ಕ್ಷೇತ್ರದಿಂದಲೇ ಸ್ವರ್ಧಿಸ ಬೇಕೆಂದು ಒತ್ತಾಯಿಸಿ ಸಿದ್ದು ಮನೆಗೆ ಮುತ್ತಿಗೆ

ಕೋಲಾರ, ಮಾ. ೨೩- ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ವರ್ಧಿಸ ಬೇಕೆಂದು ಒತ್ತಾಯಿಸಿ ಬೆಂಗಳೂರಿನ ಸಿದ್ದರಾಮಯ್ಯ ಅವರ ಮನೆಗೆ ನಾಳೆ ಬೆಳಿಗ್ಗೆ ಮುತ್ತಿಗೆ ಹಾಕಲಾಗುವುದು ಎಂದು ನಗರದ ವಿವಿಧ ಸಂಘಟನೆಗಳ ಆಲ್ಪಸಂಖ್ಯಾತ ಮುಖಂಡರು ತಿಳಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೇಸ್ ಮುಖಂಡ ಅನ್ವರ್ ಪಾಷ ಮಾತನಾಡಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಕಳೆದ ೩-೪ ತಿಂಗಳಿಂದ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದು ಹೋಗಿದ್ದಾರೆ.ಕೋಲಾರದಿಂದ ಸ್ವರ್ಧೆ ಮಾಡುವುದಾಗಿಯೋ ಘೋಷಿಸಿದ್ದಾರೆ. ಅವರು ಕೋಲಾರದಲ್ಲಿ ಸ್ವರ್ಧಿಸುತ್ತಾರೆ ಎಂದು ಖಚಿತವಾದ ಮೇಲೆ ಕಾಂಗ್ರೇಸ್ ಪಕ್ಷದಿಂದ ಕೆ.ಪಿ.ಸಿ.ಸಿ.ಗೆ ಯಾವ ಅಕಾಂಕ್ಷಿಗಳು ಅರ್ಜಿ ಹಾಕಿಲ್ಲ. ಅವರು ಚುನಾವಣೆಯಲ್ಲಿ ಸುಮಾರು ೫೦ ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸುವ ನಿರೀಕ್ಷೆ ಇದೆ ಎಂದರು,
ಇ ಹಿಂದೆ ಸಿದ್ದರಾಮಯ್ಯ ಅವರು ಕೋಲಾರದಿಂದಲೇ ಸ್ವರ್ಧಿಸ ಬೇಕೆಂದು ಒತ್ತಾಯಿಸಿ ಎಲ್ಲಾ ಸಮುದಾಯ ಪ್ರತಿನಿಧಿಗಳ ಒತ್ತಾಯದಂತೆ ಆಲ್ಪಸಂಖ್ಯಾತರು ಸಹ ಸಿದ್ದರಾಮಯ್ಯ ಅವರನ್ನು ಬೇಟಿ ಕೋಲಾರಕ್ಕೆ ಆಹ್ವಾನಿಸಿದ್ದೇವು ಎಂದು ಹೇಳಿದರು,
ಕೋಲಾರ ವಿಧಾನಸಭಾ ಕ್ಷೇತ್ರದ ಸಮೀಕ್ಷೆಗಳನ್ನು ಹಲವು ಮಾಡಿತ್ತು ಸುನೀಲ್ ಕನ್ನಗೋಲ್ ಅವರ ಸಮೀಕ್ಷೆ ಪ್ರಕಾರ ಶೇ ೬೩ರಷ್ಟು ಮತಗಳು, ಆಂದ್ರ ಪ್ರದೇಶದ ಖಾಸಗಿ ಏಜೆನ್ಸಿ ಮಾಡಿದ ಸಮೀಕ್ಷೆಯಲ್ಲಿ ಶೇ ೫೮ರಷ್ಟು ಮತಗಳು,ಜೆ.ಡಿ.ಎಸ್. ಮಾಡಿಸಿದ ಸರ್ವೆಯಲ್ಲಿ ಶೇ ೫೪ರಷ್ಟು, ಬೆಜೆಪಿ ಪಕ್ಷವು ಮಾಡಿಸಿದ ಸರ್ವೆಯಲ್ಲಿ ಶೇ ೪೯ರಷ್ಟು ಮತಗಳು ಸಿದ್ದರಾಮಯ್ಯನವರಿಗೆ ಲಭಿಸಲಿದೆ ಎಂದು ವಿವರಿಸಿದರು,
