ಕ್ಷಯ ರೋಗ ಮಾಹಿತಿ ಕಾರ್ಯಾಗಾರ

ಗಂಗಾವತಿ, ಏ.27: ಸಂಶಯಾಸ್ಪದ ಕ್ಷಯರೋಗಿಗಳನ್ನು ಪತ್ತೆ ಹಚ್ಚುವುದರಲ್ಲಿ ಸಮುದಾಯದಲ್ಲಿನ ಮಹಿಳೆಯರ ಪಾತ್ರ ಅಪಾರ ಎಂದು ಕ್ಷಯರೋಗ ಪರಿವೀಕ್ಷಕ ಮಲ್ಲಿಕಾರ್ಜುನ ಹೇಳಿದರು.
ಸ್ಥಳೀಯ ಕಿಲ್ಲಾ ಬಡಾವಣೆಯಲ್ಲಿ ತಾಲೂಕ ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಉಪವಿಭಾಗ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಆಯೋಜಿಸಿದ್ದ ಕ್ಷಯರೋಗ ಮಾಹಿತಿ ಮತ್ತು ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರೋನ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆ ಅನವಶ್ಯಕವಾಗಿ ಜನರು ಹೊರಗಡೆ ಓಡಾಡಬೇಡಿ‌.
ಸಾಮಾಜಿಕ ಅಂತರ ಕಾಪಾಡಬೇಕು. ಮಾಸ್ಕ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಹುಸೇನ್ ಬಾಷಾ, ಕರ್ನಾಟಕ ಆರೋಗ್ಯ ಸಂವರ್ಧನ ಸಂಸ್ಥೆ ಯ ಶರಣಬಸಪ್ಪ, ಹನುಮಂತಪ್ಪ ಹಾಗೂ ಸ್ತ್ರೀ ಶಕ್ತಿಯ ಸಂಘಟನೆಗಳ ಮಹಿಳಾ ಸದಸ್ಯರು ಇದ್ದರು.