
ಬೆಂಗಳೂರು,ಏ.೧೧-ಮನೆ ಮುಂದೆ ನಾಯಿ ಕರೆದುಕೊಂಡು ಬಂದು ಗಲೀಜು ಮಾಡಿಸುವ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಓರ್ವ ನ ಕೊಲೆಯಾಗಿ ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿರುವ ದುರ್ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸೋಲದೇವನಹಳ್ಳಿಯ ಮುನಿರಾಜು ಕೊಲೆಯಾದವರು,ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತೊರ್ವ ಮುರಳಿ ಸ್ಥಿತಿ ಚಿಂತಾಜನಕವಾಗಿದೆ.
ಪ್ರಮೋದ್ ಎಂಬಾತ ಮುನಿರಾಜು ಮನೆ ಮುಂದೆ ನಿತ್ಯ ನಾಯಿ ಕರೆದುಕೊಂಡು ವಾಕಿಂಗ್ ಗೆ ಹೋಗುತ್ತಿದ್ದು ಕೆಲ ದಿನಗಳ ಹಿಂದೆ ಪ್ರಮೋದ್ ಮತ್ತು ರವಿಕುಮಾರ್ ನಾಯಿ ಜೊತೆಗೆ ಬಂದು ಮುನಿರಾಜು ಮನೆ ಮುಂದೆ ಸಿಗರೇಟ್ ಸೇದಿ ಸಮಸ್ಯೆ ಉಂಟುಮಾಡಿದ್ದರು ಇದರಿಂದ ಬೇಸತ್ತು ಮುನಿರಾಜ್ ಅವರಿಬ್ಬರ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಮುನಿರಾಜು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಮೋದ್ ಮತ್ತು ರವಿಕುಮಾರ್ ಅವರನ್ನು ಠಾಣೆಗೆ ಬರಹೇಳಿ ಇಬ್ಬರಿಗೂ ಬೈದು ಬುದ್ದಿ ಹೇಳಿ ಮುಚ್ಚಳಿಕೆ ಬರೆದು ಕಳುಹಿಸಲಾಗಿತ್ತು.ಆದರೆ ಇಬ್ಬರು ಠಾಣೆಗೆ ಹೋಗಿ ಬಂದ ಮರುದಿನ ಮತ್ತೆ ಮುನಿರಾಜ್? ಜೊತೆಗೆ ಗಲಾಟೆ ಮಾಡಿದ್ದಾರೆ.ಗಲಾಟೆ ವೇಳೆ ಪ್ರಮೋದ್, ಪತ್ನಿ ಪಲ್ಲವಿ ಮತ್ತು ರವಿಕುಮಾರ್ ಇಬ್ಬರು ಮುನಿರಾಜು ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಮುನಿರಾಜು ಸಾವನ್ನಪ್ಪಿದ್ದು, ಮುರಳಿ ಎಂಬ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.ಈ ಸಂಬಂಧ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