ಕ್ಷೇತ್ರದ ಅಭಿವೃದ್ದಿಯೇ ಶಾಸಕ ರಾಮಚಂದ್ರರ ಗುರಿ

ಜಗಳೂರು.ನ.೨೧;  ಕ್ಷೇತ್ರದ ಅಭಿವೃದ್ದಿಯೇ ಶಾಸಕ ರಾಮಚಂದ್ರರವರ ಗುರಿಯಾಗಿದ್ದು, ವೈಯಕ್ತಿಕ ವಿಚಾರ ಬಗ್ಗೆ ಶಾಸಕರು, ಮಾಜಿ ಶಾಸಕರು ಮಾತನಾಡುವುದು ಬೇಡ . ಕ್ಷೇತ್ರದಲ್ಲಿನ ಮತದಾರರು ಮೂಕ ಪ್ರೇಕ್ಷಕರಾಗಿ ವೀಕ್ಷಿಸುತ್ತಿದ್ದು, ಅಭಿವೃದ್ಧಿ ಕೆಲಸಗಳು ಮೂಲ ಮಂತ್ರವಾಗಲಿ ವಿನಾ ಕಾರಣ ವೈಯಕ್ತಿಕ ಆಸ್ತಿ ಬಗ್ಗೆ ಇತಶ್ರೀ ಆಡಿದರೆ ಇಬ್ಬರಿಗೂ ಒಳಿತು ಒಳಿತು. ಇಂದಿಗೆ ವಿಚಾರ ಅಂತ್ಯಗೊಳಿಸಬೇಕೆಂದು ಎಂದು ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಸಿ.ಮಹೇಶ್ ಹೇಳಿದರು.  ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಹೈಮಾಸ್ಟ್ ದೀಪ ಅಳವಡಿಕೆ, ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಮಾಜಿ ಶಾಸಕ ಎಚ್.ಪಿ.ರಾಜೇಶ್ ನೀಡಿರುವ ಆರೋಪದಲ್ಲಿ ಉರುಳಿಲ್ಲ.ಇದು ನಿರಾಧಾರ. ಅಭಿವೃದ್ದಿಯೇ ಬಿಜೆಪಿ ಮೂಲಮಂತ್ರ. ಚರ್ಚೆ ಆರೋಗ್ಯಕರವಾಗಿರಲಿ. ತಾಲೂಕಿನಲ್ಲಿ ವಿವಿಧ ಅಧಿಕಾರಿಗಳು ಉತ್ತಮವಾಗಿ ಕೆಲಸಮಾಡುತ್ತಾರೆ. ಅಭಿವೃದ್ದಿ ವಿಚಾರದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ವ್ಯತ್ಯಾಸವಿದ್ದರೆ ವಿರೋಧ ಪಕ್ಷದವ ಸಲಹೆಗಳ ಸ್ವೀಕರಿಸಿ, ಉತ್ತಮ ಆಡಳಿತ ನೀಡುತ್ತೇವೆ. ಹಗರಣ ರಹಿತ ಅಬಿವೃದ್ದಿ ಮಂತ್ರವೇ ನಮ್ಮ ಶಾಸಕರ ಗುರಿಯಾಗಿದೆ ಎಂದರು.ಪಟ್ಟಣ ಪಂಚಾಯತಿ ಅಧ್ಯಕ್ಷ ರೇವಣ್ಣ ಮಾತನಾಡಿ ಮಾಜಿ ಶಾಸಕರ ಅವದಿಯಲ್ಲಿಯೇ ಶುದ್ದಕುಡಿಯುವ ನೀರು ಘಟಕ ದುರಸ್ಥಿಯಲ್ಲಿದ್ದವು . ಅವರಿಗೆ ಕಾಳಜಿ ಇದ್ದರೆ ಆಗಲೇ ಸರಿಪಡಿಸಬಹುದಿತ್ತು. ಕೆಲವು ಕಡೆ ಘಟಕಗಳನ್ನು ಈವರೆಗೂ ಪಟ್ಟಣ ಪಂಚಾಯತಿ ವಶಕ್ಕೆ ಪಡೆದಿಲ್ಲ . ಪಟ್ಟಣದಲ್ಲಿ ಮೂರುಶುದ್ದ ನೀರಿನ ಘಟಕಗಳಿದ್ದು ರಿಪೇರಿಗೆ ಟೆಂಡರ್ ಕರೆಯಲಾಗಿದ್ದು ಶೀಘ್ರ ಪುನರಾರಂಭಿಸಲಾಗುವುದು. ಸ್.ಎಪ್.ಸಿ.ಯೋಜನೆಯಡಿ ಪಟ್ಟಣದ 18 ವಾರ್ಡ್ ಗಳಲ್ಲಿ ಹೈಮಾಸ್ಟ್ ದೀಪ ಅಳವಡಿಸುವ ಕಾರ್ಯಮುಗಿದಿದೆ . ಇನ್ನು ಒಂದು ವಾರದಲ್ಲಿ ಮೀಟರ್ ಅಳವಡಿಸಿ ಪ್ರಾರಂಬಿಸುತ್ತೇವೆ ಎಂದು ತಿಳಿಸಿದರು. ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಎನ್.ಜೆ.ತಿಪ್ಪೇಸ್ವಾಮಿ ಮಾತನಾಡಿ ಮಾಜಿ ಶಾಸಕರು ಸಹ ದಾಖಲೆಗಳನ್ನ ಎಲ್ಲೆಲ್ಲಿ ಹೇಗೆ ತಿರುಚ್ಚಿದ್ದಾರೆ ಎಂಬುದು ನಮಗೂ ಗೊತ್ತಿದೆ. ಸಮಯ ಬಂದಾಗ ನಾವೇ ಬಿಚ್ಚಿಡುತ್ತೇವೆ. ನಾವು ಯಾರು ಬಾಯಿ ಚಪಲಕ್ಕೆ ಮಾತನಾಡುವವರಲ್ಲ. ಸರ್ಕಾರದ ಜಿಲ್ಲಾ ಮಟ್ಟದ ದಿಶಾ ಸಮಿತಿ ಸದಸ್ಯರಿದ್ದೇವೆ. ಈ ಹಿಂದೆ ಅವರ ಜೊತೆಗೆ ಇದ್ದಿದ್ದು ನಿಜ. ಆದರೆ ಅವರ ಜೊತೆಗೆ ಇದ್ದು ಅವರನ್ನ ಗೆಲ್ಲಿಸಿದ್ದಕ್ಕೆ ಸಾಲಗಾರನಾಗಿದ್ದೇನೆ . ಹೊರತು ಯಾವುದೇ ಲಾಭ ಪಡೆದಿಲ್ಲ ಬಿಜೆಪಿ ಸರ್ಕಾರದಲ್ಲಿ ಹೊಗಳಭಟ್ಟರಿಲ್ಲ ಪಕ್ಷದ ಶಾಸಕರ ಮೇಲೆ ಆರೋಪಗಳು ಬಂದಾಗ ಕಾರ್ಯ ಕರ್ತರಾಗಿ ಅವರ ಬೆನ್ನಿಗೆ ನಿಲ್ಲುವುದು ನಮ್ಮ ಜವಾಬ್ದಾರಿಯಾಗಿ ಅದಕ್ಕಾಗಿ ಮಾತನಾಡಿದ್ದೇವೆ ಎಂದು ತಿರುಗೇಟು ನೀಡಿದರು. ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಡಿ.ವಿ.ನಾಗಪ್ಪ, ಮಾಜಿ ಜಿ.ಪಂ.ಸದಸ್ಯ ಹೆಚ್.ನಾಗರಾಜ್, ಪ.ಪಂ.ಉಪಾಧ್ಯಕ್ಷೆ ಮಂಜಮ್ಮ, ಸದಸ್ಯರುಗಳಾದ ಆರ್.ತಿಪ್ಪೇಸ್ವಾಮಿ, ದೇವರಾಜ್, ಪಾಪಲಿಂಗಪ್ಪ. ಮುಖಂಡರಾದ ಬಿದರಕೆರೆ ರವಿ, ಹನುಮಂತಪ್ಪ, ಮರೇನಹಳ್ಳಿ ನಾಗರಾಜ್, ತಮಲೇಹಳ್ಳಿ ಅಂಜಿನಪ್ಪ, ಸೇರಿದಂತೆ ಇತರರು ಉಪಸ್ಥಿತರಿದ್ದರು.