ಕ್ಷಯ ರೋಗಿಗಳಿಗೆ ಉಚಿತ ಆಹಾರ ಕಿಟ್ ವಿತರಣೆ

ಕಲಬುರಗಿ : ಮಾ.13:ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಜಿಲ್ಲಾ ಶಾಖೆ ವತಿಯಿಂದ ಇಂದು ಕಲಬುರಗಿ ಜಿಲ್ಲಾ ಅಧಿಕಾರಿಗಳ ಸಭಾಂಗಣದಲ್ಲಿ ಕಲಬುರಗಿ ಜಿಲ್ಲೆಯ ಕ್ಷಯ ರೋಗಿಗಳಿಗೆ ಉಚಿತ ಆಹಾರ ಕಿಟ್‍ಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಜಶೇಖರ್ ಎಸ್. ಮಾಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅಪ್ಪಾರಾವ ಅಕ್ಕೋಣೆ ಅವರು ಉಪಸಭಾಪತಿ ಅರುಣಕುಮಾರ ಲೋಯಾ, ಗೌ. ಕಾರ್ಯದರ್ಶಿ ರವೀಂದ್ರ ಶಾಬಾದಿ, ಖಜಾಂಚಿ ಭಾಗ್ಯಲಕ್ಷ್ಮಿ ಎಮ್. ಹಾಗೂ ಸದಸ್ಯರಾದ ಜಿ. ಎಸ್ ಪದ್ಮಾಜಿ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಯಾದ ಡಾ. ಚಂದ್ರಕಾಂತ ನರಿಬೋಳ, ಇವರುಗಳಿಂದ ಕ್ಷಯ ರೋಗಿಗಳಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು,

  ಈ ಸಂದರ್ಭದಲ್ಲಿ ಮಂಜುನಾಥ ಕಂಬಾಳಿಮಥ, ಗುಂಡಪ್ಪ ಡೊಡ್ಡಮನಿ, ಸಂತೋಷ ಕುಡಳ್ಳಿ,  ಆರೋಗ್ಯ ಇಲಾಖೆಯ ನೌಕರರು ಉಪಸ್ಥಿತರಿದ್ದರು.