
ವಿಜಯಪುರ,ಏ.15-ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತ ಬಾಲಕನನ್ನು ವ್ಯಕ್ತಿ ಹತ್ಯೆಗೈದಿರುವ ಘಟನೆ ವಿಜಯಪುರ ನಗರದ ಜಾಮೀಯಾ ಮಸೀದಿ ಬಳಿ ಶುಕ್ರವಾರ ರಾತ್ರಿ ನಡೆದಿದೆ.
15 ವರ್ಷದ ಫಾರಿದ್ ಹೊನವಾಡ ಹತ್ಯೆಯಾದ ಬಾಲಕ.
ರಾಹುಲ್ ಬೆಳ್ಳುಬ್ಬಿ ಬಾಲಕನನ್ನು ಹತ್ಯೆಗೈದಿರುವ ಆರೋಪಿ. ಕ್ಷುಲ್ಲಕ ಕಾರಣಕ್ಕೆ ರಾಹುಲ್ ಮತ್ತು ಫಾರಿದ್ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ರಾಹುಲ್ ಫಾರಿದ್ ಮೇಲೆ ಹಲ್ಲೆಗೈದು ಹತ್ಯೆ ಮಾಡಿದ್ದೇನೆ. ಆರೋಪಿಯನ್ನು ಪೆÇಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಗೋಳಗುಮ್ಮಟ್ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.