ಚನ್ನಮ್ಮನ ಕಿತ್ತೂರ,ಮೇ 31: ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿರುವ ಸುವರ್ಣಸೌಧದ ಪಕ್ಕದಲ್ಲಿಯ ಶಾಂತಗಿರಿ ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರವರು ಜೈನ ಮುನಿಗಳಾದ ಶ್ರೀ 108 ಸಿದ್ದಸೇನ ಮಹಾರಾಜರರಿಂದ ಆರ್ಶೀವಾದ ಪಡೆದು ಸನ್ಮಾನ ಸ್ವೀಕರಿಸಿದರು.
ನಂತರ ಅವರು ಮಾತನಾಡಿ ಈ ಕ್ಷೇತ್ರಕ್ಕೆ ಸರ್ಕಾರದಿಂದ ಸಹಾಯ ನೀಡಿ ಅಭಿವೃದ್ಧಿಗೊಳಿಸಲಾಗುವುದು. ಈ ಕ್ಷೇತ್ರ ಹೆದ್ದಾರಿ ಮೇಲಿರುವುದರಿಂದ ಇಲ್ಲಿ ಸಹಸ್ರಾರು ಭಕ್ತಾಧಿಗಳು ದರ್ಶನ ಪಡೆದುಕೊಂಡು ಹೋಗಲಿಕ್ಕೆ ಆಗಮಿಸುವರು ಈ ಕ್ಷೇತ್ರದ ಜನರ ಋಣ ನನ್ನಮೇಲಿದೆ. ಇದನ್ನು ಅಭಿವೃದ್ಧಿಗೊಳಿಸುವ ಕೆಲಸ ನನ್ನದು ಎಂದರು.
ಈ ವೇಳೆ ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ಬೆಳಗಾವಿ ದಕ್ಷಿಣ ಶಾಸಕ ರಾಜು ಶೇಠ, ವಿಧಾನ ಪರಿಷತ್ತ ಸದಸ್ಯ ಚನ್ನರಾಜ ಹಟ್ಟಿಹೊಳ್ಳಿ, ಹಲಗಾ-ಬಸ್ತವಾಡ ಜೈನ ಮುಖಂಡರು, ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.