ಕ್ಷೇತ್ರದ ಅಭಿವೃದ್ಧಿ ನಾರಾಯಣರಾವ್ ಕನಸಾಗಿತ್ತು : ಸಿದ್ದರಾಮಯ್ಯ

ಬಸವಕಲ್ಯಾಣ ಅ 26: ಬಸವ ಕಲ್ಯಾಣ ಕ್ಷೇತ್ರದ ಅಭಿವೃದ್ಧಿ ದಿವಂಗತ ಬಿ ನಾರಾಯಣರಾವ್ ಕನಸಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದಿವಂಗತ ಶಾಸಕ ಬಿ ನಾರಾಯಣರಾವ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅವರ ಕುಟುಂಬದ ಸದಸ್ಯರಿಗೆ ನಾವು ನಿಮ್ಮನ್ನು ಯಾವತ್ತೂ ಕೈ ಬಿಡುವುದು ಇಲ್ಲ ಎಂದು ಧೈರ್ಯ ತುಂಬಿದರು. ಬಿ ನಾರಾಯಣ ರಾವ್ ಹೋರಾಟ ಬಡ ಜನರ ಪರವಾಗಿ ಇತ್ತು. ಅವರು ಬಸವಣ್ಣನವರ ಕರ್ಮ ಭೂಮಿ ಅಭಿವೃದ್ಧಿ ಹೊಂದಬೇಕು. ಅದನ್ನು ಮಾಡಿಯೇ ಮಾಡುತ್ತೇನೆ ಎಂದು ಅವರು ಗುರಿ ಇಟ್ಟುಕೊಂಡಿದ್ದರು. ಅದು ಆಗಿಲ್ಲ.ಕೆಲಸ ಅರ್ಧಕ್ಕೆ ಉಳಿದಿದೆ. ನಮ್ಮ ಪಕ್ಷದ ಶಾಸಕರು ಮುಂದುವರಿಸಿ ಕೊಂಡು ಹೋಗಬೇಕು. ಕಾಂಗ್ರೆಸ್ ಪಕ್ಷದ ಶಾಸಕರ ಸ್ಥಾನ ಉಳಿಸಿಕೊಂಡು ಹೋದರೆ,ಬಿ ನಾರಾಯಣರಾವ್ ರವರ ಕನಸು ನನಸಾಗಿಸಲು ಸಾಧ್ಯವಾಗುತ್ತದೆ, ಕಾಂಗ್ರೆಸ್ ಸ್ಥಾನ ಗೆಲ್ಲಲು ಸಾಕಷ್ಟು ಶ್ರಮಪಟ್ಟಿದ್ದಾರೆ. ಈ ಸ್ಥಾನ ಕಳೆದು ಕೊಂಡರೆ ಬಸವಣ್ಣನವರ ಕರ್ಮ ಭೂಮಿಯನ್ನು ಯಾರಿಂದಲೂ ಅಭಿವೃದ್ಧಿ ಪಡಿಸಲು ಸಾಧ್ಯ ವಿಲ.್ಲ ಕಾಂಗ್ರೆಸ್ ಸರ್ಕಾರ ಶರಣರ ಸ್ಮಾರಕ ಗಳ ಅಭಿವೃದ್ಧಿ ಗೋಸ್ಕರ ಪ್ರಾಧಿಕಾರ ತಂದಿದೆ. ಬಸವಕಲ್ಯಾಣ ಅಭಿವೃದ್ಧಿಗೆ ನಮ್ಮ ಸರ್ಕಾರ ಹೆಚ್ಚಿನ ಅನುದಾನವನ್ನು ನೀಡಿದೆ.ಕ್ಷೇತ್ರದ ಜನರು ನಮ್ಮ ಸರ್ಕಾರದ ಅಭಿವೃದ್ಧಿ ಮೆಚ್ಚುಗೆ ವ್ಯಕ್ತಪಡಿಸಿ ಬಿ ನಾರಾಯಣ ರಾವ್‍ರನ್ನು ಗೆಲ್ಲಿಸಿದ್ದಾರೆ. ಬಸವಕಲ್ಯಾಣ ಮತದಾರರು ನಮ್ಮ ಪರವಾಗಿ ಇದ್ದಾರೆ.