ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ : ಲಕ್ಷ್ಮಣ ಸವದಿ

ಅಥಣಿ :ಮಾ.2: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಶುದ್ದ ಕುಡಿಯುವ ನೀರು, ಕೃಷಿ, ಆರೋಗ್ಯ,. ಶಿಕ್ಷಣ ಹಾಗೂ ಸುಗಮ ಸಂಚಾರಕ್ಕೆ ಉತ್ತಮ ರಸ್ತೆಗಳು ಸೇರಿದಂತೆ ರೈತರ ಏಳಿಗೆಗೆ ಪೂರಕವಾದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಪ ಸದಸ್ಯ ಲಕ್ಷ್ಮಣ ಸವದಿ ಅವರು ಹೇಳಿದರು

ಅವರು ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ 2 ಕೋಟಿ ವೆಚ್ಚದ ಕೋಹಳ್ಳಿ-ರಾಮತೀರ್ಥ ರಸ್ತೆ, ನಿರ್ಮಾಣ ಕಾಮಗಾರಿ, ಕೋಹಳ್ಳಿ ಗ್ರಾಮದ ಬಾವನದಡ್ಡಿಯಲ್ಲಿ 1ಕೋಟಿ. ವೆಚ್ಚದ ಕೊಟ್ಟಲಗಿ ರಸ್ತೆಯಿಂದ ಕೇಸ್ಕರದಡ್ಡಿ-ರಾಮತೀರ್ಥ ಕ್ರಾಸ್ ರಸ್ತೆ ನಿರ್ಮಾಣ ಕಾಮಗಾರಿ, ರಾಮತೀರ್ಥ ಗ್ರಾಮದಲ್ಲಿ 1ಕೋಟಿ. ವೆಚ್ಚದ ರಾಮತೀರ್ಥ-ಬ್ರಿಡ್ಜ್/ಬಾಂದಾರ ನಿರ್ಮಾಣ ಕಾಮಗಾರಿ, ಐಗಳಿ ಗ್ರಾಮದಲ್ಲಿ 3 ಕೋಟಿ ವೆಚ್ಚದಲ್ಲಿ ಅಥಣಿ ತಾಲೂಕಿನ ಬಡಚಿ-ಐಗಳಿ ರಸ್ತೆ ಸುಧಾರಣೆ ಕಾಮಗಾರಿ, ಕೊಕಟನೂರ ಗ್ರಾಮದಲ್ಲಿ 5 ಕೋಟಿ ವೆಚ್ಚದ ಕೊಕಟನೂರ ಹಿರೇಹಳ್ಳಕ್ಕೆ ಬ್ರಿಡ್ಜ್ ನಿರ್ಮಾಣ ಕಾಮಗಾರಿ, 2 ಕೋಟಿ 50 ಲಕ್ಷ ರೂ ವೆಚ್ಚದಲ್ಲಿ ಕೊಕಟನೂರ- ಎಸ್ ಸಿ ಕಾಲನಿ ಶಿರಹಟ್ಟಿ ಆರ್ ಸಿ-1 ರಸ್ತೆ ನಿರ್ಮಾಣ ಕಾಮಗಾರಿ, 2 ಕೋಟಿ 50 ಲಕ್ಷ ರೂ ವೆಚ್ಚದಲ್ಲಿ ಕೊಕಟನೂರ- ಎಸ್ ಸಿ ಕಾಲನಿ ಶಿರಹಟ್ಟಿ ಆರ್ ಸಿ-2 ರಸ್ತೆ ನಿರ್ಮಾಣ ಕಾಮಗಾರಿ, ಹಾಗೂ1 ಕೋಟಿ ವೆಚ್ಚದ ಯಲ್ಲಮ್ಮವಾಡಿ ಹಳ್ಳಕ್ಕೆ ಬ್ರಿಡ್ಜ್/ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಒತ್ತು ನೀಡಲಾಗಿದೆ, ಬಿಜೆಪಿ ಸರಕಾರ ಎಲ್ಲ ವರ್ಗದ ಹಾಗೂ ಎಲ್ಲ ಕ್ಷೇತ್ರಗಳಿಗೆ ಭರಪೂರ ಅನುದಾನ ನೀಡಿ ಹಳ್ಳಿಗಳ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿದೆ ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ, ಕಾಮಗಾರಿಗಳು ಗುಣಮಟ್ಟದಿಂದ ಕೂಡರಿಬೇಕು.ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಂಡು ನಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿಬೇಕೆಂದು ಹೇಳಿದರು.
ಈ ವೇಳೆ ಗುತ್ತಿಗೆದಾರರಾದ ನಿಂಗಯ್ಯ ಮಠಪತಿ, ಎಚ್ ಬಿ ದಳವಾಯಿ, ಶಿವಾನಂದ ಮಾಲಗಾಂವಿ, ಶಿವರುದ್ರ ಘೂಳಪ್ಪನ್ನವರ, ರಾಮನಗೌಡ ಸಾಸನೂರ, ರುದ್ರಗೌಡ ಹೊಸಮನಿ, ಶಿವಾನಂದ ನಾಯಿಕ, ಯಲ್ಲಪ್ಪ ಢಪರೆ, ಸಂತೋಷ ಗಾಣಿಗೇರ, ಮುಖಂಡರಾದ ಶಿವಾನಂದ ಹುನ್ನೂರ, ರಮೇಶ ಕಾಗಲೆ, ಕುಮಾರ ಗೊಟ್ಟಿ, ಶ್ರೀಶೈಲ ನಾಯಿಕ, ಸುಭಾಶ ಸೋನಕರ, ಅರುಣ ಭಾಸಿಂಗಿ, ಅರ್ಜುನ ಪವಾರ, ಅಧಿಕಾರಿಗಳಾದ ಪ್ರವೀಣ ಹಣಸಿಕಟ್ಟಿ, ಶ್ರೀಕಾಂತ ಮಾಕಾಣಿ, ತಮ್ಮಣ್ಣ ಮಗರ, ಸುರೇಶ ಪಾಠಣಕರ ಸೇರಿದಂತೆ ಇತರರಿದ್ದರು.