ಯಾವೂದೇ ಸರ್ವೆಯಲ್ಲಿ ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ಮಾಹಿತಿ ಇಲ್ಲ. ಅದರೆ ಕೆಲವು ಮಾದ್ಯಮಗಳು ಗೊಂದಲ ಸೃಷ್ಟಿಸುತ್ತಿದೆ. ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ವರ್ಧಿಸಲ್ಲ ಎಂದು ಎಲ್ಲೂ ಹೇಳಿಲ್ಲ. ಕಾಂಗ್ರೇಸ್ ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಕೋಲಾರಕ್ಕೆ ಟಿಕೆಟ್ ನೀಡಲ್ಲ ಎಂದು ಹೇಳಿಲ್ಲ ಅದರೂ ಸಹ ದೃಶ್ಯ ಮಾದ್ಯಮಗಳಲ್ಲಿ, ಸಮಾಜಿಕ ಜಾಲತಾಣಗಳಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಸತ್ಯಕ್ಕೆ ದೂರವಾದ ಮಾಹಿತಿಗಳನ್ನು ಪ್ರಚಾರ ಮಾಡಲಾಗುತ್ತಿದೆ ಎಂದು ಅರೋಪಿಸಿದರು,
ನಗರಸಭೆ ಸದಸ್ಯ ಅಪ್ಸರ್ ಪಾಷ ಮಾತನಾಡಿ ಎಲ್ಲಾ ಜನಾಂಗದ ಹಿತಾಶಕ್ತಿಯನ್ನು ಕಾಪಾಡುವಂತ ಶಕ್ತಿ ಸಿದ್ದರಾಮಯ್ಯ ಅವರಲ್ಲಿದೆ. ಕ್ಷೇತ್ರದ ಸಾರ್ವಂಗೀಣ ಅಭಿವೃದ್ದಿಗಾಗಿ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ವರ್ಧಿಸ ಬೇಕೆಂದು ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ಮಂಗಳವಾರ ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಾಗುವುದು ಎಂದರು,
ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ವರ್ಧಿಸುವುದಿಲ್ಲ ಎಂಬ ತಪ್ಪು ಮಾಹಿತಿಯಿಂದಾಗಿ ಸಾಮಾನ್ಯ ಜನತೆ ಚಿಂತೆಗೆ ಒಳಗಾಗಿದ್ದಾರೆ. ಕಳೆದ ಎರಡು ದಿನಗಳಿಂದ ಕೋಲಾರ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜ್ಯದ ಯಾವ ಮೂಲೆಗೂ ಹೋದರೂ ಸಿದ್ದರಾಮಯ್ಯ ಕೋಲಾರದ ಬಗ್ಗೆಯೇ ಚರ್ಚೆಗಳಾಗುತ್ತಿದೆ ಎಂದು ಹೇಳಿದರು,
ಸಿದ್ದರಾಮಯ್ಯ ಅವರಿಗೆ ಕೋಲಾರ ವಿಧಾನ ಸಭಾ ಕ್ಷೇತ್ರದಿಂದಲೇ ಸ್ವರ್ಧಿಸಲು ಕಾಂಗ್ರೆಸ್ ಹೈ ಕಮಾಂಡ್‌ಗೆ ಒತ್ತಾಯಿಸಲಾಗುವುದು, ಈ ಸಂಬಂಧವಾಗಿ ಸೋನಿಯ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು,
ಪ್ರಶ್ನೆಯೊಂದಕ್ಕೆ ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷದ ಆತಂಕದ ಹಿನ್ನಲೆಯ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಅಪಪ್ರಚಾರ ಮಾಡಿ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ತಿಳಿಸಿದರು,
