ಕ್ಷೇತ್ರದಲ್ಲಿ ರೈತರ ಬದುಕು ಹಸನಾಗಿ ಸಲು ಸದಾ ಸಿದ್ದ :- ಶಾಸಕ ಬಿ.ದೇವೇಂದ್ರಪ್ಪ

ಜಗಳೂರು.ಜೂ.೩:- ಕ್ಷೇತ್ರದಲ್ಲಿ ರೈತನ ಬದುಕು ಹಸನಾಗಿಸಲು ಸದಾ ಸಿದ್ದನಾಗಿರುವೆ ಎಂದು ಶಾಸಕ ಚಿಕ್ಕಮ್ಮನ ಹಟ್ಟಿ ಬಿ.ದೇವೇಂದ್ರಪ್ಪ  ಭರವಸೆ ನೀಡಿದರು.ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಜಲಾನ  ಯನ ಅಭಿವೃದ್ದಿ ಇಲಾಖೆ,ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ,ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ,ಸಹ ಯೋಗದಲ್ಲಿ ನೂತನ ಕಛೇರಿ ಮತ್ತು ಗೋದಾಮು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದೇಶದ ಬೆನ್ನೆಲುಬು ಅನ್ನದಾತನಿಗೆ ಕೃಷಿ ಚಟುವಟಿಕೆಗಳಿಗೆ ಪರಿಕ ರಗಳನ್ನು ಪೂರೈಕೆಮಾಡುವ ಮೂಲಕ ರೈತರ ಶ್ರೆಯೋಭಿವೃದ್ದಿಗೆ ಶ್ರಮಿಸುವ ಉತ್ಪಾದಕ ಕಂಪನಿ ಕಾರ್ಯವೈಖರಿ ಶ್ಲಾಘನೀಯ ಎಂದರು.ಮಾಜಿ ಶಾಸಕ ಗುರುಸಿದ್ದನಗೌಡ ಮಾತನಾಡಿ,ಪ್ರತಿಯೊಬ್ಬ ವ್ಯಕ್ತಿ ಯೂ ಸಾಮಾಜಿಕ ಸೇವೆಯಲ್ಲಿ ಕ್ರಿಯಾಶೀಲತೆ ಹೊಂದಬೇಕಿದೆ. ಸರಕಾರಿ ನೌಕರರಿಗೆ, ಡಾಕ್ಟರ್ ಇಂಜಿನಿಯರ್ ಗಳಿಗೆ ಸಿಗುವ ಸಾಮಾಜಿಕ ಗೌರವ ಕೃಷಿ ಉತ್ಪಾದಕ ರೈತನಿಗೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ರೈತನು ಬೆಳೆದ ಬೆಳೆಗೆ ಸೂಕ್ತ ಬೆಲೆಯಿಲ್ಲದೆ ಆದಾಯದಿಂದ ವಿಮುಖಗೊಂಡು ಬೀದಿಗೆ ಬಿದ್ದಿದ್ದಾನೆ.ಮಳೆಯಾಶ್ರಿತವಾಗಿರುವ ಖುಷ್ಕಿ ಜಮೀನಿನಲ್ಲಿ ಮಿಶ್ರ ಬೆಳೆಗೆ ಮುಂದಾಗಬೇಕು.ಕ್ಷೇತ್ರದಲ್ಲಿ ಸರಕಾರದ ರೈತಪರವಾದ ಚಟುವಟಿಕೆಗಳು ಚುರುಕುಗೊಳ್ಳಲಿ ಶಾಸಕರು ಹೆಚ್ಚು ಅನುದಾನದಲ್ಲಿ ಕ್ಷೇತ್ರ ಅಭಿವೃದ್ದಿಪಡಿಸಲಿ ಎಂದು ನೂತನ ಶಾಸಕ ದೆವೇಂದ್ರಪ್ಪ ಅವರಿಗೆ ಸಲಹೆ ನೀಡಿದರು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ,ಸಾಂಪ್ರದಾಯಿಕ ಕೃಷಿ ಚಟುವಟಿಕೆ ಜೊತೆಗೆ ಉಪಕಸುಬುಗಳನ್ನು ಅಳವಡಿಸಿ ಕೊಂಡು ವಿವಿಧ ಇಲಾಖೆಗಳಿಂದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕಿದೆ.ಕೃಷಿ ಒಂದು ಉದ್ಯಮವಾಗಬೇಕಿದೆ.ರೈತರು ವಿಜ್ಞಾನ ಕೇಂದ್ರಗಳಿಂದ ತರಬೇತಿ ಪಡೆಯಬೇಕು.ಎತ್ತುಗಳ ಸಂಖ್ಯೆ ಕ್ರಮೇಣ ಕ್ಷೀಣಗೊಳ್ಳುತ್ತಿದೆ.ಹೈನುಗಾರಿಕೆ ರೂಪಿಸಿಕೊಂಡರೆ.ಸಾವ ಯವ ಕೃಷಿಗೆ ಪೂರಕವಾಗುತ್ತದೆ.ನಮ್ಮ ತಾಲೂಕಿನಲ್ಲಿ ಫಲವತ್ತತೆ ಯ ಭೂಮಿ ಒಳಗೊಂಡಿದೆ ಮುಂದಿನ ದಿನಗಳಲ್ಲಿ ಕೆರೆಗಳು ಭರ್ತಿಯಾಗಿ ನೀರಾವರಿ ಪ್ರದೇಶವಾಗಲಿದೆ ಎಂದು ಹೇಳಿದರು.ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತ ನಾಡಿ,ಸನಾತನ ಕೃಷಿ ಪದ್ದತಿ ಸುಸ್ಥಿರವಾಗಿತ್ತು.ಮೆಕ್ಕೆಜೋಳದ ಬೆಳೆ ಯಲ್ಲಿ ಅಂತರ ಬೆಳೆಯಾಗಿ ದ್ವಿದಳ ಧಾನ್ಯ ತೊಗರಿ,ಅಂಚಿನಲ್ಲಿ ಔಡಲ ಬೆಳೆ ಬಿತ್ತನೆಮಾಡಬೇಕು.ಈ ಕುರಿತು ಕಳೆದ ಮೂರು ವರ್ಷಗಳಿಂದ ಇಲಾಖೆಯಿಂದ ಜಾಗೃತಿ ಆಂದೋಲನ ನಡೆಸಲಾ ಗುತ್ತಿದೆ.ದಾವಣಗೆರೆ ಜಿಲ್ಲೆಗೆ ಮೂರು ಶ್ರೇಣಿಯ ಪ್ರಶಸ್ತಿಗಳಿಗೆ ಭಾಜ ನವಾಗಿರುವುದು ಹೆಮ್ಮೆಯ ಸಂಗತಿ ಎಂದರು.