ಕ್ಷಯ ರೋಗ ನಿಯಂತ್ರಣ ಜಾಗೃತಿ ಜಾಥಾ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜು.22: ಪ್ರಾಥಮಿಕ ಆರೋಗ್ಯ ಕೇಂದ್ರ ಸಿರಿಗೇರಿ ವ್ಯಾಪ್ತಿಯ ದಾಸಪುರ ಗ್ರಾಮದಲ್ಲಿ *ಕ್ಷಯ ರೋಗವನ್ನು ಸೋಲಿಸಿ, ದೇಶವನ್ನು ಗೆಲ್ಲಿಸಿ ಎಂಬ ಘೋಷಣೆ ಯೊಂದಿಗೆ ಕ್ಷಯ ರೋಗ ಜಾಗೃತಿ ಜಾಥಾ ನಡೆಯಿತು.
ತಾಲ್ಲೂಕಿನ ದಾಸಪುರ ಗ್ರಾಮದ ಜನರಿಗೆ ಕ್ಷಯ ರೋಗದ ಬಗ್ಗೆ ಮಾಹಿತಿ ನೀಡಿ ಸಂಶಯಾಸ್ಪದ ಕ್ಷಯ ತಪಾಸಣೆಯನ್ನು ಸಮುದಾಯ ಆರೋಗ್ಯ ಅಧಿಕಾರಿ ನಾಗೇಶ್ ನಡೆಸಿದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು, ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಚಿದಾನಂದ, ಕೆಎಚ್‌ಪಿಟಿ ವೀರೇಶ್, ಮಹಾಲಕ್ಷ್ಮಿ, ಆಶಾ ಫೆಸಿಲಿಟೇಟರ್ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.

One attachment • Scanned by Gmail