ಕ್ಷಯ ರೋಗ ಮುಕ್ತ ಭಾರತ ನಿರ್ಮಾಣ ಗುರಿ: ಬಳ್ಳಾರಿ

ಬ್ಯಾಡಗಿ,ಸೆ.19: ಕ್ಷಯರೋಗ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರೋಗ್ಯ ಇಲಾಖೆಯ ಮೂಲಕ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 2025ರ ವೇಳೆ ಕ್ಷಯ ರೋಗ ಮುಕ್ತ ಭಾರತ ನಿರ್ಮಾಣ ಗುರಿಯನ್ನು ಹೊಂದಲಾಗಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು.
ಸ್ಥಳೀಯ ತಾಲೂಕ ಪಂಚಾಯತ ಆವರಣದಲ್ಲಿ ತಾಲೂಕಾ ಬಿಜೆಪಿ ಘಟಕದವರು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 72ನೇ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ 68 ಕ್ಷಯ ರೋಗಿಗಳ ದತ್ತು ಸ್ವೀಕಾರ ಮತ್ತು ಪೌಷ್ಠಿಕ ಆಹಾರಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಭಾರತದಲ್ಲಿಯೇ ಶೇ.25ರಷ್ಟು ಕ್ಷಯ ರೋಗಿಗಳು ಹೆಚ್ಚಾಗಿದ್ದು, ರೋಗವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ಮುಂದಾಗಿವೆ. ಇದರ ಜತೆಗೆ ಸಾರ್ವಜನಿಕರು ಕೂಡಾ ಕ್ಷಯದ ಲಕ್ಷಣ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸಬಾರದು ಎಂದು ತಿಳಿಸಿದರಲ್ಲದೇ, ತಾಲೂಕಿನ ಎಲ್ಲ ಗ್ರಾಮಗಳಲ್ಲಿರುವ ಕ್ಷಯ ರೋಗಿಗಳನ್ನು ತಾವು ದತ್ತು ತೆಗೆದುಕೊಂಡು ಅವರಿಗೆ ಅಗತ್ಯ ಔಷಧಿ ಮತ್ತು ಪೌಷ್ಠಿಕ ಆಹಾರದ ಕಿಟ್’ಗಳನ್ನು ನೀಡುವುದಾಗಿ ಘೋಷಿಸಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ನಿಲೇಶ್ ಮಾತನಾಡಿ, 15ವರ್ಷದ ಮಕ್ಕಳಿಂದ
45ವರ್ಷದೊಳಗಿನ ಜನರಲ್ಲಿ ಹೆಚ್ಚಾಗಿ ಕ್ಷಯ ರೋಗ ಪತ್ತೆಯಾಗುತ್ತಿದೆ. ಅದರಲ್ಲಿ ರೋಗಿಗಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದು, ರಾಜ್ಯ ಸರ್ಕಾರ ನಿಕ್ಷಯ್ ಪೆÇೀಷಣಾ ಯೋಜನೆಯಡಿ ಮಾಸಿಕ 500ರೂ. ಗೌರವಧನ ನೀಡುತ್ತಿದ್ದು, ಅದನ್ನು ಪೌಷ್ಠಿಕ ಆಹಾರದ ಸೇವನೆಗೆ ಸದುಪಯೋಗ ಪಡಿಸಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಕ್ಷಯ ರೋಗದ ಬಗ್ಗೆ ಎಚ್ಚೆತ್ತುಕೊಂಡರೆ 2025ರೊಳಗೆ ಕರ್ನಾಟಕವನ್ನು ಕ್ಷಯ ಮುಕ್ತ ರಾಜ್ಯವಾಗಿ ನಿರ್ಮಾಣ ಮಾಡಬಹುದು ಎಂದರು.
ಡಾ.ಪುಟ್ಟರಾಜ ಹಾಗೂ ಡಾ.ವಿನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಗಾಯತ್ರಿ ರಾಯ್ಕರ್, ತಾಲೂಕಾ ಬಿಜೆಪಿ ಅಧ್ಯಕ್ಷ ಹಾಲೇಶ್ ಜಾಧವ, ಪುರಸಭೆ ಸದಸ್ಯರಾದ ವಿನಯ ಹಿರೇಮಠ, ಕಲಾವತಿ ಬಡಿಗೇರ, ಚಂದ್ರಣ್ಣ ಶೆಟ್ಟರ, ಶಿವರಾಜ ಅಂಗಡಿ, ಕವಿತಾ ಸೊಪ್ಪಿನಮಠ, ಫಕ್ಕೀರಮ್ಮ ಚಲುವಾದಿ, ಮುಖಂಡರಾದ ವೀರೇಂದ್ರ ಶೆಟ್ಟರ, ಜಿತೇಂದ್ರ ಸುಣಗಾರ, ವಿದ್ಯಾ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಾಸಕರ ಆಪ್ತ ಸಹಾಯಕ ಬಸವರಾಜ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು.