
ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.11:- ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಸಂಧಾನಕ್ಕಾಗಿ ಕರೆದು ಯುವಕನೊಬ್ಬನ್ನು ಹತ್ಯೆ ಮಾಡಿದ ಘಟನೆ ತಿ.ನರಸೀಪುರ ಪಟ್ಟಣದ ಅಗ್ನಿಶಾಮಕ ದಳದ ಕಚೇರಿ ಎದುರಿನ ಮಾರುತಿ ಸರ್ವಿಸ್ ಸ್ಟೇಷನ್ ಬಳಿ ನಡೆದಿದೆ.
ಪಟ್ಟಣದ ಶ್ರೀರಾಂಪುರ ಕಾಲೋನಿ ನಿವಾಸಿ ವೇಣುಗೋಪಾಲ್ ನಾಯಕ್ (32) ಕೊಲೆಯಾದ ಯುವಕ.ಯುವ ಬ್ರಿಗೇಡ್ ನ ಸಕ್ರಿಯ ಕಾರ್ಯಕರ್ತ.ಶನಿವಾರ ನಡೆದ ಹನುಮ ಜಯಂತಿ ವೇಳೆ ಮೆರವಣಿಗೆಯ ಸಂದರ್ಭದಲ್ಲಿ ಬೈಕ್ ನಿಲ್ಲಿಸುವ ವಿಚಾರ ಮತ್ತು ನಟ ಪುನೀತ್ ರಾಜಕುಮಾರ್ ಫೆÇೀಟೋ ಇಡುವ ಸಂಬಂಧ ವೇಣುಗೋಪಾಲ್ ಮತ್ತು ಮಣಿ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.ಈ ವೇಳೆ
ಸ್ಥಳದಲ್ಲಿದ್ದ ಕೆಲವರು ಮಧ್ಯಸ್ಥಿಕೆವಹಿಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.ಆದರೆ,ಭಾನುವಾರ ಮಧ್ಯಾಹ್ನ ಕೂಡ ಬಗ್ಗೆ ಇದೇ ಗುಂಪುಗಳ ನಡುವಿನ ಗಲಾಟೆ ನಡೆದು ಆರೋಪಿತ ಮಣಿ ಮತ್ತು ಆತನ ತಂಡ ವೇಣುಗೋಪಾಲ್ ಮೇಲೆ ಹಲ್ಲೆ ನಡೆಸಿತ್ತು.ಅಲ್ಲೂ ಕೂಡ ಕೆಲವರು ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿದ್ದರು.
ಭಾನುವಾರ ರಾತ್ರಿ 8.30 ಸಮಯದಲ್ಲಿ ಆರೋಪಿಗಳಲ್ಲಿ ಒಬ್ಬನಾದ ಮಣಿ ಉ ಕೊಳೆ ಮಣಿ ಎಂಬುವನು ವೇಣುಗೋಪಾಲ್ ಗೆ ಕರೆಮಾಡಿ ಘಟನೆ ಕುರಿತು ಸಂಧಾನ ಮಾಡಲು ಆಹ್ವಾನಿಸಿದ್ದನು. ಆದರೆ, ವೇಣುಗೋಪಾಲ್ ಸಂಧಾನಕ್ಕೆ ಹೋಗಲು ನಿರಾಕರಿಸಿದ್ದನು. ನಂತರ ವೇಣುಗೋಪಾಲ್ ತನ್ನ ಸ್ನೇಹಿತರ ಜೊತೆಗೂಡಿ ಸರ್ವಿಸ್ ಸ್ಟೇಷನ್ ಬಳಿಗೆ ಬಂದಾಗ ಏಕಾಏಕಿ ಬಾಟಲಿನಿಂದ ಹೊಡೆದು, ಬಾಟಲಿಗಳಿಂದ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಸಂಬಂಧ ಪಟ್ಟಣದ ನಿವಾಸಿಗಳಾದ ಮಣಿಕಂಠ ಉಕೊಳೆ ಮಣಿ, ಸಂದೇಶ್, ಶಂಕರೇಗೌಡ, ಅನಿಲ್, ಮಂಜು, ಹ್ಯಾರಿಸ್ ಸೇರಿದಂತೆ ಇತರರ ಮೇಲೆ ತಿ.ನರಸೀಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳು ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೆÇೀಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಕೊಲೆಗೀಡಾದ ವೇಣುಗೋಪಾಲ್ ಪತ್ನಿ ಪೂರ್ಣಿಮಾ ಮಾತನಾಡಿ, ಈ ವೇಳೆ ವ್ಯಾನ್ ನಲ್ಲಿ ಭಾರತ ಮಾತೆಯ ಫೆÇೀಟೋ ಮುಂದೆ ಪುನೀತ್ ರಾಜ್ ಕುಮಾರ್ ಫೆÇೀಟೋ ಹಾಕಿದ್ದರು. ಈ ವೇಳೆ ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಇಲ್ಲಿ ಯಾವ ವ್ಯಕ್ತಿಯ ಫೆÇೀಟೋವನ್ನು ಹಾಕೋದು ಬೇಡ ಎಂದು ಪತಿ ತೆಗೆಸಿದ್ದರು. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಅವರ ಗುಂಪಿನಲ್ಲೇ ಗಲಾಟೆಯಾಗಿತ್ತು. ನಂತರ ನಿನ್ನೆ ಮಧ್ಯಾಹ್ನ ಕೂಡ ಜಗಳವಾಗಿತ್ತು. ಬಳಿಕ ಕಳೆದ ರಾತ್ರಿ ರಾಜಿ ಪಂಚಾಯಿತಿ ಮಾಡುವ ನೆಪದಲ್ಲಿ ನನ್ನ ಗಂಡನನ್ನು ಕರೆಸಿಕೊಂಡು ಕೊಲೆ ಮಾಡಲಾಗಿದೆ. ಹಿಂದುತ್ವಕ್ಕಾಗಿ ಕಳೆದ ಹಲವು ವರ್ಷಗಳಿಂದ ಮುಂಚೂಣೆಯಲ್ಲಿರುವುದನ್ನೇ ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಆರು ಮಂದಿ ವಿರುದ್ಧ ದೂರು ನೀಡಿದ್ದಾರೆ.
