ಕ್ಷೇತ್ರದ ಅಭಿವೃದ್ಧಿಗೆ ಅನುದಾನಕ್ಕೆ ಮನವಿ

ಆನೇಕಲ್,ಸೆ೧೬:ಮಳೆ ಹೆಚ್ಚಾದ ಕಾರಣದಿಂದ ಆನೇಕಲ್ ಕ್ಷೇತ್ರದಲ್ಲಿ ಶೇ ೭೫% ರಸ್ತೆಗಳು ಹಾಳಾಗಿದ್ದು ರಾಜ್ಯ ಬಿಜೆಪಿ ಸರ್ಕಾರ ಆನೇಕಲ್ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಅನುಧಾನ ನೀಡಬೇಕು ಎಂದು ಶಾಸಕ ಬಿ.ಶಿವಣ್ಣರವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಹಳ್ಳಿಯ ರಾಘವೇಂದ್ರ ಬಡಾವಣೆ ಮತ್ತು ಶೋಭ ಬಡಾವಣೆಯಲ್ಲಿ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಆನೇಕಲ್ ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ವಿಧಾನ ಸಭೆಯಲ್ಲಿ ಹಲವಾರಿ ಬಾರಿ ನಾನು ಮಾತನಾಡಿದ್ದೇನೆ ಜೊತೆಗೆ ಸರ್ಕಾರಕ್ಕೆ ಮನವರಿಕೆಯನ್ನು ಸಹ ಮಾಡಿಕೊಟ್ಟಿದ್ದೇನೆ ಆದರೆ ರಾಜ್ಯ ಸರ್ಕಾರ ಭರವಸೆ ನೀಡುತ್ತದೆ ಅಷ್ಠೇ, ಆನೇಕಲ್ ಕ್ಷೇತ್ರಕ್ಕೆ ಅನುದಾನ ನೀಡಲು ಮೀನ ಮೇಷ ಮಾಡುತ್ತಿದೆ ಎಂದು ಆರೋಪ ವ್ಯಕ್ತ ಪಡಿಸಿದರು. ಶಾಸಕರ ವಿಶೇಷ ಅನುದಾನ ಸೇರಿದಂತೆ ಎಲ್ಲಾ ಅನುದಾನಗಳನ್ನು ಒಂದು ಕಡೆ ಕ್ರೂಡೀಕರಿಸಿ ಸಮಸ್ಯೆ ಇರುವಂತಹ ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಆಗ ಆನೇಕಲ್ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ದಿ ಪಡಿಸುತ್ತೇನೆ ಎಂದು ಹೇಳಿದರು.
ಅತ್ತಿಬೆಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುಡ್ಡಹಟ್ಟಿ ರಘುಪತಿರೆಡ್ಡಿ, ಸರ್ಜಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಬಾಬು, ನೆರಳೂರು ಗ್ರಾಮ ಪಂಚಾಯಿತಿ ಸದಸ್ಯ ಯಡವನಹಳ್ಳಿ ರಘು, ಶೃತಿ ಮಂಜುನಾಥ್ ರೆಡ್ಡಿ, ಯಡವನಹಳ್ಳಿ ವೆಂಕಟೇಶ್, ಬಾಬು, ಪ್ರಕಾಶ್, ಮಂಜುನಾಥ್, ಮುನಿರಾಜು, ಸುಜಾತ, ಮಮತಾ, ಧನ ಲಷ್ಮೀ ಸುರೇಶ್, ಗುಡ್ಟಹಟ್ಟಿ ನವೀನ್ ಗೌಡ, ಮುಖಂಡರಾದ ವಿಜಯ್ ಜಾದವ್, ಸುರೇಶ್, ಶ್ರೀನಿವಾಸ್ ರೆಡ್ಡಿ, ಬಾಲಿಕಾ ಜಾಧವ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.