ಕ್ಷೇತ್ರದಲ್ಲಿ ಹೊಸ ಬೆಳಕು ಮೂಡಲಿದೆ

ಕೋಲಾರ, ಮಾ.೨೭: ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ೧೫ ವರ್ಷಗಳಿಂದ ಹಿಡಿದಿರುವ ಶನಿಯನ್ನು ಹೋಗಲಾಡಿಸಲು ಇನ್ನೂ ಕೇವಲ ಒಂದೂವರೆ ತಿಂಗಳು ಮಾತ್ರ ಬಾಕಿಯಿದ್ದು ಚುನಾವಣೆಯ ನಂತರ ರಾಜ್ಯದಲ್ಲಿ ಮತ್ತು ಕ್ಷೇತ್ರದಲ್ಲಿ ಹೊಸ ಬೆಳಕು ಮೂಡಲಿದೆ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು.
ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ತಮ್ಮ ಅನುದಾನದಲ್ಲಿ ಹೈಮಾಸ್ಕ್ ಲೈಟ್ ಉದ್ಘಾಟಿಸಿ ನಂತರ ನಡೆದ ಜೆಡಿಎಸ್ ಪಕ್ಷದ ಸಂಘಟನಾ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿ ಅವರು ಪ್ರಸ್ತುತ ನಮ್ಮಗಳ ಮುಂದೆ ಕೋಲಾರ ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆ ಬಂದಿದೆ ಸ್ವಾರ್ಥ ರಾಜಕಾರಣಿಗಳನ್ನು ಚುನಾವಣೆಯಲ್ಲಿ ತಿರಸ್ಕರಿಸಿ ಉತ್ತಮ ಶಾಸಕರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅಭಿವೃದ್ಧಿಗೆ ಒತ್ತು ನೀಡುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸಿದಾಗ ಮಾತ್ರವೇ ಕ್ಷೇತ್ರಕ್ಕೆ ಅಂಟ್ಟಿಸಿಕೊಂಡಿರುವ ಕತ್ತಲು ಸರಿದು ಬೆಳಕು ಮೂಡಲಿದೆ ಎಂದರು.
ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜನತಾ ಜಲಧಾರೆಯ ಮೂಲಕ ನೀರಾವರಿ ಯೋಜನೆಗಳ ಜಾರಿ ಮತ್ತು ಪಂಚರತ್ನ ಯೋಜನೆಯ ಮೂಲಕ ಉಚಿತ ಶಿಕ್ಷಣ, ಆರೋಗ್ಯ, ವಸತಿ, ಮಹಿಳಾ ಸಬಲೀಕರಣವೇ ಜೆಡಿಎಸ್ ಪಕ್ಷದ ಉದ್ದೇಶವಾಗಿದೆ ಜಿಲ್ಲೆ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನನ್ನೊಂದಿಗೆ ಸಿಎಂಆರ್ ಶ್ರೀನಾಥ್ ಅವರನ್ನು ಗೆಲ್ಲಿಸಿದರೇ ವಿಧಾನಸೌಧದಲ್ಲಿ ನಿಮ್ಮಗಳ ಧ್ವನಿಯಾಗಿ ಇಬ್ಬರೂ ಶಾಸಕರು ಕೆಲಸ ಮಾಡುತ್ತೇವೆ ನಿಮ್ಮಗಳ ಬೆಂಬಲ ಸಹಕಾರ ಹೀಗೆ ಇರಲಿ ಎಂದರು.
ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ವಡಗೂರು ಡಿ.ವಿ ಹರೀಶ್ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ದೊಂಬರಾಟ ಪ್ರಾರಂಭವಾಗಿದೆ ಸ್ವಾಭಿಮಾನದಿಂದ ಬದುಕುವ ಜನ ಸ್ವಾರ್ಥ ರಾಜಕಾರಣಕ್ಕೆ ನಮ್ಮನ್ನು ಬಲಿಪಶು ಮಾಡಲು ಹೊರಟಿದ್ದಾರೆ ಅಂತಹ ಸ್ವಾರ್ಥ ರಾಜಕಾರಣದ ವ್ಯಕ್ತಿಗಳಿಗೆ ೨೦೨೩ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲು ಇದು ಸೂಕ್ತವಾದ ಸಮಯ ಬಂದಿದೆ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಿ ವಿದ್ಯಾವಂತ ಸಿಎಂಆರ್ ಶ್ರೀನಾಥ್ ಅವರನ್ನು ಗೆಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಹೂಹಳ್ಳಿ ಪ್ರಕಾಶ್ ಮಾತನಾಡಿ, ದೇಶದಲ್ಲಿ ಟೀ ಮಾರುವ ವ್ಯಕ್ತಿ ಪ್ರಧಾನಿಯಾಗಬಹುದು ಟಮೋಟ ಬೆಳೆದು ಸ್ವಾಭಿಮಾನದಿಂದ ದುಡಿಮೆ ಮಾಡಿ ಮಾರುವ ರೈತನ ಮಗ ಶಾಸಕರಾಗುವಲ್ಲಿ ತಪ್ಪೇನಿದೆ ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ಕುಟುಂಬ ರಾಜಕಾರಣದ ಬಗ್ಗೆ ಹಗುರವಾಗಿ ಮಾತಾಡುವ ಕೆಲವು ಮಂದಿಗೆ ಯಡಿಯೂರಪ್ಪನ ಮಗ ಸಿದ್ದರಾಮಯ್ಯ ಮಗ ರಾಜಕಾರಣದಲ್ಲಿ ಇಲ್ಲವಾ ಬರೀ ದೇವೇಗೌಡರ ಕುಟುಂಬ ಮಾತ್ರವೇ ಇದ್ದೀಯಾ ಮಾಜಿ ಪ್ರಧಾನಿಗಳ ಬಗ್ಗೆ ಮಾತಾಡುವ ನೈತಿಕತೆ ನಿಮಗಿಲ್ಲ ದಲಿತರಿಗೆ ಏನಾದರೂ ಯೋಜನೆಗಳನ್ನು ರೂಪಿಸಿದ್ದ ಪಕ್ಷ ಜೆಡಿಎಸ್ ಮಾತ್ರವೇ ಯಾವತ್ತೂ ಮರೆಯಬಾರದು ಈ ಬಾರಿ ಪ್ರಜ್ಞಾವಂತ ದಲಿತ ಸಮುದಾಯವು ಸಿಎಂಆರ್ ಶ್ರೀನಾಥ್ ಅವರನ್ನು ಬೆಂಬಲಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ಮಾತನಾಡಿ, ಇನ್ನೂ ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ ರಾಷ್ಟ್ರೀಯ ಪಕ್ಷಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಆಗಲಿಲ್ಲ ಆದರೆ ಪ್ರಾದೇಶಿಕ ಪಕ್ಷ ಜೆಡಿಎಸ್ ನನ್ನಂತ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಜೆಡಿಎಸ್ ಅಭ್ಯರ್ಥಿಯಾಗಿ ಮಾಡಿದ್ದಾರೆ ಪಕ್ಷದ ಮತ್ತು ನಿಮ್ಮಗಳ ಪ್ರೀತಿ, ವಿಶ್ವಾಸ, ಗೌರವ, ಕಾಳಜಿಗೆ ಧಕ್ಕೆ ಬಾರದಂತೆ ನಿಮ್ಮಗಳ ಸೇವೆ ಮಾಡುತ್ತೇನೆ ಮಾದರಿ ಕೋಲಾರ ಸ್ವಾಭಿಮಾನ ಕೋಲಾರ ಕಟ್ಟಲು ನನಗೆ ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.