ರಾಯಚೂರು,ಜು.೨೬-
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪ್ರೌಢಶಾಲೆ ಖಾನಾಪುರ್ ಇವರ ಸಂಯುಕ್ತಾಶ್ರಯದಲ್ಲಿ ರಾಯಚೂರು ತಾಲೂಕಿನ ಸರ್ಕಾರಿ ಪ್ರೌಢಶಾಲೆ, ಊಡಮಗಲ್ ಖಾನಾಪುರದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕ್ಷಯ ರೋಗ ಕುರಿತು ಜಾಗೃತಿ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಂಚಾಲಕರಾದ ಡಾ. ದಂಡಪ್ಪ ಬಿರಾದಾರ್ ಮಾತನಾಡುತ್ತಾ ಇದೊಂದು ಸಾಮಾನ್ಯವಾಗಿ ಕಫದಲ್ಲಿ ಮೈಕೋ ಬ್ಯಾಕ್ಟೀರಿಯಾ ಎಂಬ ಸೂಕ್ಷ್ಮ ಕ್ರಿಮಿಗಳಿರುವ ಮೂಲಕ ಬರುವುದು .ರೋಗಿಗಳು ಕೆಮ್ಮಿದಾಗ ಸೀನಿದಾಗ ಅದು ಗಾಳಿಯ ಮೂಲಕ ಆರೋಗ್ಯವಂತ ಮನುಷ್ಯನ ದೇಹ ಸೇರುತ್ತವೆ. ಇದರಿಂದ ಈ ರೋಗ ಹರಡುತ್ತದೆ.
ಇದರ ಪ್ರಮುಖ ಲಕ್ಷಣವೇನೆಂದರೆ ನಿರಂತರವಾಗಿ ವ್ಯಕ್ತಿಗೆ ಹೆಚ್ಚು ಕೆಮ್ಮು ಇರುವುದು ಕೆಮ್ಮಿದಾಗ ಕಫ ಬರುವುದು ಜ್ವರ ಅದರಲ್ಲಿ ಸಹ ಸಾಯಂಕಾಲ ಜ್ವರ ಹೆಚ್ಚಾಗಿರುವುದು. ಕೆಲವೊಂದು ಸಲ ಕಫದಲ್ಲಿ ರಕ್ತ ಬೀಳುವುದು ಎದೆಯಲ್ಲಿ ನೋವು ವ್ಯಕ್ತಿಯ ತೂಕ ಕಡಿಮೆಯಾಗುವುದು. ಇದರ ಪ್ರಮುಖ ಲಕ್ಷಣವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ವಿರೀಶ್ ಅಂಗಡಿ ಅವರು ಕ್ಷಯ ರೋಗಕ್ಕೆ ಔಷಧವಿದೆ ಇದನ್ನು ಬಂದಾಗ ರೋಗಿಯು ವೈದ್ಯರ ಹತ್ತಿರ ಹೋಗಿ ಸಲಹೆಯನ್ನು ಪಡೆದುಕೊಂಡು ರೋಗವನ್ನು ನಿವಾರಿಸಬಹುದೆಂದು ಹೇಳಿದರು.
ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ನಾಗರಾಜ್ ರವರು ಈ ರೋಗ ಹೇಗೆ ಬರುತ್ತದೆ. ಈ ರೋಗದಲ್ಲಿರುವ ಪ್ರಕಾರಗಳು ಎಷ್ಟು. ಈ ರೋಗ ಲಕ್ಷಣಗಳೇನು ಈ ರೋಗ ಬಂದಾಗ ನಾವು ಯಾವ ರೀತಿ ವೈದ್ಯರ ಹತ್ತಿರ ಹೋಗಿ ಸಲಹೆ ಪಡೆದುಕೊಳ್ಳಬಹುದು ಈ ರೋಗವನ್ನು ಸಂಪೂರ್ಣವಾಗಿ ನಮ್ಮ ದೆಹಯದಿಂದ ನಿರ್ಣಯ ಮಾಡಲು ಜನಸಾಮಾನ್ಯರು ಮತ್ತು ವಿದ್ಯಾರ್ಥಿಗಳು ಮಾಡಬೇಕಾದ ಅಂಶಗಳು ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುಹಾಗೆ ಸಮಗ್ರವಾದ ರೀತಿಯಲ್ಲಿ ಮಾಹಿತಿಯನ್ನು ನೀಡಿದರು. ವಾಗೀಶ್ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಕೊನೆಯಲ್ಲಿ ವಂದಿಸಿದರು.