ಕ್ಷೇತ್ರದ ಅಭಿವೃದ್ಧಿಗೆ ಸದಾ ಸಿದ್ದ : ಡಾ. ಎಸ್.ಎಸ್. ಪಾಟೀಲ್

ರಾಯಚೂರು,ಮಾ.೧೭-
ನಾನು ಜನರ ಕಷ್ಟ – ಸುಖಗಳಿಗೆ ಸ್ಪಂದನೆ ಮಾಡುತ್ತಾ ಬಂದಿರುವೆ, ಮುಂದೆಯೂ ಇದೆ ರೀತಿಯಲ್ಲಿ ಸ್ಪಂದನೆ ಮಾಡುತ್ತೇನೆ, ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಸದಾ ನಾನು ಸಿದ್ದನಾಗಿರುವೆ, ಜನರ ಸೇವಕನಾಗಿ ಸದಾ ಅವರ ಜೊತೆಗೆ ಇರುತ್ತೇನೆ ಎಂದು ರಾಯಚೂರು ನಗರ ಶಾಸಕರಾದ ಡಾ. ಎಸ್.ಶಿವರಾಜ್ ಪಾಟೀಲ್ ತಿಳಿಸಿದರು.
ನಗರದಲ್ಲಿ ಇದುವರೆಗೂ ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿವೆ ಇನ್ನೂ ಕೆಲವು ಬಾಕಿ ಇವೆ ಆದಷ್ಟು ಬೇಗ ಎಲ್ಲವೂ ಮುಗಿಯಲಿವೆ ಎಂದರು,ನಗರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ ೧೭ರಲ್ಲಿ ನಗರಸಭೆ ಯೋಜನೆ ಅಡಿಯಲ್ಲಿ ೨೦ ಲಕ್ಷ ರೂಪಾಯಿಗಳಿಗೆ ಸಾಂಸ್ಕೃತಿಕ ಭವನದ ಮುಂದುವರೆದ ಕಾಮಗಾರಿ ಪೂಜೆ ಸಲ್ಲಿಸಿ ಶಾಸಕರು ಮಾತನಾಡಿದರು.
ಇದೆ ಸಂಧರ್ಭದಲ್ಲಿ ನಗರದಲ್ಲಿ ನಿರ್ಮಾಣವಾಗಿರುವ ಕರ್ನಾಟಕ ಸಂಘದ ಮಳಿಗೆಯನ್ನು ಶಾಸಕರು ಉದ್ಘಾಟನೆ ಮಾಡಿದರು, ಸದರಿ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರು, ಹಾಗೂ ಸದಸ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.