ಕ್ಷೇತ್ರದವರಿಗೇ ಆದ್ಯತೆ ನೀಡಲು ಮನವಿ

ಲಕ್ಷ್ಮೇಶ್ವರ,ನ25: ಶಿರಹಟ್ಟಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದವರಿಗೆ ಆದ್ಯತೆ ನೀಡಬೇಕು ಎಂದು ಬುಧವಾರ ಪ್ರವಾಸಿ ಮಂದಿರದಲ್ಲಿ ಸೇರಿದ್ದ ಟಿಕೆಟ್ ಆಕಾಂಕ್ಷಿಗಳ ಮತ್ತು ಕಾರ್ಯಕರ್ತರ ಸಭೆಯಲ್ಲಿಒಕ್ಕೋರಲಿನ ಮನವಿಯನ್ನು ಪಕ್ಷದ ವರಿಷ್ಠರಿಗೆ ಮಾಡಲಾಯಿತು.
ಸಭೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ಸೋಮಣ್ಣ ಬೆಟಿಗೇರಿ ಅವರು ಮಾತನಾಡಿ 2008 ರಲ್ಲಿ ನಡೆದ ಮೊದಲ ಮೀಸಲು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋಲಲು ಕ್ಷೇತ್ರದವರಿಗೆ ಟಿಕೆಟ್ ನೀಡಿದ್ದೇ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೇ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಗೆಲುವು ಸುಲಭವಾಗಲಿದೆ ಎಂದ ಅವರು ಹೊರಗಿನವರಿಗೆ ಟಿಕೆಟ್ ನೀಡಿ ಚುನಾವಣೆ ಎದುರಿಸಿ ಎಂದರೆ ಕಾರ್ಯಕರ್ತರು ದಿಕ್ಕು ತೋಚದಂತಾಗುತ್ತಾರೆ ಆದ್ದರಿಂದ ಪಕ್ಷದ ವರಿಷ್ಠರು ಸಾಮಾಜಿಕ ನ್ಯಾಯ ಗಮನದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿಯೇ ಎಡ ಬಲ ಬೋವಿ ಲಂಬಾಣಿ ಜನಾಂಗದ ಅಭ್ಯರ್ಥಿಗಳಿದ್ದು ಅವರಿಗೆ ನೀಡಬೇಕು ಎಂದರು.
ರಾಜ್ಯದಲ್ಲಿ ಭಾರತ್ ಜೋಡ ಯಾತ್ರೆ ಮತ್ತು ಸಿದ್ಧರಾಮೋತ್ಸವದ ನಂತರ ಕಾಂಗ್ರೆಸ್ಸಿಗೆ ಅನುಕೂಲಕರ ವಾತಾವರಣವಿದ್ದು ಪಕ್ಷದ ವರಿಷ್ಠರು ಸಾರ್ವಜನಿಕರೊಂದಿಗೆ ಸಂಪರ್ಕ ಹೊಂದಿರುವ ಮತ್ತು ಕಾರ್ಯಕರ್ತರಿಗೆ ನಿಕಟ ಸಂಬಂಧ ಹೊಂದಿರುವ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಕೋಟೆಪ್ಪ ವರ್ಧೀ ದೇವಪ್ಪ ಲಮಾಣಿ ಜಯಕ್ಕ ಕಳ್ಳಿ ಪರಮೇಶ ಲಮಾಣಿ ಗುರಪ್ಪ ಲಮಾಣಿ ಹಾಜರಿದ್ದು ಕಾರ್ಯಕರ್ತರ ನಿಲುವೇ ತಮ್ಮ ನಿಲುವಾಗಿದೆ ಎಂದು ಸ್ಥಳೀಯರಿಗೆ ಆದ್ಯತೆ ನೀಡಲು ಪಕ್ಷದ ವರಿಷ್ಠರು ಗಮನಹರಿಸಬೇಕು ಎಂದು ಹೇಳಿದರು.
ವಿನೋದ್ ಶಿರಹಟ್ಟಿ, ಶಿವಣ್ಣ ಕಬ್ಬೆರ, ಮಾನಪ್ಪ ಲಮಾಣಿ, ಯಲ್ಲಪ್ಪ ಸೂರಣಗಿ, ಸುಮಿತ್ರ ಚೋಟಗಲ್ ಗಣೇಶ ನಾಯಕ , ಗಣೇಶ್ ಲಮಾಣಿ ಮಹೇಶ ಲಮಾಣಿ ,ರಾಜರತ್ನ ಹುಲಗೂರ, ಸುರೇಶ್ ಬೀರಣ್ಣವರ ,ಗೀತಾ ಬೀರಣ್ಣವರ ,ಭಾಗ್ಯಶ್ರೀ ಲಮಾಣಿ, ಮಂಜಪ್ಪ ಶರಶೂರಿ ,ಹನುಮಂತ ಶರಶೂರಿ, ಸೇರಿದಂತೆ ಅನೇಕರಿದ್ದರು.