ಕ್ಷೇತ್ರದಲ್ಲಿ ಅಲ್ಲಲ್ಲಿ ಬ್ರೆಂಚ್ ಹಾಕಿದ್ದೇ ಬಿಜೆಪಿ ಸಾಧನೆ: ಶಾಸಕ ರಾಜಶೇಖರ್ ಪಾಟೀಲ್

ಹುಮನಾಬಾದ:ಫೆ.28: ಕ್ಷೇತ್ರದ ಎಲ್ಲಾಕಡೆಗಳಲ್ಲಿ ಕುಳಿತುಕೊಳ್ಳುವ ಬ್ರೆಂಚ್ ಹಾಕಿದೆ ಬಿಜೆಪಿ ಪಕ್ಷದ ಸಾಧನೆಯಾಗಿದೆ ಎಂದು ಶಾಸಕ ರಾಜಶೇಖರ ಪಾಟೀಲ ವ್ಯಂಗ್ಯವಾಡಿದರು.

ತಾಲೂಕಿನ ಬೊರಂಪಳ್ಳಿ . ಕಠಳ್ಳಿ ಗ್ರಾಮದಲ್ಲಿ ಏರ್ಪಡಿಸಿದ ಗ್ಯಾರಂಟಿ ಕಾರ್ಡ ವಿತರಣೆ ಕಾರ್ಯಕ್ರಮ ಸಭೆಯಲ್ಲಿ ಅವರು ಮಾತನಾಡಿದರು.

ವೃತ್ತಗಳಲ್ಲಿ ಬ್ರೆಂಚ್ ಹಾಕುವುದೇ ಸಾಧನೆ ಎಂದರೆ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಎಲ್ಲಾ ಕಡೆಗಳಲ್ಲಿ ಬ್ರೆಂಚ್ ಹಾಕಿಸುವ ಕೆಲಸ ನಾನು ಮಾಡಬಹುದು ಎಂದ ಅವರು, ಪ್ರತಿಯೊಂದು ಗ್ರಾಮಗಳ ಅಭಿವೃದ್ಧಿ ಕಾರ್ಯಗಳಿಗೆ ಹಚ್ಚಿನ ಆದ್ಯತೆ ನೀಡಿ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ತಲಾ ಹತ್ತು ಕೆಜಿ ಅಕ್ಕಿ, 200 ಯುನಿಟ್ ಉಚಿತ ವಿದ್ಯುತ್, ಮನೆಯ ಪ್ರಮುಖ ಮಹಿಳೆಗೆ ಎರೆಡು ಸಾವಿರ ಹಣ ಸೇರಿದಂತೆ ವಿವಿಧ ಘೋಷಣೆಗಳು ಸರ್ಕಾರ ಬಂದ 24 ಗಂಟೆಗಳಲ್ಲಿ ಜಾರಿ ಆಗುತ್ತವೆ ಎಂದು ತಿಳಿಸಿದರು.

ಸಿದ್ಧರಾಮಯ್ಯ ಸರ್ಕಾರದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳು ನೀಡಿದ್ದಾರೆ. ಕಾರಣ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. ಗ್ರಾಮಗಳಗೆ ಭೇಟಿನೀಡುವ ಇತರೆ ಪಕ್ಷದ ಮುಖಂಡರು ನಿಮ್ಮ ಗ್ರಾಮಗಳ ಅಭಿವೃದ್ಧಿಗಾಗಿ ಯಾವ ಏನ್ನು ಕೆಲಸ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಕೆಲವರು ರಾಜಕೀಯವಾಗಿ ಮಾತಾಡಿ ಜನರ ಮಧ್ಯೆ ಗೊಂದಲ ಮೂಡಿಸುತ್ತಿದ್ದು, ಯಾರು ಏನ್ನು ಕೆಲಸ ಮಾಡಿದ್ದಾರೆ ಎಂದು ಜನರು ತಿಳಿದುಕೊಂಡು ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸಬೇಕು ಎಂದರು.

ವೀರಣ್ಣ ಪಾಟೀಲ್, ಅಭಿಷೇಕ್ ಪಾಟೀಲ, ಕೇಶವರಾವ ತಳಘಟಕರ್, ದೀಲಿಪಕುಮಾರ ಬಗದಲ್ಕರ್, ರೇವಣ್ಣಸಿದ್ದಪ್ಪ ಪಾಟೀಲ, ಪ್ರಭುರಾವ ತಾಳಮಡಗಿ, ಸಿದ್ದು ಪಾಟೀಲ ಬೇಳಕೆರಾ, ಪಂಚಾಯತ್ ಅಧ್ಯಕ್ಷೆ ಪ್ರೀಯಾಂಕಾ ಜಮಾದರ, ಅರುಣಕುಮಾರ ಕುರಣೆ, ಉಮೇಶ ಜಮಗಿ, ಬಾಬುರಾವ ಅರ್ಜಿ, ಸುಭಾಶ ವರ್ಮಾ, ಸುರೇಶ ದೇವಣಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ. ಅಪ್ಸರ್ ಮಿಯ್ಯಾ, ಬಾಬುರಾವ ಪರಮಶೇಟ್ಟಿ, ಸೇರಿದಂತೆ ಅನೇಕರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು