ಕ್ಷೇತ್ರದಲ್ಲಿ ಸದ್ದಿಲದೇ ಸುದ್ದಿಮಾಡುತ್ತಿರುವ ನಾಯಕ

ಲಿಂಗಸೂಗೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೆ. ನಾಗಲಿಂಗಸ್ವಾಮಿಗೆ ನೀಡಿ
ರಾಯಚೂರು,ಮಾ.೧೩-
ಬಿಜೆಪಿ ಪಕ್ಷದ ಸಂಘಟಕ ಹಾಗೂ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರಾಗಿರುವ ಕೆ. ನಾಗಲಿಂಗ ಸ್ವಾಮಿಗೆ ಲಿಂಗಸೂಗೂರು ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿ ಎಂದು ಛಲವಾದಿ ಮುಖಂಡರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಲಿಂಗಸೂಗೂರು ಕ್ಷೇತ್ರದ ಬಿಜೆಪಿ ವಲಯದಲ್ಲಿ ಮಾಜಿ ಶಾಸಕರಿಗೆ ಟಿಕೆಟ್ ಅಂತಿಮವಾಗುವುದಿಲ್ಲ ಎನ್ನುವ ಮಾತುಗಳು ಕ್ಷೇತ್ರದ ಜನತೆಯಲ್ಲಿ ಸುದ್ದಿ ಹರಿದಾಡುತ್ತಿದೆ ಅದಕ್ಕೆ ಪರ್ಯಾಯವಾಗಿ ಎರಡು ಮೂರು ಅಭ್ಯರ್ಥಿಗಳ ಹೆಸರು ಬಲವಾಗಿ ಕೇಳಿ ಬರುತ್ತಿದೆ ಅದೇ ಬಿಜೆಪಿ ಪಕ್ಷದಲ್ಲಿರುವ ಛಲವಾದಿ ಮಹಾಸಭಾದ ರಾಯಚೂರು ಜಿಲ್ಲಾ ಅಧ್ಯಕ್ಷರಾಗಿರುವ ಕೆ. ನಾಗಲಿಂಗಸ್ವಾಮಿಯವರ ಹೆಸರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಪಟ್ಟಿಯಲ್ಲಿ ಇದೆ ಅವರಿಗೆ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಬಿಜೆಪಿ ಮುಖಂಡರು ತಿಳಿಸಿದರು.
ನಾಗಲಿಂಗ ಸ್ವಾಮಿ ಪಕ್ಷದ ಉತ್ತಮ ಸಂಘಟಕ ಛಲವಾದಿ ಸಮಾಜದ ಪ್ರಭಾವಿ ನಾಯಕ, ಶಿವನಗೌಡ ಅಭಿಮಾನಿಗಳ ಸಂಘದ ಮುಖಂಡ,ಇವರು ಬಿಜೆಪಿ ಪಕ್ಷದಲ್ಲಿ ಒಂದಿಲೋದು ರೀತಿಯಲ್ಲಿ ಸಕ್ರಿಯವಾಗಿ ತಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಮೊದಲಿನಿಂದ ಇವರು ನಾಯಕತ್ವ ಗುಣ ಹೊಂದಿದವರಾಗಿದ್ದು, ಎಲ್ಲಾ ಸಮುದಾಯದ ಮುಖಂಡರ ಜೊತೆಗೆ ಅನನ್ಯ ಸಂಬಂಧ ಬೆಳೆಸಿಕೊಂಡಿದ್ದಾರೆ.
ಕೆ. ನಾಗಲಿಂಗ ಸ್ವಾಮಿಯವರು ಕಳೆದ ೨೫ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಂತೆ ಪಕ್ಷಕ್ಕಾಗಿ ಸೇವೆ ಮಾಡುತ್ತಿದ್ದಾರೆ, ಯಾವುದೇ ಹುದ್ದೆಗೆ ಹತೋರಿಯದೇ ಜನ ಸೇವೆಯೇ ನನ್ನ ಗುರಿ, ಜನರಿಗಾಗಿ ನನ್ನ ಸೇವೆಯೆಂದು ತಮ್ಮ ಜೀವನ ಮುಡಿಪಾಗಿಟ್ಟಿರುವ ಇವರು ತಮ್ಮ ಪಾಲಿಗೆ ಬಂದಿದ್ದು ಪಂಚಮೃತವೆಂದು ತಿಳಿದು ಅಧಿಕಾರ ಇದ್ದರು ಇಲ್ಲದಿದ್ದರೂ ಸದಾ ಸಕ್ರಿಯವಾಗಿ ಎಲ್ಲಾ ಸಮುದಾಯದವರನ್ನ ಒಟ್ಟಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಕ್ಕಾಗಿ ಸೇವೆ ಮಾಡುತ್ತಿದ್ದಾರೆ.
ಕೊರೋನಾ ಸಂದರ್ಭದಲ್ಲಿ ಶಿವನಗೌಡ ಅಭಿಮಾನಿಗಳ ಸಂಘದಿಂದ ಜಿಲ್ಲೆಯಲ್ಲಿ ಹಲವರಿಗೆ ಸಹಾಯ ಮಾಡಿದರು ಹಾಗೂ ಹಲವಾರು ಬಡವರಿಗೆ ಎಲೆಮರಿಕಾಯಿಯಂತೆ ಸಹಾಯ ಮಾಡಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅವರದೇ ಆದ ಪಡೆ ಹೊಂದಿದ್ದು ಬಿಜೆಪಿ ಟಿಕೆಟ್ ನೀಡಿದರೆ ಲಿಂಗಸೂಗೂರು ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲಬಹುದು ಎನ್ನುವ ಸುದ್ದಿ ಹರಡಿದೆ..
ಸದಾ ಸಕ್ರಿಯವಾಗಿ ಬಿಜೆಪಿ ಪಕ್ಷದಲ್ಲಿ ತೊಡಗಿಕೊಂಡಿರುವ ನಾಗಲಿಂಗ ಸ್ವಾಮಿಯವರು ಬಿಜೆಪಿ ಟಿಕೆಟ್ ಗಾಗಿ ಹಲವಾರ ಬಳಿ ಚರ್ಚೆ ಮಾಡಿದ್ದೂ ಅನೇಕ ರಾಜ್ಯ ಹಾಗೂ ಕೇಂದ್ರದ ಬಿಜೆಪಿ ನಾಯಕರು ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದಾರೆಂದು ನಾರಾಯಣಸ್ವಾಮಿ ಆಪ್ತರು ತಿಳಿಸಿದರು.

ಬಾಕ್ಸ್
ಕೆ ನಾಗಲಿಂಗ ಸ್ವಾಮಿಯವರು ಪ್ರಬಲ ಛಲವಾದಿ ಸಮಾಜವನ್ನು ಪ್ರತಿನಿಧಿಸುವ ಕಾರಣ ಇವರಿಗೆ ಹಲವಾರು ಸಮುದಾಯದ ಸಹಕಾರವಿದೆ,ಅನೇಕ ಹಿರಿಯರು ಇವರಿಗೆ ಬೆನ್ನೆಲುಬಾಗಿದ್ದಾರೆ.
ಛಲವಾದಿ ಸಮಾಜದ ಜಿಲ್ಲಾ ಅಧ್ಯಕ್ಷರಾಗಿ ಇವರು ಈಗಾಗಲೇ ಲಿಂಗಸೂಗೂರಿನಲ್ಲಿ ಜಿಲ್ಲಾ ಸಮಾವೇಶ ಮಾಡಿದ್ದಾರೆ,ಬಡವರ ಪಾಲಿನ ಸೇವಕನಂತೆ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ಒಂದು ವೇಳೆ ಪಕ್ಷದ ಟಿಕೆಟ್ ದೊರೆತರೆ ಕ್ಷೇತ್ರದ ಜನತೆ ಇವರಿಗೆ ಆಶೀರ್ವಾದ ಮಾಡುತ್ತಾರೆ ಎನ್ನುವ ಮಾತುಗಳು ಕ್ಷೇತ್ರದ ಹಲವೆಡೆ ಕೇಳಿಬರುತ್ತಿದೆ.

ಬಾಕ್ಸ್
ಕಾಯಕವೇ ಕೈಲಾಸ’ ತತ್ವದಡಿ ಪರಿಶ್ರಮವಹಿಸಿ ಕೆಲಸ ಮಾಡುವ ಇವರು ಪಕ್ಷದ ಸಂಘಟನೆಯಲ್ಲಿ ಎತ್ತಿದಕೈ, ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಛಲವಾದಿ ಸಮಾಜಕ್ಕೆ ಬಿಜೆಪಿ ಪಕ್ಷ ಟಿಕೆಟ್ ನೀಡಿಲ್ಲ ಈ ಭಾರಿಯಾದ್ರು ಕೆ. ನಾಗಲಿಂಗ ಸ್ವಾಮಿಯವರಿಗೆ ಟಿಕೆಟ್ ನೀಡಿದರೆ ಅ ಸಮಾಜಕ್ಕೂ ಅವಕಾಶ ನೀಡಿದಂತೆ ಆಗುತ್ತದೆ ಎಂದು ಹಲವಾರ ಅಭಿಪ್ರಾಯವಾಗಿದೆ,ಯುವಕರಿಗೆ ನೌಕರಿ ಕೊಡಿಸಿರುವ ಇವರು ಹಲವಾರು ಹೋರಾಟಗಳ ಮುಖಾಂತರ ಮನೆಯಿಲ್ಲದವರಿಗೆ ಮನೆ ಮಾಡಿಸಿಕೊಟ್ಟಿದ್ದಾರೆ, ಹೀಗೆ ಹಲವಾರು ಜನಸೇವೆಗಳ ಮುಖಾಂತರ ಕಾರ್ಯ ಮಾಡುತ್ತಿರುವ ಇವರು ನೂರಾರು ಬಡ ಕುಟುಂಬಗಳಿಗೆ ಅನ್ನದಾತರಾಗಿದ್ದಾರೆ. ಹಾಗಾಗಿ ಈ ಬಾರಿ ಲಿಂಗಸೂಗೂರು ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಗಾಗಿ ಪ್ರಬಲ ಆಕಾಂಕ್ಷಿಯೆಂದು ಕೆ ನಾಗಲಿಂಗ ಸ್ವಾಮಿಯವರ ಹೆಸರು ಬಲವಾಗಿ ಕೇಳಿ ಬರುತ್ತಿದೆ.