂರ್ಣ ಚೇತರಿಕೆಗೊಳ್ಳಲಿ. ಟಿಕೇಟ್ ನೀಡುವ ವಿಚಾರ ಕಾರ್ಯಕರ್ತರಿಗೆ, ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು.
ಈ ವೇಳೆ ಕಾರ್ಯಕರ್ತರು ಮಾತನಾಡಿ ನಿರಂತರ 40 ವರ್ಷದಿಂದ ಕಾಂಗ್ರೇಸ್ ಪಕ್ಷಲಿದ್ದುಕೊಂಡು ಪಕ್ಷ ಬೆಳೆಸಿದ್ದಾರೆ. ಅದನ್ನರಿತು ಹೈಕಮಾಂಡ್‍ನವರು ಲಕ್ಷ್ಮೀಯವರಿಗೆ ಟಿಕೇಟ್ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಲಕ್ಷ್ಮೀ ಇನಾಮದಾರ ಮಾತನಾಡಿ ತಂದೆಯ ಸ್ಥಾನದಲ್ಲಿದ್ದ ನನ್ನ ಮಾವನವರಾದ ಮಾಜಿ ಸಚಿವ ಡಿ,ಬಿಇನಾಮದಾವರು ಹಾಗೂ ಕಾರ್ಯಕರ್ತರ ನಿರ್ಣಯಕ್ಕೆ ಬದ್ದನಿದ್ದೇನೆ ಎಂದರು.
ಸಮಾಜಸೇವಕ ಹಬೀಬ ಶಿಲ್ಲೇದಾರ ಮಾತನಾಡಿ ಕ್ಷೇತ್ರದಲ್ಲಿ ಡಿ.ಬಿ. ಇನಾಮದಾರವರ ಮುಂಖಡತ್ವದಲ್ಲಿ ಕಾಂಗ್ರೇಸ್ ಟಿಕೇಟ್ ಗಿಟ್ಟಿಸಿಕೊಂಡವರನ್ನು ಗೆಲ್ಲಿಸುವುದೇ ನಮ್ಮ-ನಿಮ್ಮೇಲ್ಲರ ಗುರಿ . ನಾವೇಲ್ಲರೂ ಜೊತೆಗೂಡಿ ದುಡಿಯೋಣವೆಂದರು.
ಕೆಪಿಸಿಸಿ ಸಂಯೋಜಕ ಪಿಕೆ ನೀರಲಕಟ್ಟಿ, ಶಂಕರ ಹೊಳಿ, ಸಾವಂತ ಕಿರಬನವರ, ರಾಜೇಂದ್ರ ಇನಾಮದಾರ, ಕಲ್ಲಪ್ಪ ಕುಗಟಿ ಮಾತನಾಡಿದರು.
ಈ ವೇಳೆ ಮಾಜಿ ಜಿ.ಪಂ. ಸದಸ್ಯೆ ರಾಧಾ ಕಾಂದ್ರೋಳ್ಳಿ, ಉದ್ಯಮಿ ರಾಜೇಂದ್ರ ಅಂಕಲಗಿ, ಮಾಧ್ಯಮ ವಕ್ತಾರ ಗುಲಾಬ ಬಾಳೆಕುಂದರಗಿ, ನಿಂಗಪ್ಪ ತಡಕೋಡ, ಬಾಳಾಸಾಹೇಬ ದೇಸಾಯಿ ವಿಜಯಕುಮಾರ ಶಿಂಧೆ, ಮಹಾಂತೇಶ ಪಾಶ್ಚಾಪೂರ, ದೇವುಗೌಡ ಪಾಟೀಲ, ಸಂಜು ಲೋಕಾಪೂರ, ರಮೇಶ ಮೊಕಾಶಿ, ಉಮೇಶ ಹುಂಬಿ, ಅಪ್ಪೇಶ ದಳವಾಯಿ, ಶಿವು ಸಾವನ್ನವರ, ಮಹೆಬೂಬ ಮಕಾನದಾರ, ಕಾರ್ಯಕರ್ತರು ಸೇರಿದಂತೆ ಇತರಿದ್ದರು.