ಕ್ಷಯ ರೋಗವನ್ನು ಇಲ್ಲವಾಗಿಸೋಣ

ಸಂಡೂರು :ಮಾ:26: ರೋಗ ಹಲವಾರು ಕಾರಣಗಳಿಗೆ ಬರುತ್ತವೆ ಅದರೆ ಅವು ಬರದಂತೆ ತಡೆಯುವುದು ಒಂದು ನಿಯಮವಾದರೆ ಮತ್ತೊಂದು ಬಂದ ತಕ್ಷಣ ಚಿಕಿತ್ಸೆ ಪಡೆಯಲು ಮುಂದಾದರೆ ಕ್ಷಯದಂತಹ ರೋಗವನ್ನು ಈ ದೇಶ ಬಿಟ್ಟು ತೊಲಗಿಸಲು ಸಾಧ್ಯವಾಗುತ್ತದೆ ಎಂದು ಡಾ. ಫರಾನಾ ಅಹ್ಮದ್ ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲು ಹೋಬಳಿಯ ತೋರಣಗಲ್ಲಿನಲ್ಲಿ ವೈರಾಡ್ ಟಿ.ಬಿ. ರೀಚ್ ಯೋಜನೆ ಮತ್ತು ಸ್ಪೂರ್ತಿ ಸ್ತ್ರೀಶಕ್ತಿ ಸ್ವ ಸಹಾಯ ಗುಂಪುಗಳು, ಆರೋಗ್ಯ ಇಲಾಖೆಯ ಸಂಯುಕ್ತಾಶ್ಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆಯ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ ಈಗಾಗಲೇ ತೋರಣಗಲ್ಲು ಮತ್ತು ತೋರಣಗಲ್ಲು ರೈಲ್ವೆ ನಿಲ್ದಾಣದಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆಯನ್ನು ಮಾಡಲಾಗಿದ್ದು ಇದರಲ್ಲಿ ಅನುಮಾನ ಬಂದ 34 ಜನರ ಟಿ.ಬಿ ಲಕ್ಷಣ ಉಳ್ಳ ಜನರ ಕಫ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ 2 ಪಾಜಿಟೀವ್ ಬಂದ ಪರಿಣಾಮ ಸರ್ಕಾರ ಅವರಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡುತ್ತಿದೆ, ಅದ್ದರಿಂದ ಯಾರಾದರೂ ಕ್ಷಯ ರೋಗದ ಲಕ್ಷಣಗಳು ಕಂಡ ಬಂದ ತಕ್ಷಣ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಿದರೆ ತಕ್ಷಣ ಅವರಿಗೆ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ, ಅದರಲ್ಲಿ ರೋಗಬರದಂತೆ ತಡೆಯಲು ಪ್ರಯತ್ನ ಮಾಡುವುದು ಮತ್ತು ರೋಗ ಬಂದಾಗ ತಕ್ಷಣ ಚಿಕಿತ್ಸೆ ಪಡೆದರೆ ಅದು ಹರಡದಂತೆ ತಡೆಯಲು ಸಹಕಾರಿಯಾಗುತ್ತದೆ, ಇಂತಹ ರೋಗವನ್ನು ಇಡೀ ದೇಶದಿಂದಲೇ ಮುಕ್ತ ಗೊಳಿಸಲು ಆರೋಗ್ಯ ಇಲಾಖೆ ಪಣ ತೊಟ್ಟಿದೆ, ಅದರೆ ಅದಕ್ಕೆ ಸಾರ್ವಜನಿಕರ ಸಹಕಾರಿ ಅತಿ ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಬಸವೇಶ್ ಅವರು ಮಾತನಾಡಿ ಕ್ಷಯ ವಾಸಿಯಾಗುವಂತಹ ರೋಗವಾಗಿದೆ, ಬಹಳಷ್ಟು ಜನ ಇದು ವಾಸಿಯಾಗದಂತಹ ರೋಗವೆಂದು ಭಾವಿಸಿ ಮುಜುಗರಕ್ಕೆ ಒಳಗಾಗಿ ಚಿಕಿತ್ಸೆಗೆ ಬರದ ಸಾವನ್ನಪ್ಪುತ್ತಾರೆ, ಅಲ್ಲದೆ ಇದು ಹರಡುವಂತೆ ಮಾಡುತ್ತಾರೆ, ಅದ್ದರಿಂದ ಇದು ಪೂರ್ಣ ಪ್ರಮಾಣದಲ್ಲಿ ಗುಣಪಡಿಸುವಂತಹ ರೋಗವಾಗಿದೆ, ಯಾರೂ ಭಯಪಡದೇ ಚಿಕಿತ್ಸೆಗೆ ಬನ್ನಿ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಮೈರಾಡ್ ಸಂಸ್ಥೆಯ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನ, ರಾಜ್ಯ ಕಾರ್ಯಕ್ರಮ ಅಧಿಕಾರಿ ಭೀಮರಾವ್ ಮಂಗಣ್ಣನವರ, ಜೆ.ಎಸ್.ಡಬ್ಲ್ಯೂ ನ ಅಧಿಕಾರಿ ರಾಜನ್.ಎನ್.ಪಿ. ನಾಗನಗೌಡ, ರಾಜೇಶ್ವರಿ, ಶಿವರುದ್ರಮ್ಮ, ಉಡೇದ ನೀಲಮ್ಮ, ಕ್ಷೇತ್ರ ಆರೋಗ್ಯ ಆಧಿಕಾರಿ ಕೆ.ಶಿವಪ್ಪ, ಡಾ. ದೀಪಾ ಪಾಟೀಲ್, ಮಂಜುನಾಥ, ಆಶಾಬಸಮ್ಮ, ಮಂಜುಳಾ ಹಾಗೂ ತೋರಣಗಲ್ಲು ಠಾಣೆಯ ಪೋಲಿಸ್ ಆಧಿಕಾರಿಗಳು ಸಹ ಕ್ಷಯ ಓಡಿಸುತ್ತೇವೆ ಎನ್ನುವ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ತೋರಣಗಲ್ಲು ಹಾಗೂ ರೈಲ್ವೆ ನಿಲ್ದಾಣದಲ್ಲಿ ಜಾಗೃತಿ ಜಾಥದ ಬೃಹತ್ ಮೆರವಣಿಗೆಯನ್ನು ನಡೆಸಲಾಯಿತು.