ಘಟನೆ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ¯ಡ್ಕರ್, ತಿ.ನರಸೀಪುರ ಪೆÇೀಲೀಸ್ ಠಾಣೆಯಲ್ಲಿ 6 ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ತಿ.ನರಸೀಪುರ ನಿವಾಸಿಗಳಾದ ಮಣಿಕಂಠ, ಸಂದೇಶ್, ಶಂಕರೇಗೌಡ, ಅನಿಲ್, ಮಂಜು, ಹ್ಯಾರಿಸ್ ಎಂಬುವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಮೂರು ತಂಡಗಳ ಮೂಲಕ ಹುಡುಕಾಟ ನಡೆಸಲಾಗುತ್ತಿದೆ. ಹನುಮ ಜಯಂತಿ ವೇಳೆ ಪುನೀತ್‍ರಾಜ್‍ಕುಮಾರ್ ಚಿತ್ರ ಹಾಕದಂತೆ ಹೇಳಿದ ಕಾರಣಕ್ಕೆ ಜಗಳ ಆಗಿ ಅನಂತರ ಕರೆಸಿಕೊಂಡು ಹತ್ಯೆ ಮಾಡಿರುವುದಾಗಿ ದೂರು ಬಂದಿದೆ. ಆದರೆ, 2012ರಲ್ಲೂ ಇವರಿಬ್ಬರ ನಡುವೆ ಮನಸ್ಥಾಪ ಇತ್ತು ಎಂದು ತಿಳಿಸಿದ್ದಾರೆ. ಹೀಗಾಗಿ ಹೆಚ್ಚಿನ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ ಎಂದರು.
ಪ್ರತಿಭಟನೆ:
ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಮೃತ ದೇಹ ರವಾನೆ ಮಾಡಲಾಗಿತ್ತು. ಈ ವೇಳೆ ಆತನ ಹತ್ಯೆ ಮಾಡಿದವರನ್ನು ಬಂಧಿಸಿ ಅವರಿಗೆ ಕಾನೂನು ಶಿಕ್ಷೆ ಜಾರಿಯಾಗಬೇಕು. ಮೃತನ ಕುಟುಂಬಕ್ಕೆ ಆರ್ಥಿಕ ನೆರವು ಹಾಗೂ ಪತ್ನಿಗೆ ಸರ್ಕಾರಿ ನೆರವು ನೀಡಬೇಕೆಂದು ಆರೋಪಿಸಿ ಪತ್ನಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟಿಸಿದರು. ಈ ವೇಳೆ ಆರ್‍ಎಸ್‍ಎಸ್ ಹಾಗೂ ಬಿಜೆಪಿ ಮುಖಂಡರಾದ ತೋಂಟದಪ್ಪ ಬಸವರಾಜು, ಗಿರಿಧರ್ ಹಾಗೂ ಜಿಲ್ಲಾ ಬಿಜೆಪಿ ಮಂಗಳಾ ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟಿಸಿದರು. ತಮ್ಮ ಬೇಡಿಕೆ ಈಡೇರುವವರೆಗೂ ಶವ ಕೊಂಡೊಯ್ಯದಿರುವುದಾಗಿ ಪಟ್ಟು ಹಿಡಿದರು.
ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಮೈಸೂರು ಉಪವಿಭಾಗಧಿಕಾರಿ ರಕ್ಷಿತ್ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ನ್ಯಾಯಯುತವಾಗಿ ಪರಿಹಾರ ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಟ್ಟು ಶವವನ್ನು ನರಸೀಪುರಕ್ಕೆ ಕೊಂಡೊಯ್ಯದರು.
ಸ್ಥಳಕ್ಕೆ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲಿಸಿದರು. ಶಾಂತಿ ಸುವ್ಯವಸ್ಥೆ ದೃಷ್ಟಿಯಿಂದ ಪಟ್ಟಣದಲ್ಲಿ ಹೆಚ್ಚುವರಿ ಪೆÇಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಸ್ವಯಂ ಪ್ರೇರಿತ ಬಂದ್:
ಯುವ ಬ್ರಿಗೇಡ್ ನ ಯುವಕನ ಹತ್ಯೆಯ ಹಿನ್ನೆಲೆಯಲ್ಲಿ ಪಟ್ಟಣದ ಅಂಗಡಿ,ಮಂಗಟ್ಟುಗಳನ್ನು ಮುಚ್ಚಿ ಸ್ವಯಂ ಪ್ರೇರಿತ ಬಂದ್ ಆಚರಿಸಲಾಯಿತು.ಔಷಧಿ ಅಂಗಡಿ,ಸರ್ಕಾರಿ ಕಚೇರಿಗಳು ಮತ್ತು ಕೆಲವೇ ಹೋಟೆಲ್ ಗಳು ತೆರಿದಿದ್ದು ಕಂಡುಬಂದಿತು.ಪೆÇಲೀಸರು ಪಟ್ಟಣದ ತುಂಬಾ ಗಸ್ತು ಕಾರ್ಯ ನಿರ್ವಹಿಸಿದರು.