ಕ್ಷುಲ್ಲಕ ಕಾರಣಕ್ಕೆ ಚಿಕ್ಕಪ್ಪನ ಕೊಲೆ

ನಂಜನಗೂಡು:ಏ:17: ಅಣ್ಣನ ಮಗನಿಂದಲೇ ಚಿಕ್ಕಪ್ಪನ ಕೊಲೆ ತಾಲೂಕಿನ ಆಲಂಬೂರು ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ: 1 ಗುಂಟೆ ಜಮೀನಿನ ಹಣಕಾಸು ವಿಚಾರದಲ್ಲಿ ತಕರಾರು ಉಂಟಾಗಿ ಅಣ್ಣನ ಮಗನೇ ಚಿಕ್ಕಪ್ಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಲಕ್ಷ್ಮಣ 50 ವರ್ಷ ಕೊಲೆಯಾದ ದುರ್ದೈವಿ. ಮೃತ ವ್ಯಕ್ತಿಯ ಅಣ್ಣ ರಾಜುವಿನ ಮಗ ಸಿದ್ದರಾಜು ಆರೋಪಿಯು ನಾಪತ್ತೆಯಾಗಿದ್ದಾನೆ. ಘಟನೆಯ ಬಗ್ಗೆ ಮೃತನ ಮಗಳು ಚೈತ್ರಳಿಂದ ಪೆÇಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು, ವೃತ್ತನಿರೀಕ್ಷಕ ಲಕ್ಷ್ಮಿಕಾಂತ ತಳವಾರ್ ಭೇಟಿ ನೀಡಿ ಪರೀಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.