ಕೆ.ಯು.ಡಿ.ಎ. ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೊಂ ಮಾತನಾಡಿ ಕಳೆದ ೧೯೭೮ ರಿಂದಲೂ ಕೋಲಾರ ಜಿಲ್ಲೆಯಲ್ಲಿ ಆಲ್ಪಸಂಖ್ಯಾತರು ಜಾತ್ಯಾತೀತ ತತ್ವಗಳಿಗೆ ಬದ್ದರಾಗಿ ಬೆಂಬಲಿಸುತ್ತಾ ಕೋಮುವಾದವನ್ನು ವಿರೋಧಿಸಿ ಕೊಂಡು ಬರುತ್ತಿದ್ದಾರೆ ಬೇರೆ ಜಿಲ್ಲೆಗಳ ಮಾದರಿಯಲ್ಲಿ ಕೋಲಾರ ಜಿಲ್ಲೆಯೂ ಸುಮಾರು ೭೫ ವರ್ಷಗಳೇ ಕಳೆದರೂ ಅಭಿವೃದ್ದಿ ಹೊಂದಿಲ್ಲ ಎಂದರು,
ಸಿದ್ದರಾಮಯ್ಯ ಅವರು ತಮ್ಮ ಆಡಳಿತದ ಅವಧಿಯಲ್ಲಿ ಸಮಾಜದ ಕಟ್ಟಕಡೆಯ ಬಡವನಿಗೂ ಸಾಮಾಜಿಕ ನ್ಯಾಯಾ ದೊರಕಿಸುವ ನಿಟ್ಟಿನಲ್ಲಿ ಹಲವಾರು ಭಾಗ್ಯಗಳ ಯೋಜನೆಯನ್ನು ಜಾರಿಗೆ ತಂದರು, ಅನ್ನ ಕೊಟ್ಟರು , ನೀರು ಕೊಟ್ಟರು, ಉಚಿತ ಶಿಕ್ಷಣ, ವಿದ್ಯಾ ಸಿರಿ,ಮೀಸಲಾತಿಯನ್ನು ಹೆಚ್ಚಳ ಮಾಡಿದರು. ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅರಸು ನಂತರದ ಅಭಿವೃದ್ದಿಯ ಹರಿಕಾರ ಎನಿಸಿದ್ದರು ಎಂದು ನೆನಪಿಸಿದರು
ಈ ಹಿನ್ನಲೆಯಲ್ಲಿ ಬೆಂಗಳೂರಿಗೆ ಕೋಲಾರ ಇಷ್ಟು ಹತ್ತಿರ ಇದ್ದರೂ ಏನೊಂದು ಉದ್ದಾರವಾಗಲಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಕರೆತರುವ ಮೂಲಕ ಕೋಲಾರದ ಅಭಿವೃದ್ದಿಯಾಗುವುದೆಂಬ ಕನಸನ್ನು ಹೊತ್ತು ಸಿದ್ದರಾಮಯ್ಯ ಅವರನ್ನು ಆಹ್ವಾನಿಸುತ್ತಿದ್ದೇವೆ ಎಂದು ಪ್ರತಿಪಾದಿಸಿದರು,
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ೨.೩೭ ಮತದಾರರನ್ನು ಹೊಂದಿದೆ. ಈ ಪೈಕಿ ೧,೮೦ ಮತದಾರರು ಅಹಿಂದ ವರ್ಗಕ್ಕೆ ಸೇರಿದವರಾಗಿದ್ದಾರೆ. ರಾಜ್ಯದಲ್ಲಿ ಅಹಿಂದವರ್ಗಗಳನ್ನು ರಾಜ್ಯದಲ್ಲಿ ಪ್ರಪ್ರಥಮವಾಗಿ ಸಂಘಟಿಸಿದ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು, ಕೋಲಾರದಲ್ಲಿಯೇ ಆಹಿಂದ ವರ್ಗಗಳ ಸಂಘಟನೆಗೆ ಜನ್ಮನೀಡಿದ್ದು ಎಂದು ನೆನಪಿಸಿದ ಅವರು ಪ್ರಪ್ರಥಮವಾಗಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿದ್ದು ಆಲ್ಪಸಂಖ್ಯಾತ ಸಮುದಾಯದವರೇ ಎಂದು ಹೇಳಿದರು,