ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮರೀಚಿಕೆ – ವಿರೂಪಾಕ್ಷಿ

ದೇವದುರ್ಗ.ಆ.೦೬- ಜನತಾ ಜಲಧಾರೆ ಯಾತ್ರೆ ಕೈಗೊಂಡು ಜೆಡಿಎಸ್ ಯಶಸ್ಸು ಕಂಡಿದ್ದು, ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪಂಚರತ್ನ ಕಾರ್ಯಕ್ರಮ ನಡೆಸುವುದಕ್ಕೆ ಜೆಡಿಎಸ್ ವರಿಷ್ಠರು ಸಿದ್ಧತೆ ನಡೆಸಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ತಿಳಿಸಿದರು.
ಪಟ್ಟಣದ ಕರೆಮ್ಮ ಜಿ.ನಾಯಕ ನಿವಾಸದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈಗಾಗಲೇ ಪಕ್ಷದ ವತಿಯಿಂದ ರಾಜ್ಯಾದ್ಯಂತ ಕಾರ್ಯಕ್ರಮ ಕೈಗೊಂಡಿದ್ದು ತಾಲೂಕಿನಲ್ಲಿ ಕರೆಮ್ಮ ಜಿ.ನಾಯಕ ನೇತೃತ್ವದಲ್ಲಿ ಕರೆಮ್ಮ ನಡೆ ಹಳ್ಳಿ ನಡೆ ಎಂಬ ಕಾರ್ಯಕ್ರಮವನ್ನ ಈಗಾಗಲೇ ನಡೆಸಲಾಗುತ್ತಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಜನರ ಸಮಸ್ಯೆ ಕೇಳುವವರು ಇಲ್ಲದಂತಾಗಿದೆ. ಅಭಿವೃದ್ಧಿ ಕಾರ್ಯಗಳು ಮರೀಚಿಕೆ ಆಗಿವೆ. ಹಲವು ಗ್ರಾಮಗಳ ರಸ್ತೆಗಳು ಹಾಗೂ ಮೂಲಭೂತ ಸೌಕರ್ಯ ಕಾಣದಂತಾಗಿದೆ. ತಾಲೂಕಿನಲ್ಲಿ ಆಡಳಿತ ವಿರೋಧಿ ಅಲೆ ಹಿನ್ನೆಲೆಯಲ್ಲಿ ಶಾಸಕರು ಮಾನ್ವಿಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಬೇರೋಂದು ಕ್ಷೇತ್ರದಲ್ಲಿ ಜನ್ಮದಿನ ಆಚರಿಸಿಕೊಳ್ಳುವುದು ಅಂದ್ರೆ ಏನು ಅರ್ಥ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ ನಿರುದ್ಯೋಗ ಹೆಚ್ಚಿದೆ. ಇದರಿಂದ ಯುವಕರು ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೆ ಇಲ್ಲಿನ ಜನಪ್ರತಿನಿಧಿಗಳು ಸಮ್ಮತಿಯಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಮರಳು ದಂಧೆ, ಜೂಜಾಟ ಸೇರಿ ಇತರ ಅಕ್ರಮಗಳು ನಡೆಯುತ್ತಿದ್ದರೂ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಸರ್ಕಾರ ಮಟ್ಟದಲ್ಲಿ ಶೇ.೪೦ ಭ್ರಷ್ಟಚಾರ ನಡೆಯುತ್ತಿದೆ. ಆದ್ರೆ, ತಾಲೂಕಿನಲ್ಲಿ ಇದಕ್ಕಿಂತ ಜಾಸ್ತಿ ನಡೆಯುತ್ತಿದೆ ಎಂಬ ಅವರು ಆಪಾದಿಸಿದರು.
ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್, ಕರೆಮ್ಮ ಜಿ ನಾಯಕ, ಮಹಾಂತೇಶ್ ಪಾಟೀಲ್ ಅತ್ತನೂರು, ಮುದಕಪ್ಪ ಮಾಸ್ತರ, ಶಾಲಂ ಉದ್ದಾರ್, ನಿರ್ಮಲಾ, ಇಸ್ಹಾಕ್ ಮೇಸ್ತ್ರಿ, ಹನುಮಂತ್ರಾಯ ಚಿಂತಲಕುಂಟ ಸೇರಿ ಇತರರಿದ್ದರು.