ಕ್ಷೇತ್ರದಲ್ಲಿ ಶಾಸಕಿಯವರು ಕಾಣೆಯಾಗಿದ್ದಾರೆ-ಆರೋಪ

ಕೋಲಾರ,ಸೆ.೨೦: ಕೆಜಿಎಫ್ ವಿಧಾನಸಭ ಕ್ಷೇತ್ರದ ಗಡಿಭಾಗವಾಗಿರುವ ಗ್ರಾಮಾಂತರ ಭಾಗದಲ್ಲಿ ಕೆಜಿಎಫ್ ಕ್ಷೇತ್ರದ ಶಾಸಕಿಯವರು ಕಾಣೆಯಾಗಿದ್ದಾರೆ ಅವರು ಕೆಜಿಎಫ್ ನಗರದ ಭಾಗಕ್ಕೆ ಸೀಮಿತವಾಗಿದ್ದು ಗ್ರಾಮಾಂತರ ಭಾಗದಲ್ಲಿ ಕಾಣೆಯಾಗಿದ್ದಾರೆ ಎಂದು ಮಾಜಿ ಶಾಸಕ ವೈ ಸಂಪಂಗಿ ಆರೋಪ ವ್ಯಕ್ತಪಡಿಸಿದ್ದಾರೆ.
ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಹೋಬಳಿಯ ಜಕ್ಕರಸಕುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬೂರು, ಸಂಗನಹಳ್ಳಿ ಹಾಗೂ ದೊಡ್ಡಗಾಂಡ್ಲಹಳ್ಳಿ ಗ್ರಾಮಗಳಲ್ಲಿ ಏರ್ಪಡಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಕ್ಷೇತ್ರದಲ್ಲಿ ಅಭಿವೃದ್ದಿ ಇಲ್ಲ: ಕೆಜಿಎಫ್ ಕ್ಷೇತ್ರದಲ್ಲಿ ಡಿಸಿಸಿ ಬ್ಯಾಂಕ್ ನಿಂದ ಸಾಲವನ್ನು ನೀಡಿದರೆ ಸಾಲದು ಕ್ಷೇತ್ರವನ್ನು ಅಭಿವೃದ್ದಿ ಮಾಡುವು ಕೆಲಸವನ್ನು ಈ ಭಾಗದ ಶಾಸಕಿ ಮಾಡಬೇಕಾಗಿದೆ, ನಿಮಗೆ ಮತ ನೀಡಿ ಶಾಸಕಿಯಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನರಿಗೆ ನುಮ್ಮ ಕೊಡುಗೆ ಏನೂ ಎಂಬುವುದ ಪ್ರಶ್ನೇ ಮಾಡಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಇರುವ ಡಿಸಿಸಿ ಬ್ಯಾಂಕ್ ನವರು ಶ್ರೀ ಶಕ್ತಿ ಸಂಘಗಳ ಹೆಸರಿನಲ್ಲಿ ಸುಮಾರು ಕೋಟಿಗಳು ಹಣವನ್ನು ಲೂಟಿ ಮಾಡಿದ್ದಾರೆ, ಈ ಬಗ್ಗೆ ತನಿಖೆ ನಡೆಯುತ್ತಿದ್ದು ಈ ತಿಂಗಳು ೨೯ ರಂದು ನ್ಯಾಯಲಯಲ್ಲಿ ತಿರ್ಪೂ ಬರುತ್ತದೆ ಎಂದು ಮಾಜಿ ಶಾಸಕ ವೈ ಸಂಪಂಗಿ ಆರೋಪ ಮಾಡಿದ್ದಾರೆ.
ಕ್ಷೇತ್ರಕ್ಕೆ ಮನೆಗಳು ಎಷ್ಟು ನೀಡಿದ್ದಾರೆ: ಕೆಜಿಎಫ್ ಕ್ಷೇತ್ರದಲ್ಲಿ ಶಾಸಕಿಯಾಗಿ ೩ ವರ್ಷಗಳು ಕಳೆಯುತ್ತಿದ್ದೆ, ಶಾಸಕಿ ಅವರ ಅನುದಾನದಲ್ಲಿ ಕ್ಷೇತ್ರದ ಬಡ ಕುಟುಂಬಳಿಗೆ ಎಷ್ಟು ಮನೆಗಳನ್ನು ತಂದಿದ್ದಾರೆ ಎಂದು ಹೇಳಬೇಕು ಎಂದು ಒತ್ತಾಯಿಸಿದ್ದಾರೆ.
