ಕ್ಷೇತ್ರದ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ : ಲಕ್ಷ್ಮಣ ಸವದಿ

ಅಥಣಿ :ಜೂ.19: ಹಬ್ಬಗಳು ಹಾಗೂ ಜಾತ್ರೆಗಳು ನಮ್ಮ ಸಂಸ್ಕøತಿಯ ಪ್ರತೀಕವಾಗಿದ್ದು, ಜನರ ನಡುವೆ ಬಾಂಧವ್ಯ ಹಾಗೂ ಸ್ನೇಹ ವೃದ್ಧಿಗೆ ಸಂಪರ್ಕ ಸೇತುವೆಯಾಗಿವೆ ದ್ವೆ?ಷ ಅಸೂಯೆ ದೂರವಾಗಿ ಕ್ಷೇತ್ರದಲ್ಲಿ ಒಗ್ಗಟ್ಟು ನೆಲೆಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು,
ಅವರು ಪಟ್ಟಣದ ದಡ್ಡಿ ಮುತ್ಯಾನ ಜಾತ್ರೆಯಲ್ಲಿ ಹಾಲುಮತ ಸಮಾಜದವರು ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮುಖಂಡರಿಂದ ಮತ್ತು ಜಾತ್ರಾ ಕಮಿಟಿಯವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು, ಜಾತ್ರಾ ಮಹೋತ್ಸವ ನಡೆಸುವುದರಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆ. ಮಳೆ ಬೆಳೆ ಉತ್ತಮವಾಗಿ ಆಗಲೆಂದು ನಾವು ದೇವರಲ್ಲಿ ಬೇಡಿಕೊಳ್ಳುತ್ತೇನೆ, ಜಾತ್ರೆ ಸಂಭ್ರಮ ಎಂದರೆ ಎಲ್ಲರನ್ನು ಪರಸ್ಪರ ಒಗ್ಗೂಡಿ ಜಾತ್ರೆ ಮಾಡುವುದರಿಂದ ಸ್ನೆ?ಹ ಭಾವ ಮತ್ತು ಭಾಂದವ್ಯ ಹೆಚ್ಚುತ್ತದೆ, ಸಂಗೊಳ್ಳಿ ರಾಯಣ್ಣನಂತಹ ವೀರ ಯೋಧನನ್ನು ನಾಡಿಗೆ ಕೊಟ್ಟಿರತಕ್ಕಂತಹ, ಹಾಲುಮತ ಸಮಾಜವು ಕನ್ನಡ ನಾಡಿಗೆ ತನ್ನದೇ ಆದಂತಹ ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿದೆ ಎಂದ ಅವರು ಚುನಾವಣೆಯಲ್ಲಿ ನನ್ನ ಗೆಲುವಿಗೆ ಹಾಲುಮತ ಸಮಾಜವು ಸಾಕಷ್ಟು ಶ್ರಮಿಸಿದೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ಬಾಕಿ ಉಳಿದ ಹಾಗೂ ಮುಂದೆ ಮಾಡಬೇಕಿರುವ ಅಭಿವೃದ್ಧಿಗಳ ಕುರಿತು ಹೆಚ್ಚಿನ ಗಮನ ಹರಿಸುತ್ತೇನೆ, ನನ್ನನ್ನು ಗೆಲ್ಲಿಸಿದ ನನ್ನ ಕ್ಷೇತ್ರದ ಜನತೆಗೆ ನಾನು ಕೃತಜ್ಞನಾಗಿದ್ದೇನೆ, ಅಧಿಕಾರಕ್ಕೆ ಅಸೆಪಡದೇ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸುವೆ ಎಂದರು,