ಮುಂದೆ ಕೂಡಾ ನಮ್ಮ ಪಕ್ಷದ ಅಭ್ಯರ್ಥಿಗೆ ಗೆಲ್ಲುಸುತ್ತಾರೆ ಎಂಬ ನಂಬಿಕೆ ಇದೆ ಎಂದರು. ಮಾಜಿ ಸಚಿವ ಈಶ್ವರ ಖಂಡ್ರೆ ಮಾತನಾಡಿ ಬಸವಣ್ಣನವರ ಕ್ಷೇತ್ರದ ಅಭಿವೃದ್ಧಿ ಗೆ ನೀಡಿರುವ ಅನುದಾನ ಕಾಮಗಾರಿ ಇನ್ನೂ ಪೂರ್ಣವಾಗದೇ ಉಳಿದಿದೆ. ನಾನು ಸಚಿವ ಸಂಪುಟದಲ್ಲಿ ಇದ್ದಾಗ ಇಟ್ಟ ಅನುದಾನ ಹಣದಲ್ಲಿ ಬಹಳಷ್ಟು ಕಾಮಗಾರಿ ನಡೆದಿವೆ. ಅನೇಕರು ಇತ್ತೀಚಿನ ದಿನಗಳಲ್ಲಿ ಬಂದು ಬಸವಕಲ್ಯಾಣ ಅಭಿವೃದ್ಧಿ ಗೆ ನಾವು ಅನುದಾನ ನೀಡಿದ್ದೇವೆ ಎಂದು ಸುಳ್ಳು ಹೇಳಿ ಮತದಾರರಿಗೆ ದಾರಿ ತಪ್ಪಿಸುತ್ತಿದ್ದಾರೆ.ಜನರು ಜಾಗ್ರತೆ ವಹಿಸಬೇಕು ಸುಳ್ಳು ಹೇಳುವವರು ಅಭಿವೃದ್ಧಿ ಮಾಡಲು ಸಾಧ್ಯ ವಿಲ್ಲ. ಕಾಂಗ್ರೆಸ್ ಎಂದರೆ ಬಸವ ತತ್ವ, ಸಾಮಾಜಿಕ ಸಮಾನತೆ ಸಿದ್ಧಾಂತದ ಪಕ್ಷ.ನಮ್ಮ ಪಕ್ಷದಿಂದ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಮುಂದೆ ನಮ್ಮ ಪಕ್ಷದ ಅಭ್ಯರ್ಥಿ ಗೆದ್ದು ಬರುತ್ತಾರೆ ಇನ್ನೂ ಅಭಿವೃದ್ಧಿ ಕೆಲಸ ಮಾಡುತ್ತೇವೆ ಎಂದರು
ಮಾಜಿ ಸಚಿವ ರಾಜಶೇಖರ ಪಾಟೀಲ, ರಹಿಮಖಾನ,ಶಾಸಕ ಡಾ. ಅಜಯ್ ಸಿಂಗ್, ಅರವಿಂದ್ ಅರಳಿ,ವಿಜಯ ಸಿಂಗ್, ಮಾತನಾಡಿದರು,
ಯಶೋದಾ ರಾಠೋಡ, ಮೀನಾಕ್ಷಿ ಸಂಗ್ರಾಮ, ರವಿ ದಾಸ ಘೋಡೆ, ಪಂಡಿತ ಚಿದ್ರಿ, ಮಾಲಾಬಾಯಿ ಬಿ ನಾರಾಯಣ ರಾವ್, ಗೌತಮ ಬಿ ನಾರಾಯಣ ರಾವ್, ಸಂಜಯ ಸಿಂಗ್ ಹಜಾರಿ, ಅಜರಲಿ ನವರಂಗ, ಶಂಕರ ಜಮಸದಾರ,ಈಶ್ವರ ಬೋಕ್ಕೆ ಸೇರಿದಂತೆ ಕಾಂಗ್ರೆಸ್ ಹಿರಿಯ ಮುಖಂಡರು, ಅಭಿಮಾನಿಗಳು ಅಪಾರವಾದ ಸಂಖ್ಯೆಯಲ್ಲಿ ಇದ್ದರು.