ಕ್ಷೇತ್ರದ ಅಭಿವೃದ್ಧಿಯಿಲ್ಲ

ಲಕ್ಷ್ಮೇಶ್ವರ,ಏ5 : ಈವರೆಗೆ ಆಡಳಿತ ನಡೆಸಿದ ಯಾವುದೇ ಪಕ್ಷದ ಶಾಸಕರಿಂದ ಶಿರಹಟ್ಟಿ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೊಂಡಿಲ್ಲ. ವಿಶೇಷವಾಗಿ ರೈತರನ್ನು ಎಲ್ಲರೂ ಕಡೆಗಣಿಸಿದ್ದಾರೆ. ಹೇಳಿಕೊಳ್ಳುವಂಥ ನೀರಾವರಿ ಯೋಜನೆಗಳು ಇಲ್ಲ. ಹೀಗಾಗಿ ಈಗಲೂ ರೈತರ ಬದುಕು ಅತಂತ್ರಿ ಸ್ಥಿತಿಯಲ್ಲಿದೆ' ಎಂದು ಎಐಎಂಐಎಂ ಪಕ್ಷದ ಶಿರಹಟ್ಟಿ ಮತಕ್ಷೇತ್ರದ ಅಧ್ಯಕ್ಷ ಬಸವರಾಜ ಹಿರೇಮನಿ ಹೇಳಿದರು. ಈ ಕುರಿತು ಸುದ್ದಿಗಾರರನ್ನು ಉದ್ಧೇಶಿಸಿ ಅವರು ಮಾತನಾಡಿ,ಸಧ್ಯ ತಾಲ್ಲೂಕಿನ ಎಲ್ಲ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇದರಿಂದಾಗಿ ಬಡವರು ಹೈರಾಣಾಗಿದ್ದಾರೆ. ಜನಪ್ರತಿನಿಧಿಗಳಿಗೆ ಭವಿಷ್ಯದ ಬಗ್ಗೆ ಚಿಂತೆಯೇ ಇಲ್ಲ. ಸಾವಿರಾರು ಜನರಿಗೆ ಉದ್ಯೋಗ ನೀಡುವ ಯಾವುದೇ ಬೃಹತ್ ಉದ್ಯಮ ಇಲ್ಲ. ಕಾರಣ ಸಾವಿರಾರು ಯುವಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಲಕ್ಷ್ಮೇಶ್ವರದ ಪುರಸಭೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದಾಗಿ ಪಟ್ಟಣವೂ ಸುಧಾರಿಸಿಲ್ಲ. ಇಡೀ ಪಟ್ಟಣದಲ್ಲಿ ಎಲ್ಲಿ ಹುಡುಕಿದರೂ ಸುಸಜ್ಜಿತ ರಸ್ತೆಯಾಗಲಿ, ಚರಂಡಿಯಾಗಲಿ ಸಿಗುತ್ತಿಲ್ಲ. ಪ್ರತಿವರ್ಷ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡಿದರೂ ಅದರ ಸದ್ಭಳಕೆ ಆಗುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ನೂರ್‍ಅಹಮ್ಮದ್ ಮಕಾನದಾರ, ದಾದಾಪೀರ್ ಮುಳಗುಂದ, ಮೌಲಾಲಿ ಸೊಲ್ಲಾಪುರ, ಮೃತ್ಯುಂಜಯ ಹಿರೇಮಠ, ಮಾಬೂಬು ಕಾರಡಗಿ, ಖಾಜಾಪೀರ್ ಬಳಿಗಾರ, ಮಹಮ್ಮದ್‍ಹನೀಫ್ ಜಮಖಂಡಿ, ಫೈರೋಜ್ ನವಲೂರ, ಇರ್ಫಾನ್ ತಹಶೀಲ್ದಾರ ಇದ್ದರು.