ಹೆಣ್ಣು ಮಕ್ಕಳಿಗೆ ಮೋಸ ಮಾಡಬಾರದು: ಕೆಜಿಎಫ್ ಕ್ಷೇತ್ರದಲ್ಲಿ ನೀವು ಒಬ್ಬ ಹೆಣ್ಣಾಗಿದ್ದು, ಕ್ಷೇತ್ರದ ಹೆಣ್ಣು ಮಕ್ಕಳಿಗೆ ಹರಿಶಿಣ, ಕುಂಕುಮ, ಹೂವು ನೀಡಿ ಡಿಸಿಸಿ ಬ್ಯಾಂಕ್ ನಿಂದ ಸಾಲವನ್ನು ನೀಡುವುದರ ಜೊತಗೆ ನನ್ನನ್ನು ಶಾಸಕಿಯಾಗಿ ಮಾಡಿದರೆ ಸಾಲವನ್ನು ಮನ್ನಾ ಮಾಡುವ ಭರವಸೆಯನ್ನು ನೀಡಿ ಶಾಸಕಿಯಾಗಿ ಆಯ್ಕೆಯಾದ ಮೇಲೆ ಮತ್ತೆ ಡಿಸಿಸಿ ಬ್ಯಾಂಕ್ ನಿಂದ ನೀಡಿದ ಸಾಲವನ್ನು ಮರುಪಾವತಿ ಮಾಡಬೇಕು ಎಂದು ಹೇಳಿ ಮೋಸ ಮಾಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಸಂಘಟನೆಗಳ ವಿರುದ್ದ ಮಾತು ವಾಪಸ್ ಪಡೆಯಬೇಕು: ಇತ್ತೀಚಿನ ದಿನಗಳಲ್ಲಿ ಬೇತಮಂಗಲ ದಿಂದ ವಿಕೋಟ ಮುಖ್ಯ ರಸ್ತೆ ತುಂಬಾ ಅದುಗೆಟ್ಟಿತ್ತು ಆದ್ದರಿಂದ ಸ್ವಾಮಿ ವಿವೇಕನಂದ ಯುವ ಬ್ರೀಗೆಡ್ ನಿಂದ ಹೋರಾಟ ಮಾಡಿದ್ದಾರೆ, ಈ ವಿಷಯಕ್ಕೆ ಸಂಬಂದಿಸಿದಂತೆ ಶಾಸಕಿಯವರು ವಿಧಾನಸೌದದಲ್ಲಿ ಸಂಘಟನೆಗಳ ಬಾಯಿ ಮುಚ್ಚುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ, ಈ ಮಾತನ್ನು ಶಾಸಕಿಯವರು ವಾಪಸ್ ಪಡೆಯಬೇಕು ಎಂದು ಸ್ವಾಮಿ ವಿವೇಕನಂದ ಯುವ ಬ್ರೀಗೆಡ್ ಕಾರ್ಯದರ್ಶಿ ಸುನೀಲ್ ತಿರುಗೇಟು ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ತಾಪಂ ಸದಸ್ಯರಾದ ಡಾ. ಕೃಷ್ಣಮೂರ್ತಿ, ಎನ್ ಜಿ ಹುಲ್ಕೂರು ಗ್ರಾಪಂ ಅಧ್ಯಕ್ಷರಾದ ಸುನಿಲ್ ಕುಮಾರ್, ಬೇತಮಂಗಲ ಗಣೇಶ್, ಪಾರಂಡ್ಲಹಳ್ಳಿ ಧಶರತ್ ರೆಡ್ಡಿ, ಕ್ಯಾಸಂಬಳ್ಳಿ ಜಗದಭಿರಾಮ್, ಹಂಗಳ ರಮೇಶ್, ಮಾಜಿ ಅಧ್ಯಕ್ಷ ಮುನಿಯಪ್ಪ, ಜೆಸಿಬಿ ಮುನಿಯಪ್ಪ, ತೊಂಗಳಕುಪ್ಪ ಶ್ರೀನಿವಾಸ್ ನಾಯ್ಡು, ಮಾರಸಂದ್ರ ಬಾಬು, ಗ್ರಾಪಂ ಸದಸ್ಯರಾದ ನಾರಾಯಣಸ್ವಾಮಿ, ಮುರಳಿಮೋಹನ್, ಪೂಗಾನಹಳ್ಳಿ ಪುರುಷೋತ್ತಮ್, ಮುಖಂಡರಾದ ಅಮರನಾರಾಯಣ್ ರೆಡ್ಡಿ, ಶ್ರೀನಿವಾಸರ್ ಸೇರಿದಂತೆ ಆನೇಕರು ಇದ್ದರು.