ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮೇ 27 :- ಕ್ಷೇತ್ರದಲ್ಲಿ ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ ಸೀಮಿತವಾಗಿ ತೆಗೆದುಕೊಂಡು ನಂತರ ಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾದ ನಂತರ ಯಾರು ಯಾವ ಪಕ್ಷಕ್ಕೆ ಮತ ಹಾಕಿರಲಿ ಅದನ್ನು ನಾನೆಂದು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಲ್ಲರನ್ನು ಪಕ್ಷಾತೀತವಾಗಿ ಪರಿಗಣಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದುಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕ್ಷೇತ್ರದಲ್ಲಿ ಈ ಬಾರಿ ಆರೋಗ್ಯಕರ ಚುನಾವಣೆ ನಡೆದಿದೆ ಅದು ಸಂತಸದ ವಿಷಯವಾಗಿದ್ದು ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಶಾಸಕನಾಗಿದ್ದೇನೆ ಕ್ಷೇತ್ರದಲ್ಲಿ ಯಾವ ಯಾವ ಪಕ್ಷಕ್ಕೆ ಯಾವ ಯಾವ ಬೂತ್ ನಲ್ಲಿ ಎಷ್ಟು ಮತಗಳು ಬಿದ್ದಿವೆ ಎಂದು ನನ್ನ ಹತ್ತಿರವಿದ್ದರೂ ಇದನ್ನು ನಾನು ಗಮನಿಸದೆ ನೋಡದೆ ನಿಮ್ಮ ಕಣ್ಣೆದುರೇ ಹರಿದು ಹಾಕಿ ಇಂದಿನಿಂದಲೇ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಬೂತ್ ಮಟ್ಟದಲ್ಲಿ ಎಷ್ಟೆಷ್ಟು ಮತ ಬಂದಿವೆ ಎನ್ನುವ ಪ್ರತಿಯನ್ನು ಶಾಸಕ ಡಾ ಶ್ರೀನಿವಾಸ ಹರಿದು ಹಾಕಿ ಪಕ್ಷಾತೀತ ಆಡಳಿತಕ್ಕೆ ಮುನ್ನುಡಿ ಬರೆದರು.
One attachment • Scanned by Gmail
ReplyForward |