ಕ್ಷೇತ್ರದ ಅಭಿವೃದ್ಧಿಗೆ ಇಚ್ಛಾಶಕ್ತಿ ಅಗತ್ಯ

ಹುಮನಾಬಾದ್: ಮಾ.27:ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿ ಹಾಗೂ ಜನರ ಸೇವೆ ಮಾಡಬೇಕಾದರೆ ಪ್ರತಿಯೊಬ್ಬ ಚುನಾಯಿತ ಜನ ಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಅಗತ್ಯವಾಗಿ ಬೇಕು ಎಂದು ಶಾಸಕ ರಾಜಶೇಖರ ಪಾಟೀಲ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ರಾತ್ರಿ ನಡೆದ ಅತಿಥಿ ಗೃಹದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಶಾಸಕ ರಾಜಶೇಖರ ಪಾಟೀಲ್ ಯಾವುದೇ ಅಭಿವೃದ್ಧಿ ಕಾರ್ಯಗಳೇ ಕೈಗೊಂಡಿಲ್ಲ ಎಂದು ಬಿಜೆಪಿ ಮುಖಂಡ ಡಾ. ಸಿದ್ದು ಪಾಟೀಲ್ ಆರೋಪ ಮಾಡುತ್ತಿದ್ದರೆ. ಆದರೆ ಮಾಜಿ ಸಚಿವ ದಿ. ಬಸವರಾಜ ಪಾಟೀಲ್ ಪರಿವಾರದ ಸದಸ್ಯರ ಜನಸೇವೆ ಗುರುತಿಸಿ ಕ್ಷೇತ್ರದ ಜನತೆ ಒಂದೇ ಮನೆಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ. ಡಾ. ಸಿದ್ದು ಪಾಟೀಲ್ ಮಾಡುತ್ತಿರುವ ಆರೋಪಗಳು ಸತ್ಯವಾಗಿದ್ದರೆ ನಾನು ವಿಧಾನಸಭೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಕಿಡಿಕಾರಿದರು.

ಮಾಜಿ ಸಚಿವ ದಿ. ಬಸವರಾಜ ಪಾಟೀಲ್ ಅವರ ರಾಜ ಪರಿವಾರದಿಂದ ಬಂದಿದ್ದೇನೆ. ನಿಸ್ವಾರ್ಥ ಮನೋಭಾನೆಯಿಂದ ಮೂರು ಜನ ಸಹೋದರರು ಜನ ಸೇವೆಯಲ್ಲಿ ತೊಡಗಿದ್ದೆವೆ. ಆದರೆ ಬಿಜೆಪಿ ಮುಖಂಡ ಡಾ. ಸಿದ್ದು ಪಾಟೀಲ್ ಜನರಿಗೆ ಹಾಗೂ ಗುತ್ತಿಗೆದಾರರನ್ನು ವಂಚಿಸುವ ಕಾರ್ಯದಲ್ಲಿ ಮುಂದಿದ್ದಾರೆ. ಇವರ ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಸ್ಥಾನಮಾನ ಹೇಗಿತ್ತು ? ಎನ್ನುವುದರ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು. ಬಸವರಾಜ ಪಾಟೀಲ್ ಪರಿವಾರದಿಂದಲೇ ಡಾ. ಸಿದ್ದು ಪಾಟೀಲ್ ಪರಿವಾರದ ಅಭಿವೃದ್ಧಿಯಾಗಿದೆ ಎಂದು ಗುಡುಗಿದರು.

ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ್ ಪಾಟೀಲ್, ಪುರಸಭೆಯ ಅಧ್ಯಕ್ಷರಾದ ನೀತು ಶರ್ಮ, ಹಳ್ಳಿಖೇಡ ಪುರಸಭೆ ಅಧ್ಯಕ್ಷ ನಾಗರಾಜ್ ಹಿರಿಬಾರೆ , ವೀರಣ್ಣ ಪಾಟೀಲ್, ಉದ್ಯಮಿ ಧನರಾಜ್ ತಾಳಂಪಳ್ಳಿ , ಪ್ರಥಮ ಗುತ್ತಿಗೆದಾರ ಗುರುನಾಥ್ ಕೋಳೂರ, ಸಚಿನ್ ಕೋಳೂರು, ಅಭಿಷೇಕ್ ಪಾಟೀಲ್, ರೇವಣಸಿದ್ದಪ್ಪ ಪಾಟೀಲ್, ಪುರಸಭೆ ಸದಸ್ಯರು ಉಪಸ್ಥಿತರಿದ್ದರು