ಕ್ಷಯ ರೋಗ ಪತ್ತೆ ಹಚ್ಚುವ ಯಂತ್ರದ ಉದ್ಘಾಟನೆ

ಗುಳೇದಗುಡ್ಡ ನ.9- ಕ್ಷಯ ರೋಗಾಣುಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೇ ಹಚ್ಚುವಲ್ಲಿ ಹಾಗೂ ಸೂಕ್ತ ಚಿಕಿತ್ಸೆ ನೀಡಲು ಅನುಕೂಲವಾಗುಂತಹ ಎಲ್‍ಇಡಿ ಮೈಕ್ರೋಸ್ಕೋಪ್ ಯಂತ್ರವನ್ನು ಇಲ್ಲಿನ ಸಮುದಾಯ ಅರೋಗ್ಯ ಕೇಂದ್ರಕ್ಕೆ ಸರ್ಕಾರ ನೀಡಿದೆ. ಇದರಿಂದ ಕ್ಷಯರೋಗವನ್ನು ಹತೋಟಿಗೆ ತರುವಲ್ಲಿ ಸಹಕಾರಿಯಾಗಲಿದೆ ಎಂದು ಬಾದಾಮಿ ತಾಲೂಕು ಆರೋಗ್ಯ ಅಧಿಕಾರಿ ಎಂ.ಬಿ. ಪಾಟೀಲ ಹೇಳಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಲ್‍ಇಡಿ ಮೈಕ್ರೋಸ್ಕೋಪ್ ಯಂತ್ರವನ್ನು ಉದ್ಘಾಟಿಸಿ ಅವರು ಮಾತನಾಡಿ, ಸುಮಾರು ಒಂದುವರೆ ಲಕ್ಷ ರೂ. ವೆಚ್ಚದಲ್ಲಿ ಈ ಯಂತ್ರವನ್ನು ಆಸ್ಪತ್ರೆಗೆ ನೀಡಲಾಗಿದ್ದು, ಇದರಿಂದ ಕ್ಷಯ ರೋಗವನ್ನು ಶೀಘ್ರದಲ್ಲಿ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಬಹುದು ಎಂದರು,
ಈ ಸಂದರ್ಭದಲ್ಲಿ ಸ್ಥಳೀಯ ವೈದ್ಯಾಧಿಕಾರಿ ನಾಗರಾಜ ಕುರಿ, ಆರೋಗ್ಯ ನಿರೀಕ್ಷP Àಟಿ.ಎಚ್. ಮಹಾಲಿಂಗಪೂರ, ಜಿ.ವಿ. ಜೋಶಿ, ರಾಜೇಶ್ವರಿ ಮಸಗಿ, ಸುಪ್ರಿಯಾ ಗೋಟೂರ ಮತ್ತಿತರರು ಇದ್ದರು.