
ಕೋಲಾರ,ಏ,೫- ಕೆ.ಜಿ.ಎಫ್. ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ಕಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಶ್ರೀ ಸಾಯಿರಾಮ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕರಾದ ಬಿ.ಸುರೇಶ್ ಅವರಿಗೆ ಕೆ.ಜಿ.ಎಫ್. ಕ್ಷೇತ್ರದಿಂದ ಸ್ವರ್ಧಿಸಲು ಬಿಜೆಪಿ ಪಕ್ಷದಿಂದ ಅವಕಾಶ ಮಾಡಿ ಕೊಡ ಬೇಕೆಂದು ರಾಜ್ಯದ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ಅವರಿಗೆ ಕನ್ನಡ ಕ್ರಾಂತಿ ದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದರು,
ನಗರದ ಪತ್ರಕರ್ತ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ಬಿ.ಸುರೇಶ್ ಅವರು ಕಳೆದ ೧೦ ವರ್ಷಗಳಿಂದ ಸಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಕ್ಷೇತ್ರದಲ್ಲಿ ಸುಮಾರು ೪೮ ಸಾವಿರ ಜನ ಹೊಂದಿರುವಂತ ಪರಿಶಿಷ್ಟ ಜನಾಂಗದ ಎಡಗೈ ಸಮಾಜದ ಮುಖಂಡರಾಗಿ ಸೇವೆಯ ಮೂಲಕ ಗುರುತಿಸಿ ಕೊಂಡಿದ್ದಾರೆ. ಬಿ.ಸುರೇಶ್ ಅವರಿಗೆ ಟಿಕೆಟ್ ನೀಡಿದಲ್ಲಿ ನಮ್ಮ ಸಂಘಟನೆಯ ಸುಮಾರು ೧೦ ಸಾವಿರ ಮಂದಿ ಬೆಂಬಲ ಘೋಷಿಸಿ ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದೇವೆ ಎಂದು ತಿಳಿಸಿದರು,
ಸುಮಾರು ೧೫೦೦ ರಿಂದ ೨೦೦೦ ಮಂದಿಗೆ ದಿನನಿತ್ಯ ಉಚಿತವಾಗಿ ಊಟವನ್ನು ನೀಡುತ್ತಿದ್ದು, ತಾವು ಚುನಾವಣೆಯಲ್ಲಿ ಗೆಲ್ಲಲಿ ಅಥಾವ ಸೋಲಲಿ ದಾಸೋಹ ಸೇವೆಯನ್ನು ಮುಂದುವರೆಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ಬಿ.ಸುರೇಶ್ ಅವರು ಸ್ಥಳೀಯರಾಗಿದ್ದು ಜನರ ಮಧ್ಯೆ ಇರುವವರು ಅಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಂತ ಮಾನವೀಯತೆ ಇರುವರು ಎಂದರು,
ತಾಲ್ಲೂಕು ಆದಿಜಾಂಭವ ಸಂಘದ ಅಧ್ಯಕ್ಷ ಸುಬ್ರಮಣ್ಯ ಮಾತನಾಡಿ ಎಸ್.ಸಿ ಯಲ್ಲಿ ಎರಡು ಜನಾಂಗದವರು ಮಾತ್ರ ಇದ್ದಾರೆ. ಬಿಜೆಪಿಯಲ್ಲಿ ನಮ್ಮ ಜನಾಂಗದವರಿಗೆ ಬಿಜೆಪಿ ಪಕ್ಷದಲ್ಲಿ ಅವಕಾಶ ಕಲ್ಪಿಸಿ ಕೊಡ ಬೇಕೆಂದು ಮನವಿ ಮಾಡಿದ ಅವರು ವಾಜಪೇಯಿ ಜನ್ಮ ದಿನಾಚರಣೆ ಅವಧಿಯಲ್ಲಿ ಬಡವರಿಗೆ ಉಚಿತವಾಗಿ ಬೆಡ್‌ಸೀಟ್‌ಗಳನ್ನು, ವಸ್ತ್ರಗಳನ್ನು, ದಿನಸಿ ಕಿಟ್‌ಗಳನ್ನು ವಿತರಿಸುವ ಮೂಲಕ ಬಡವರಿಗೆ ಸ್ಪಂದಿಸುವಂತ ಗುಣವನ್ನು ಹೊಂದಿರುವ ಇಂಥವರಿಗೆ ಬಿಜೆಪಿ ಪಕ್ಷದಲ್ಲಿ ಅವಕಾಶ ಕಲ್ಪಿಸಿದರೆ ಕ್ಷೇತ್ರದ ಅಭಿವೃದ್ದಿ ಸಾಧ್ಯ ಎಂದು ಅಭಿಪ್ರಾಯ ಪಟ್ಟರು,
ಕನ್ನಡ ಕ್ರಾಂತಿ ದಳದ ಅಧ್ಯಕ್ಷ ಬಾಬುರೆಡ್ಡಿ ಮಾತನಾಡಿ ಬಿ.ಸುರೇಶ್ ಅವರು ನಾಡು ನುಡಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದು, ಜನಪರ ಸೇವೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಉತ್ತಮವಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡು ಕ್ಷೇತ್ರದಲ್ಲಿ ಪ್ರಚಲಿತರಾಗಿದ್ದಾರೆ. ಇತರೆ ಪಕ್ಷದ ಅಭ್ಯರ್ಥಿಗಳಿಗೆ ಸ್ವರ್ಧೆ ನೀಡುವಂತ ಸಾಮಾರ್ಥ್ಯ ಅಭ್ಯರ್ಥಿ ಬಿ.ಸುರೇಶ್ ಅವರಿಗೆ ಮಾತ್ರ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಿವಕುಮಾರ್ ರೆಡ್ಡಿ,ರಾಜೇಶ್, ಸಿದ್ದಲಿಂಗ ಮೂರ್ತಿ,ರವಿಕಾಳೇಗೌಡ ಉಪಸ್ಥಿತರಿದ್ದರು,