
ಹುಬ್ಬಳ್ಳಿ,ಮಾ8: ಕಳೆದ 10ವರ್ಷಗಳಲ್ಲಿ ಕ್ಷೇತ್ರದ ಪ್ರತಿಯೊಂದು ಪ್ರದೇಶದಲ್ಲೂಅಭಿವೃದ್ಧಿಕಾರ್ಯ ಮಾಡಲಾಗಿದೆ. ಇಂದುಕೋಠಾರಿ ನಗರದಲ್ಲಿಏಕಕಾಲದಲ್ಲಿರಸ್ತೆ, ಒಳಚರಂಡಿ ಮತ್ತುಕುಡಿಯುವ ನೀರಿನ ಸೌಲಭ್ಯಒದಗಿಸಲು 3ಕೋಟಿ 75ಲಕ್ಷ ರೂ.ಅನುದಾನದಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕ್ಷೇತ್ರದಕಟ್ಟಕಡೆಯಬಡಾವಣೆಯನ್ನೂಹೈಟೆಕ್ ಮಾಡಲಾಗುತ್ತಿದೆಎಂದು ಶಾಸಕ ಪ್ರಸಾದಅಬ್ಬಯ್ಯ ಹೇಳಿದರು.
ಅವರು, ವಾರ್ಡ್ ಸಂಖ್ಯೆ 61ರಲ್ಲಿ ಬರುವಗದಗರಸ್ತೆರೈಲ್ವೆ ಮೇಲ್ಸೇತುವೆ ಬಳಿಯ ಕೋಠಾರಿ ನಗರದಲ್ಲಿ 1ಕೋಟಿ ರೂ.ವೆಚ್ಚದಲ್ಲಿರಸ್ತೆ, 1.25ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ, 1.35ಕೋಟಿ ರೂ.ವೆಚ್ಚದಲ್ಲಿಕುಡಿಯುವ ನೀರಿನ ಪೈಪ್ ಅಳವಡಿಕೆ ಮತ್ತು 15ಲಕ್ಷ ರೂ.ವೆಚ್ಚದಲ್ಲಿಭೂಗತ ವಿದ್ಯುತಿಕರಣ ಸೇರಿದಂತೆಒಟ್ಟು3ಕೋಟಿ 75ಲಕ್ಷ ರೂ.ಅಭಿವೃದ್ಧಿಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿದರು.
ಹಿಂದೆಂದುಕಾಣದಂತಅಭಿವೃದ್ಧಿ ಕಾರ್ಯಗಳನ್ನು ಕಳೆದ 10ವರ್ಷಗಳಲ್ಲಿ ಮಾಡಲಾಗಿದೆ.ಕ್ಷೇತ್ರದಕಟ್ಟಕಡೆಯ ಬಡಾವಣೆಯಾಗಿರುವಕೋಠಾರಿ ನಗರದಅಭಿವೃದ್ಧಿಗಾಗಿಏಕಕಾಲದಲ್ಲೇರಸ್ತೆ, ನೀರು, ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಶೀಘ್ರದಲ್ಲೇ ಕಾಲೋನಿಯಚಿತ್ರಣವೇ ಬದಲಾಗಲಿದೆಎಂದು ಹೇಳಿದರು.
ಕ್ಷೇತ್ರಕ್ಕೆಇನ್ನು ಅನೇಕ ಯೋಜನೆಗಳು ತರುವ ಚಿಂತನೆಗಳಿವೆ. ಮುಂದಿನ ದಿನಗಳಲ್ಲಿ ಜನರ ಸಹಕಾರದೊಂದಿಗೆಕ್ಷೇತ್ರದ ಸಮಗ್ರಅಭಿವೃದ್ಧಿಗೆಒತ್ತು ನೀಡಲಾಗುವುದುಎಂದರು.
ವಾರ್ಡ್ ಸದಸ್ಯರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾದ ವಿರೋಧ ಪಕ್ಷದ ನಾಯಕದೊರೆರಾಜ ಮಣಿಕುಂಟ್ಲ ಮಾತನಾಡಿ, ಕ್ಷೇತ್ರದಲ್ಲಿಜನರ ನಿರೀಕ್ಷೆಗೂಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಾದರಿಕ್ಷೇತ್ರವನ್ನಾಗಿ ಪರಿವರ್ತನೆ ಮಾಡಿದ್ದಾರೆ.ಇಂದು3.75ಕೋಟಿ ರೂ.ಅನುದಾನ ನೀಡುವುದರೊಂದಿಗೆ ಶಾಸಕರುನುಡಿದಂತೆ ನಡೆದಿದ್ದಾರೆಎಂದರು.